ನರಸಾಪುರ ಬಳಿಯ ರೈತರ ಜಮೀನಿನಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ ರೈತಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿದರು. ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮತ್ತಿತರರಿದ್ದರು. 
ನ್ಯೂಸ್

26ರಂದು ಟ್ರಾಕ್ಟರ್, ಜಾನುವಾರು ಸಮೇತ ರಸ್ತೆ ತಡೆ

ಕೋಲಾರ: ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಅರಣ್ಯ ಭೂಮಿಯನ್ನು 3 ದಿನಗಳೊಳಗೆ ತೆರವುಗೊಳಿಸುವಂತೆ ಆಗ್ರಹಿಸಿ ನ.26ರಂದು ಟ್ರಾಕ್ಟರ್ ಹಾಗೂ ಜಾನುವಾರು ಸಮೇತ ಕೋಲಾರ-ಬಂಗಾರಪೇಟೆ ರಾಜ್ಯ ಹೆದ್ದಾರಿ ತಡೆದು, ಅರಣ್ಯ ಇಲಾಖೆ ಮುಂಭಾಗ ರೈತಸಂಘದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರೈತಸಂಘ ಎಚ್ಚರಿಸಿದೆ.

ನರಸಾಪುರ ಬಳಿ ಒತ್ತುವರಿ ತೆರವು ಮಾಡಿರುವ ರೈತರ ಜಮೀನಿನಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ, ನೂರಾರು ಪೊಲೀಸರು, ಹತ್ತಾರು ಜೆಸಿಬಿಗಳೊಂದಿಗೆ ಬಡ ರೈತರ ಭೂಮಿ ತೆರವುಗೊಳಿಸಿ ಅವರ ಬದುಕನ್ನು ಅರಣ್ಯ ಇಲಾಖೆ ಬೀದಿಗೆ ತಳ್ಳಿದೆ. ಬಡ ರೈತರ ಜಮೀನು ತೆರವುಗೊಳಿಸಿದಂತೆ ೨೪ ಗಂಟೆಯಲ್ಲಿ ಪ್ರಭಾವಿ ರಾಜಕಾರಣಿಗಳ ಅರಣ್ಯ ಭೂಮಿ ಒತ್ತುವರಿಯನ್ನೂ ತೆರವುಗೊಳಿಸಬೇಕು. ಇಲ್ಲವೇ ಈ ಹಿಂದೆ ತೆರವು ಮಾಡಿರುವ ರೈತರ ಭೂಮಿಯನ್ನು ವಾಪಸ್ ಮಾಡಬೇಕು ಎಂದು ಆಗ್ರಹಿಸಿದರು.

ರೈತರು ಅಽಕಾರಿಗಳ ಕೈಕಾಲು ಹಿಡಿದು ಬೇಡಿಕೊಂಡರೂ, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ಉಳಿಸಿಕೊಳ್ಳಲು ಅರಣ್ಯ ಇಲಾಖೆ ಸಮಯ ನೀಡಲಿಲ್ಲ. ಆದರೆ, ಪ್ರಭಾವಿ ರಾಜಕಾರಣಿಗಳು ಸರ್ಕಾರದ ಮೇಲೆ ಒತ್ತಡ ಹಾಕಿಸಿ, ಒಂದು ಫೋನ್ ಕಾಲ್‌ಗೆ ಸರ್ವೇಯನ್ನೇ ಮುಂದೂಡಿ ತಾಂತ್ರಿಕ ಅಡಚಣೆ ಎಂದು ಅಧಿಕಾರಿಗಳು ಹೇಳುತ್ತಿರುವುದು ವಿಪರ್ಯಾಸ ಎಂದರು.

10 ಸಾವಿರ ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಯನ್ನು ಉಳಿಸಿರುವ ಅರಣ್ಯಾಽಕಾರಿಗಳಿಗೆ ಬೆಂಬಲವಾಗಿ ರೈತಸಂಘ ನಿಂತಿತ್ತು. ಆದರೆ, ಕಾನೂನಿನಲ್ಲಿ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಎಂಬ ಸಂದೇಶ ರವಾನೆ ಸಲ್ಲ. ಅರಣ್ಯದ ಅಸ್ತಿತ್ವ ಉಳಿಸುವುದೇ ನಿಮ್ಮ ಧ್ಯೇಯವಾಗಿದ್ದರೆ ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ನೂರಾರು ಎಕರೆ ಅರಣ್ಯ ಭೂಮಿಯನ್ನೂ ತೆರವುಗೊಳಿಸಿ ಎಂದು ನಾರಾಯಣಗೌಡ ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಹೊಸಹುಡ್ಯ, ಜೀಗಲಕುಂಟೆ ಅರಣ್ಯ ಸರ್ವೇ ನಂ.1 ಮತ್ತು 2ರಲ್ಲಿನ 62 ಎಕರೆ ಸರ್ವೇ ಮಾಡಲು ತಾಂತ್ರಿಕ ದೋಷವೇ?, ನ.6ರಂದು ನಿಗದಿಯಾಗಿದ್ದ ದಿನಾಂಕ ಮುಂದೂಡಿ 14 ದಿನ ಕಳೆದರೂ ಮತ್ತೆ ದಿನಾಂಕ ನಿಗದಿ ಮಾಡದೇ ಇರಲು ಕಾರಣವೇನು?, ಸರ್ಕಾರದ ಒತ್ತಡವೇ? ಇಲ್ಲವೇ ಅಽಕಾರವನ್ನು ಪ್ರಭಾವಿಗಳಿಗೆ ಮಾರಾಟ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಸಾವಿರಾರು ರೈತರ ಗಂಜಿಯನ್ನು ಕಸಿದು ಬೀದಿಗೆ ತಳ್ಳಿ ಪ್ರಾಮಾಣಿಕ ಅಽಕಾರಿಗಳು ಎನಿಸಿಕೊಳ್ಳುವುದು ಸಾಧನೆಯಲ್ಲ. ಪ್ರಭಾವಿಗಳ ಅರಣ್ಯ ಭೂಮಿ ಒತ್ತುವರಿಯನ್ನೂ ತೆರವುಗೊಳಿಸಿ. ಇಲ್ಲದಿದ್ದರೆ ನ.26ರಂದು ರಾಜ್ಯ ಹೆದ್ದಾರಿ ಅರಣ್ಯ ಇಲಾಖೆ ಉಪ ಸಂರಕ್ಷಣಾಽಕಾರಿಗಳ ಕಚೇರಿ ಮುಂದೆ ಟ್ರಾಕ್ಟರ್ ಹಾಗೂ ಜಾನುವಾರು ಸಮೇತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅಽಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಜೆಸಿಬಿಗಳ ದಬ್ಬಾಳಿಕೆ ಪರ್ಯಾಯವಾಗಿ ಟ್ರಾ÷್ಯಕ್ಟರ್‌ಗಳ ಗರ್ಜನೆ ಶುರು ಮಾಡುವ ಮುಖಾಂತರ, ಬಡ ರೈತರ ಭೂಮಿಯನ್ನು ಮರುವಶ ಪಡೆಯುವ ನಿರಂತರ ಹೋರಾಟಕ್ಕೆ ರೈತಸಂಘ ಚಾಲನೆ ನೀಡಲಿದೆ ಎಂದರು.