ನ್ಯೂಸ್

PHOTO FEATURE | ರಿಷಭ್ ಶೆಟ್ಟಿ, ಮನೀಶ್​ ಪಾಂಡೆ ಮುಂತಾದ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ!

Webdesk - Athul Damale

ಬೆಂಗಳೂರು: ‘ಏರೋ ಇಂಡಿಯಾ-2023’ರ ಉದ್ಘಾಟನೆ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಿದರು. ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತಲುಪಿದ ಅವರನ್ನು ರಾಜ್ಯಪಾಲ ಥಾವರ್​​ಚಂದ್​ ಗೆಹ್ಲೋಟ್​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡರು.

ಇದಾದ ಮೇಲೆ ನಿನ್ನೆ ರಾತ್ರಿ ಬೆಂಗಳೂರಿನ ರಾಜಭವನದಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಈ ಸಂದರ್ಭ ಕನ್ನಡ ಸ್ಟಾರ್‌ಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ದರು. ಈ ಔತಣ ಕೂಟದಲ್ಲಿ ನಟರಾದ ಯಶ್, ರಿಷಭ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರ್, ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಮುಂತಾದವರು ಭಾಗಿಯಾಗಿದ್ದರು

ಕ್ರೀಡಾ ಕ್ಷೇತ್ರದಿಂದ ಕ್ರಿಕೆಟಿಗ ಮನೀಶ್ ಪಾಂಡೆ, ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯವಾಗಿರುವ ಯೂಟ್ಯೂಬರ್ ಶ್ರದ್ಧಾ ಕೂಡ ಭಾಗಿಯಾಗಿದ್ದರು. 