ಅಭಿವೃದ್ಧಿ ಹೆಸರಿನಲ್ಲಿ ಜನರಿಗೆ ಕಿರಿಕಿರಿ | ಧೂಳಿನಿಂದ ಜನರ ಆರೋಗ್ಯದಲ್ಲಿ ಏರುಪೇರು
ಚೇತನ್ ಚಕ್ಕೆರೆ ಬಿಡದಿ
ಪಟ್ಟಣದ ಅಂದಗೆಡಿಸುತ್ತಿದ್ದ ವಾಹನ ಸವಾರರು, ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಫುಟ್‌ಪಾತ್ ಒತ್ತುವರಿ ತೆರವಿನ ಬಳಿಕ ರಸ್ತೆ ಅಭಿವೃದ್ಧಿ ಹಾಗೂ ಯುಜಿಡಿ ಕಾಮಗಾರಿಗೆ ರಸ್ತೆ ಅಗೆದು ಹಾಗೆಯೇ ಬಿಟ್ಟಿರುವುದು ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದೆ.
ಫುಟ್‌ಪಾತ್ ಒತ್ತುವರಿಯಿಂದಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪುರಸಭೆಯಿಂದ ಫುಟ್ ಪಾತ್ ಒತ್ತುವರಿ ತೆರವು ಮಾಡುವ ನಿರ್ಧಾರ ಮಾಡಿ ಜೆಸಿಬಿ ಸಹಾಯದಿಂದ ರಸ್ತೆಗೆ ಬಂದಿದ್ದ ಅಂಗಡಿಗಳ ಮೇಲ್ಛಾವಣಿಗಳು, ಮನೆಗಳ ಮೆಟ್ಟಿಲುಗಳನ್ನು ತೆರವು ಮಾಡಲಾಗಿತ್ತು.
ಫುಟ್‌ಪಾತ್ ತೆರವು ನಂತರ ರಸ್ತೆಗಳ ವಿಸ್ತರಣೆ ಹಾಗೂ ಯುಜಿಡಿ ಕಾಮಗಾರಿ ನಡೆಸುವ ಆಲೋಚನೆ ಮಾಡಿ ಪುರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ ಸದಸ್ಯರ ಸಮ್ಮತಿ ಪಡೆದು ರಸ್ತೆ ವಿಸ್ತರಣೆ, ಯುಜಿಡಿ ಕಾಮಗಾರಿ, ವಾಕಿಂಗ್ ಪಾತ್ ಮಾಡುವ ಕಾಮಗಾರಿಗೂ ಚಾಲನೆ ನೀಡಲಾಯಿತು. ಈ ಹಿಂದೆ ಇದ್ದ ಡಾಂಬರಿನ ರಸ್ತೆ ಅಗೆದು ಯುಜಿಡಿ ಕಾಮಗಾರಿ ಮಾಡಿ ಹಾಗೆಯೇ ಬಿಡಲಾಗಿದೆ. ಪ್ರಮುಖವಾಗಿ ರೈಲ್ವೆ ನಿಲ್ದಾಣದ ರಸ್ತೆ, ನಲ್ಲಿಗುಡ್ಡೆ ಕೆರೆಗೆ ಹೋಗುವ ರಸ್ತೆ ಸೇರಿ ಇನ್ನೂ ಹಲವು ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಿತ್ತು ಹಾಕಿರುವುದು ಈಗ ಸಮಸ್ಯೆ ತಂದೊಡ್ಡಿದೆ.
