ನ್ಯೂಸ್

ನದಿಹರಳಹಳ್ಳಿ ರಸ್ತೆ ಅಭಿವೃದ್ಧಿಪಡಿಸಲು ಕರವೇ ಆಗ್ರಹ

Haveri - Kariyappa Aralikatti

ರಾಣೆಬೆನ್ನೂರ: ತಾಲೂಕಿನ ನದಿಹರಳಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆ, ಗ್ರಾಪಂಗೆ ತೆರಳುವ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಅವರಿಗೆ ಮನವಿ ಸಲ್ಲಿಸಿದರು.

ಸಂಟನೆಯ ತಾಲೂಕು ಅಧ್ಯಕ್ಷ ಕೋಟ್ರೇಶ ಗುತ್ತೂರ ಮಾತನಾಡಿ, ಗ್ರಾಮದ ಸರ್ಕಾರಿ ಶಾಲೆಯ ರಸ್ತೆ ಸಂರ್ಪೂಣ ಹಾಳಾಗಿ ಹೋಗಿದೆ. ಡಾಂಬರೀಕರಣವಿಲ್ಲದ ಕಾರಣ ಮಳೆಯಿಂದಾಗಿ ಸಂರ್ಪೂಣ ಕೆಸರುಗದ್ದೆಯಂತಾಗಿದ್ದು ವಿದ್ಯಾಥಿರ್ಗಳು ಓಡಾಡಲು ಆಗದ ಪರಿಸ್ಥಿತಿ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ರಸ್ತೆ ಅಭಿವೃದ್ಧಿಪಡಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಮುಖರಾದ ಶಿವಪ್ಪ ಮರಡಿ, ಸೋಮರೆಡ್ಡಿ ಹಾದಿಮನಿ, ಮಲ್ಲಿಕಾರ್ಜುನ ಅಡಿವೆಪ್ಪನವರ, ಬಸಣ್ಣ ದೊಡ್ಡಕೊಪ್ಪದ, ಸಂಜೀವ ಬಾಕಿರ್, ಯೋಗೇಶ ದೊಡ್ಡಗೌಡ್ರ, ಮಲ್ಲಿಕಾರ್ಜುನ ತೆಗ್ಗಿನ ಮತ್ತಿತರರು ಇದ್ದರು.