ನ್ಯೂಸ್

ಗುಜರಾತ್ ಸಚಿವೆ ಆಗಿ ಜಡೇಜಾ ಪತ್ನಿ ರಿವಾಬಾ: ಭಗವದ್ಗೀತೆ ಹಿಡಿದು ಪ್ರಮಾಣವಚನ | Rivaba Jadeja

Rivaba Jadeja: ಇಂದು ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಸಂಪುಟದಲ್ಲಿ ಹಲವು ಬದಲಾವಣೆಗಳು ಆಗಿದ್ದು, ರಾಜ್ಯ ಗೃಹ ಸಚಿವ ಹರ್ಷ ಸಾಂಘ್ವಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮಧ್ಯೆ ಟೀಮ್ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಹಲವರ ಹುಬ್ಬೇರಿಸಿತು.

ರಾಜ್ಯಪಾಲ ಆಚಾರ್ಯ ದೇವವ್ರತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ 26 ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಎಲ್ಲರೂ ತಮ್ಮ ಕೈಯಲ್ಲಿ ಭಗವದ್ಗೀತೆಯನ್ನು ಹಿಡಿದುಕೊಂಡು ಪ್ರಮಾಣವಚನ ಸ್ವೀಕರಿಸಿದರು. ಬಿಜೆಪಿ ಹೈಕಮಾಂಡ್ ಎಲ್ಲಾ ಸಾಮಾಜಿಕ ಮತ್ತು ರಾಜಕೀಯ ಅಂಶಗಳನ್ನು ಪರಿಗಣಿಸಿ, ನೂತನ ಸಚಿವರನ್ನು ಆಯ್ಕೆ ಮಾಡಿತು. ಹೊಸ ಸಂಪುಟಕ್ಕೆ 19 ಹೊಸ ಸದಸ್ಯರು ಸೇರ್ಪಡೆಗೊಂಡಿದ್ದರೆ, ಈ ಹಿಂದೆ ಇದ್ದವರು ರಾಜೀನಾಮೆ ನೀಡಿದ್ದಾರೆ.

ಹೊಸ ಸಂಪುಟದಲ್ಲಿ ಏಳು ಪಾಟಿದಾರ್‌ಗಳು, ಎಂಟು ಒಬಿಸಿಗಳು, ಮೂವರು ಎಸ್‌ಸಿಗಳು, ನಾಲ್ಕು ಎಸ್‌ಟಿಗಳು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಈ 26 ಜನರಲ್ಲಿ ಕೇವಲ ಆರು ಮಂದಿ ಹಳೆಯ ಸಚಿವರು ಹೊಸ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. 2027ರಲ್ಲಿ ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತನ್ನ ಸಂಪುಟದಲ್ಲಿ ಮಹತ್ವದ ಬದಲಾವಣೆಗಳನ್ನೇ ಮಾಡಿದೆ.

ಸಿಎಂ ಭೂಪೇಂದ್ರ ಪಟೇಲ್ ಜತೆಗೆ ಮರು ನೇಮಕಗೊಂಡ ಸಚಿವರಿವರು

  • ರಿಷಿಕೇಶ್ ಪಟೇಲ್ - ವಿಷ್ನಗರ ಶಾಸಕ (ಆರೋಗ್ಯ, ಶಿಕ್ಷಣ, ಕಾನೂನು)
  • ಪ್ರಫುಲ್ ಪನ್ಶೇರಿಯಾ - ಕಮ್ರೇಜ್ ಶಾಸಕ (ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ)
  • ಕುನ್ವರ್ಜಿ ಬವಾಲಿಯಾ - ಜಸ್ದನ್ ಶಾಸಕ (ಜಲಸಂಪನ್ಮೂಲ ಸಚಿವ)
  • ಕನುಭಾಯಿ ದೇಸಾಯಿ - ಪಾರ್ಡಿ ಶಾಸಕ (ಹಣಕಾಸು, ಇಂಧನ, ಪೆಟ್ರೋಕೆಮಿಕಲ್ಸ್ ಇಲಾಖೆಗಳು)
  • ಪುರುಷೋತ್ತಮ್ ಸೋಲಂಕಿ - ಭಾವನಗರ ಗ್ರಾಮಾಂತರ ಶಾಸಕ (ಮೀನುಗಾರಿಕೆ ರಾಜ್ಯ ಸಚಿವ)
  • ಹರ್ಷ ಸಾಂಘ್ವಿ

ಹೊಸದಾಗಿ ನೇಮಕಗೊಂಡ ಸಚಿವರು

1. ನರೇಶ್ ಪಟೇಲ್

2. ದರ್ಶನ ವಘೇಲಾ

3. ಪ್ರದ್ಯುಮಾನ್ ವಾಜಾ

4. ಕಾಂತಿಲಾಲ್ ಅಮೃತಿಯಾ

5. ಮನಿಶಾ ವಕೀಲ್

6. ಅರ್ಜುನ್ ಮೊದ್ವಾಡಿಯಾ

7. ಜೀತು ವಘಾನಿ

8. ಕೌಶಿಕ್ ವೆಕಾರಿಯಾ

9. ಸ್ವರೂಪ್ಜಿ ಠಾಕೂರ್

10. ತ್ರಿಕಮ್ ಚಂಗಾ

11. ಜಯರಾಮ್ ಗಮಿತ್

12. ರಿವಾಬಾ ಜಡೇಜಾ

13. ಪಿ.ಸಿ. ಬರಂದಾ

14. ರಮೇಶ ಕಟಾರ

15. ಈಶ್ವರ್ ಸಿಂಗ್ ಪಟೇಲ್

16. ಪ್ರವೀಣ್ ಮಾಳಿ

17. ರಮಣಭಾಯಿ ಸೋಲಂಕಿ

18. ಕಮಲೇಶ್ ಪಟೇಲ್

19. ಸಂಜಯ್ ಸಿಂಗ್ ಮಹಿದಾ