ನ್ಯೂಸ್

ಟ್ರಾಫಿಕ್​ ಪೊಲೀಸರಿಂದಲೇ ರಸ್ತೆ ದುರಸ್ತಿ! ಬಿಬಿಎಂಪಿ ವಿರುದ್ಧ ಜನಾಕ್ರೋಶ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳೇ ಮೋಡ ಕವಿದ ವಾತಾವರಣದಲ್ಲಿ ನಿದ್ದೆ ಮಾಡ್ತಿದ್ದೀರಾ? ಎಂದು ಜನರು ಪ್ರಶ್ನಿಸಿದ್ದಾರೆ.

ಮೈಸೂರು ಬ್ಯಾಂಕ್ ಸರ್ಕಲ್ ರಸ್ತೆಯ ಪೆಟ್ರೋಲ್ ಬಂಕ್ ಎದುರು ಸಿಗ್ನಲ್ ಬಳಿ ರಸ್ತೆ ಗುಂಡಿ ಬಿದ್ದಿದ್ದು, ಮೃತ್ಯು ಕೂಪದಂತಾಗಿದೆ. ರಸ್ತೆ ಮಧ್ಯೆ ಪಾಲಾದಂತೆ ಎರಡು ಅಡಿ ಗುಂಡಿ ಬಿದ್ದಿದ್ದು, ಟ್ರಾಫಿಕ್ ಪೊಲೀಸರೇ ಅದನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ. ಇದನ್ನು ನೋಡಿದ ಸಾರ್ವಜನಿಕರು ಬಿಬಿಎಂಪಿ ಅಧಿಕಾರಿಗಳೇ ಏನ್​ ಮಾಡ್ತಿದ್ದಿರೀ? ವಾಹನಗಳ ನಿಯಂತ್ರಣ ಮಾಡಬೇಕಾದ ಪೊಲೀಸ್​ ಸಿಬ್ಬಂದಿಯೇ ರಸ್ತೆ ದುರಸ್ತಿ ಮಾಡಬೇಕಾ? ನಮ್ಮ ದುಡ್ಡಲ್ಲಿ ಟ್ಯಾಕ್ಸ್ ಕಟ್ಟಿಸಿಕೊಳ್ಳೋಕೆ ಆಗುತ್ತೆ. ರಸ್ತೆ ಸರಿ ಮಾಡೋಕೆ ಆಗಲ್ವಾ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಟ್ರಾಫಿಕ್​ ಪೊಲೀಸರು ರಸ್ತೆ ದುರಸ್ತಿ ಮಾಡುತ್ತಿರುವ ದೃಶ್ಯ ವೈರಲ್​ ಆಗಿದ್ದು, ಸಾರ್ವಜನಿಕರು ಪ್ರಶಂಸಿದ್ದಾರೆ.