ನಗರದಲ್ಲಿ ಪ್ರಮುಖ ರಸ್ತೆಗಳೂ ಸೇರಿ ಅನೇಕ ಬಡಾವಣೆಗಳಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಹಾಗೂ ರಸ್ತೆ ಬದಿಯ ಚರಂಡಿ ನಿರ್ಮಾಣದಂತಹ ಕಾಮಗಾರಿಗಳಿಗೆ ರಸ್ತೆ ಅಗೆಯಲಾಗಿದೆ. ಈ ಮೊದಲೇ ರಸ್ತೆಗಳಲ್ಲಿದ್ದ ತಗ್ಗುಗಳು ಮತ್ತು ಸದ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಕೈಗೊಂಡಿರುವ ಅಗೆತದಿಂದ ಎಲ್ಲೆಡೆ ಭಾರಿ ಪ್ರಮಾಣದ ಮಣ್ಣು ಸಂಗ್ರಹಗೊಳ್ಳುತ್ತಿದೆ. ರಸ್ತೆಯಲ್ಲಿ ಸಂಗ್ರಹಗೊಳ್ಳುತ್ತಿರುವ ಮಣ್ಣಿನಿಂದಾಗಿ ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದAತೆಯೇ ಧೂಳು ಮೇಲೇಳುತ್ತಿದೆ. ಇದರಿಂದಾಗಿ ವಾಹನ ಸವಾರರಷ್ಟೇ ಅಲ್ಲ, ರಸ್ತೆಯ ಇಕ್ಕೆಲಗಳ ವರ್ತಕರು, ನಿವಾಸಿಗಳು ಸಮಸ್ಯೆ ಎದುರಿಸುತ್ತಿz್ದÁರೆ.
ರಸ್ತೆ ಬದಿಯ ವಾಣಿಜ್ಯ ಮಳಿಗೆಗಳ ವರ್ತಕರು ಧೂಳಿನಿಂದಾಗಿ ವಹಿವಾಟಿನಲ್ಲಿ ತೊಂದರೆಗೆ ಸಿಲುಕಿದ್ದರೆ, ರಸ್ತೆ ಬದಿಯ ಮನೆಯಲ್ಲಿ ವಾಸವಾಗಿರುವವರು ಧೂಳಿನಿಂದಾಗಿ ಬೇಸತ್ತು ದಿನವಿಡೀ ಮನೆಗಳ ಬಾಗಿಲು ಮುಚ್ಚಿಕೊಳ್ಳುವಂತಾಗಿದೆ. ಅಷ್ಟೇ ಅಲ್ಲದೆ, ರಸ್ತೆಯಲ್ಲಿ ಸಂಚರಿಸುವವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೋಗುವ ಸ್ಥಿತಿಯಿದೆ. ಅನೇಕರು ಧೂಳಿನಿಂದಾಗಿ ಕೆಮ್ಮು, ಉಸಿರಾಟದ ಸಮಸ್ಯೆಗೆ ಸಿಲುಕುತ್ತಿದ್ದಾರೆ. .
ಗುಂಡಿಬಿದ್ದ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಪುರಸಭೆ ಅಧಿಕಾರಿಗಳು ರಸ್ತೆಗೆ ಡಾಂಬರೀಕರಣ ಮಾಡಿಸಬೇಕು. ಇಲ್ಲವೇ ರಸ್ತೆ ದುರಸ್ತಿ ಕಾರ್ಯವನ್ನಾದರೂ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ವಾಣಿಜ್ಯ ಮಳಿಗೆಗಳ ಮಾಲೀಕರು ಎಚ್ಚರಿಸಿz್ದÁರೆ.
ರೈಲ್ವೆ ನಿಲ್ದಾಣದ ರಸ್ತೆ ಸೇರಿ ಇತರ ರಸ್ತೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಅಗೆದು ಗುಂಡಿ ನಿರ್ಮಿಸಿ ಹಾಗೆಯೇ ಬಿಡಲಾಗಿದೆ. ಇದರಿಂದ ಜಲ್ಲಿ ಕಲ್ಲುಗಳು ಮೇಲೆ ಎದ್ದಿವೆ. ಧೂಳು ಕೂಡ ಜಾಸ್ತಿಯಾಗಿದೆ. ಕನಿಷ್ಠ ಟ್ಯಾಂಕರ್ ಮೂಲಕ ಬೆಳಗ್ಗೆ ಸಂಜೆ ರಸ್ತೆಗೆ ನೀರನ್ನು ಹಾಕಿದರೆ ಧೂಳು ಕಡಿಮೆಯಾಗುತ್ತದೆ. ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿಗಳಿಗೆ ಹೇಳಿದರೆ ಸಬೂಬು ಹೇಳುತ್ತಾರೆ. ಇಂಜಿನಿಯರ್‌ಗಳನ್ನು ಕೇಳಿದರೆ ನಮಗೂ ಇದಕ್ಕೂ ಸಂಬAಧವಿಲ್ಲವೆAಬAತೆ ವರ್ತಿಸುತ್ತಾರೆ. | ಮುತ್ತಣ್ಣ, ಅಂಗಡಿ ಮಾಲೀಕರು