ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ರಿಯಾಜ್ ನಾಯ್ಕೂನನ್ನು ನಿನ್ನೆ ಅವನ ಊರು ಆವಂತಿಪುರದಲ್ಲೇ ಭಾರತೀಯ ಸೇನಾಪಡೆಗಳು ಹೊಡೆದುರುಳಿಸಿವೆ.
ಮೋಸ್ಟ್ ವಾಂಟೆಡ್ ಟೆರರಿಸ್ಟ್ ರಿಯಾಜ್ ನಾಯ್ಕೂ ಸೇರಿ ಕೆಲವು ಉಗ್ರರು ಅಲ್ಲಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ರಕ್ಷಣಾ ಪಡೆಗಳಿಗೆ ಸಿಕ್ಕಿತ್ತು. ಇದೇ ಮಾಹಿತಿಯನ್ನಾಧರಿಸಿ ಅವರು ಕಾರ್ಯಾಚರಣೆ ನಡೆಸಿದ್ದು. ಕೊನೆಗೂ ಬಿಡಲಿಲ್ಲ. ರಿಯಾಜ್ನನ್ನು ಕೊಂದು ಹಾಕಿದ್ದಾರೆ.
ಆದರೆ ಈ ರಿಯಾಜ್ ನಾಯ್ಕೂ ತನ್ನ ಹಳ್ಳಿಗೆ ಆಗಮಿಸಿದ್ದ ಬಗ್ಗೆ ರಕ್ಷಣಾ ಪಡೆಗೆ ಮಾಹಿತಿ ಕೊಟ್ಟವರು ಯಾರು? ಸಾಮಾನ್ಯವಾಗಿ ಇದನ್ನೆಲ್ಲ ಬಹಿರಂಗಪಡಿಸುವುದಿಲ್ಲ. ಆದರೆ ಈ ಘಟನೆಯಲ್ಲಿ ರಿಯಾಜ್ ಮಾಹಿತಿ ನೀಡಿದವರ ಹೆಸರನ್ನು ಗುಪ್ತಚರ ಇಲಾಖೆ ಮೂಲ ಬಹಿರಂಗಪಡಿಸಿದೆ.
ರಿಯಾಜ್ ತನ್ನ ತಂದೆ-ತಾಯಿಯನ್ನು ನೋಡಲು ಆವಂತಿಪುರದ ಹಳ್ಳಿಗೆ ಬರುತ್ತಿದ್ದಾನೆ ಎಂದು ಗುಪ್ತಚರ ಇಲಾಖೆಗೆ ಮಾಹಿತಿ ಕೊಟ್ಟಿದ್ದು ಇನ್ನೊಂದು ಉಗ್ರಸಂಘಟನೆ. 'ದಿ ರೆಸಿಸ್ಟನ್ಸ್ ಫ್ರಂಟ್' ಎಂಬ ಉಗ್ರಸಂಘಟನೆ ರಿಯಾಜ್ ಬಗ್ಗೆ ಮಾಹಿತಿ ನೀಡಿತ್ತು. ಪಾಕಿಸ್ತಾನಿ ಉಗ್ರರ ಈ ಸಂಘಟನೆ ಕಾಶ್ಮೀರದಲ್ಲಿ ಹೊಸದಾಗಿ ರಚನೆಯಾಗಿದೆ. ಸದ್ಯ ಆನ್ಲೈನ್ನಲ್ಲಿ ವಿಪರೀತ ಸಕ್ರಿಯವಾಗಿದೆ.
ದಿ ರೆಸಿಸ್ಟನ್ಸ್ ಫ್ರಂಟ್ಗೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮೇಲೆ ಅದೇನೋ ಸಿಟ್ಟು. ಈ ಎರಡೂ ಸಂಘಟನೆಗಳ ನಡುವೆ ವೈರತ್ವ. ಇದೇ ಸಿಟ್ಟಿನಲ್ಲಿ ರಿಯಾಜ್ ಬಗ್ಗೆ ಸಂಪೂರ್ಣ ವಿವರಣೆಯನ್ನು ಟಿಆರ್ಎಫ್ ಗುಪ್ತಚರ ಇಲಾಖೆಗೆ ನೀಡಿತ್ತು.
ರಿಯಾಜ್ ನಾಯ್ಕೂ ಮೋಸ್ಟ್ ವಾಂಟೆಡ್ ಉಗ್ರ. ಎಂಟು ವರ್ಷಗಳಿಂದಲೂ ಆತನಿಗಾಗಿ ಭದ್ರತಾ ಪಡೆಗಳು ಹುಡುಕುತ್ತಿದ್ದವು. ಪ್ರತಿ ಬಾರಿಯೂ ತಪ್ಪಿಸಿಕೊಳ್ಳುತ್ತಿದ್ದ. ಈ ಬಾರಿ ಮಿಸ್ ಆಗದ ಹಾಗೆ ಹೊಡೆದು ಉರುಳಿಸಿವೆ. (ಏಜೆನ್ಸೀಸ್)
ಇದನ್ನೂ ಓದಿ: ತೆಲಂಗಾಣದಲ್ಲಿ ಪೊಲೀಸ್ ಪೇದೆಯೇ ಮದ್ಯದ ಕಳ್ಳನಾದಾಗ…!