ನ್ಯೂಸ್

ಹಣ ಎಣಿಸುವಾಗ ಹಾಡಹಗಲೇ ಕುತ್ತಿಗೆಗೆ ಚಾಕು ಇಟ್ಟು 2 ಕೋಟಿ ದೋಚಿದ ದರೋಡೆಕೋರರು| Robbery

ಎಂಜಿನಿಯರ್ ಒಬ್ಬ ಜರ್ಮನಿಯಿಂದ ಯಂತ್ರ ತರಿಸಿಕೊಳ್ಳುವುದಕ್ಕೆಂದು ರೂಪಾಯಿಯನ್ನ ಡಾಲರ್‌ಗೆ ಎಕ್ಸ್‌ಚೇಂಜ್ ಮಾಡಿಸಲು ಬಂದಿದ್ದರು. ಈ ಸಮಯದಲ್ಲಿ ದರೋಡೆಕೋರರು 2 ಕೋಟಿ ಎಗರಿಸಿ ಪರಾರಿಯಾದ ಘಟನೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಎಂಎಸ್ ಪಾಳ್ಯದ ಎಕೆ ಎಂಟರ್ ಪ್ರೈಸಸ್‌ನಲ್ಲಿ ನಡೆದಿದೆ.

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಹಾಡಹಗಲೇ 2 ಕೋಟಿ ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಡಾಲರ್ ಎಕ್ಸ್‌ಚೇಂಜ್‌ಗೆ ಎಂದು ಎರಡು ಕೋಟಿ ಹಿಡಿದು ಬಂದವನ ಕುತ್ತಿಗೆಯ ಮೇಲೆ ಚಾಕು ಇಟ್ಟು ರಾಬಲಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ಸ್ನೇಹಿತರ ಮೂಲಕ ಬೆಂಜಮಿನ್ ಹರ್ಷ ಎಂಬಾತನ ಪರಿಚಯವಾಗಿದೆ. ಬೆಂಜಮಿನ್ 2 ಕೋಟಿ ಹಣವನ್ನು ತೆಗೆದುಕೊಂಡು ವಿದ್ಯಾರಣ್ಯಪುರದ ಎಂಎಸ್ ಪಾಳ್ಯ ಸರ್ಕಲ್ ಬಳಿ ಬರುವಂತೆ ಹೇಳಿದ್ದಾರೆ.

ಕೆಂಗೇರಿಯ ಶ್ರೀಹರ್ಷ, ಕೋಲ್ಡ್ ಪ್ರೆಸ್ಸಡ್ ಆಯಿಲ್ ಉದ್ಯಮವನ್ನು ಆರಂಭಿಸಲೆಂದು ಸ್ನೇಹಿತರ ಬಳಿ 2 ಕೋಟಿ ಹಣ ಸಾಲ ಪಡೆದು ಜರ್ಮನಿಯಿಂದ ಯಂತ್ರ ತರಿಸಲು ಪ್ಲಾನ್​ ಮಾಡಿದ್ದರು. ಹಾಗಾಗಿ 2 ಕೋಟಿ ಹಣವನ್ನ USDT ಕರೆನ್ಸಿಗೆ ಬದಲಾಯಿಸಬೇಕಾಗಿತ್ತು.

(ಏಜೆನ್ಸೀಸ್)

ಇನ್ನೂ ಈ ಘಟನೆ ಸಂಬಂಧ ಶ್ರೀಹರ್ಷ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದು, ರಾಬರಿ ಬಗ್ಗೆ ಬೆಂಜಮಿನ್ ಹರ್ಷ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಆತ ಬಂದ ಬಳಿಕ, 2 ಕೋಟಿ ಹಣವನ್ನು ಬೆಂಜಮಿನ್ ಮತ್ತು ಅವರ ಜೊತೆಯಲ್ಲಿದ್ದ ಇನ್ನಿಬ್ಬರು ವ್ಯಕ್ತಿಗಳು ಎಣಿಸುತ್ತಿರುವಾಗ ಎಂಎಸ್ ಪಾಳ್ಯ ಸರ್ಕಲ್ ಬಳಿ ಇರುವ ಎಕೆ ಎಂಟರ್‌ಪ್ರೈಸಸ್ ಎಂಬ ಮಳಿಗೆಗೆ ಏಕಾಏಕಿ 6 ರಿಂದ 7 ಜನರ ಗುಂಪೊಂದು ನುಗ್ಗಿದೆ. ದರೋಡೆಕೋರರು ಚಾಕು ತೋರಿಸಿ 2 ಕೋಟಿ ನಗದು ಹಣ ಮತ್ತು ನಾಲ್ಕು ಮೊಬೈಲ್‌ಗಳನ್ನ ಕಿತ್ತುಕೊಂಡು, ಚೀಲಕ್ಕೆ ತುಂಬಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.