ಬೆಂಗಳೂರು: ಕಾಂತಾರ ಎನ್ನುವ ಟೈಟಲ್ ಕೇಳಿದ್ರೆ ಸಾಕು ಮೈ ರೋಮಾಂಚನವಾಗುತ್ತದೆ. ಈ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರು ಹರಸಿ..ಹಾರೈಸಿ ಮೆಚ್ಚಿದ ಸಿನಿಮಾ ಕಾಂತಾರ. ಈ ಸಿನಿಮಾ ತಂಡ ಟೀಸರ್, ಪೋಸ್ಟರ್ ರೀಲಿಸ್ ಮಾಡಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕ್ಯೂರಾಸಿಟಿ ಮೂಡಿಸಿದೆ. ಈ ಕುರಿತಾಗಿ ನಟ ರಿಷಬ್ ಶೆಟ್ಟಿ ಅವರು ಮಾತನಾಡಿ ಕೆಲವು ಇಂಟ್ರಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ , ಕಾಂತಾರ ಸಿನಿಮಾದ ಸಂಪೂರ್ಣ ಸಕ್ಸಸ್ನ್ನು ನಾನು ಕನ್ನಡಿಗರಿಗೆ ಅರ್ಪಿಸುತ್ತೇನೆ. ಕಾಂತಾರ ಸಿನಿಮಾಗಿಂತ ಮೊದಲು ಏನು ನಡೆಯಿತ್ತು ಎನ್ನುವುದನ್ನು ನಾವು ಹೇಳಲು ಹೋರಟಿದ್ದೇವೆ. ಈ ಸಿನಿಮಾಕ್ಕೂ ನಿಮ್ಮ ಆಶಿರ್ವಾದ ಇರಲಿ. ಈ ಹಿಂದೆ ನೀವು ನೀಡಿದ್ದ ಪ್ರೋತ್ಸಾಹದ ಜವಾಬ್ದಾರಿಯೊಂದಿಗೆ ಈ ಚಿತ್ರ ತಂಡ ಈಗಲೂ ಕೆಲಸ ಮಾಡಲಿದೆ. ಕಾಂತಾರ ಅಧ್ಯಾಯದ 1ನ್ನು ಈಗ ಶುರು ಮಾಡಿದ್ದೇವೆ. ಕಾಂತರ ಸಿನಿಮಾವನ್ನು ಈಗಾಗಲೇ ನೋಡಿ ಅದ್ಭುತವಾದ ಹಿಟ್ ಸಿನಿಮಾವಾಗಿ ಮಾಡಿದ್ದೀರ ಎಂದಿದ್ದಾರೆ.
ಈ ಸಿನಿಮಾ ಬಗ್ಗೆ ನಾನು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಮಾತಿಗಿಂತ ಕೆಲಸ ಮುಖ್ಯವಾಗುತ್ತದೆ. ಈಗಾಗಲೇ ಸಿನಿಮಾ ಕುರಿತಾಗಿ ಒಂದು ಗ್ಲಿಮ್ಸ್, ಪೋಸ್ಟರ್ ಕೂಡಾ ಬಿಟ್ಟಿದ್ದೇವೆ. ಅದೇ ಸಿನಿಮಾ ಬಗ್ಗೆ ಒಂದುಷ್ಟು ಕಥೆ ಹೇಳುತ್ತದೆ. ಕನ್ನಡ ಕಲಾವಿದರಿಗೆ ಮೊದಲ ಆದ್ಯತೆಯನ್ನು ಈ ಸಿನಿಮಾದಲ್ಲಿ ನೀಡಲಾಗುತ್ತದೆ. ನಾವು ಈ ಸಿನಿಮಾವನ್ನು ಮಾಡಿದ್ದೇ ಮೊದಲು ಕನ್ನಡದಲ್ಲಿ. ಈ ಬಾರಿ ಮತ್ತಷ್ಟು ಹೊಸ ಪ್ರತಿಭೆಗಳನ್ನು ಹುಡುಕುತ್ತಿದ್ದೇವೆ. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಕಲಾವಿದರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಥಿಯೇಟರ್ ಆರ್ಟಿಸ್ಟ್ಗಳನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಕಥೆ ಏನು ಕೇಳುತ್ತದೆ ಎಂಬುವ ಆಧಾರದ ಮೇಲೆ ಚಿತ್ರತಂಡ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಈ ಸಿನಿಮಾ ಹೀರೋಯಿನ್ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ ರಿಷಬ್ ಅವರು, ಈ ಸಿನಿಮಾಕ್ಕಲೆ ನನ್ನನ್ನು ಮಾತ್ರ ನಾನು ಪೈನಲ್ ಮಾಡಿದ್ದೇನೆ. ಈ ಸಿನಿಮಾ ಪಾತ್ರ ಆಯ್ಕೆ ಕುರಿತಾಗಿ ಯಾವುದೇ ರಿವೀಲ್ ಮಾಡುವುದಿಲ್ಲ. ಟೆಕ್ನಿಕಲ್ ಟೀಮ್ನಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸ ತಂತ್ರಜ್ಞರೂ ಕೂಡಾ ಸೇರಲಿದ್ದಾರೆ. ಸಿನಿಮಾದಲ್ಲಿ ಮೊದಲಿದ್ದವರು ಹಾಗೂ ಹೊಸ ಕಲಾವಿದರ ಬಳಗ ಇರಲಿದೆ ಎಂದು ಹೇಳಿದ್ದಾರೆ.