ನ್ಯೂಸ್

ರಿಷಭ್ ಕೊಡಲಿರೋ ಸರ್​ಪ್ರೈಸ್ ಏನಿರಬಹುದು...

ಲಾಕ್‌ಡೌನ್ ಮುಗಿದು ಚಿತ್ರೀಕರಣ ಚಟುವಟಿಕೆಗಳಿಗೆ ಅನುಮತಿ ಸಿಗುತ್ತಿದ್ದಂತೆಯೇ, ಕನ್ನಡ ಚಿತ್ರರಂಗ ಚುರುಕಾಗಿದೆ. ಈಗಾಗಲೇ ಕೆಲವರು ಚಿತ್ರಗಳ ಮುಹೂರ್ತ ಮಾಡಿದ್ದಾರೆ. ಇನ್ನೂ ಕೆಲವರು ಚಿತ್ರೀಕರಣ ಶುರು ಮಾಡಿದ್ದಾರೆ. ಆದರೆ, ರಿಷಬ್ ಶೆಟ್ಟಿ ಅಭಿನಯದ ಹೊಸ ಚಿತ್ರ ಸದ್ದಿಲ್ಲದೆ ಶೂಟಿಂಗ್ ಮುಗಿಸಿ, ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎನ್ನುವುದು ವಿಶೇಷ.

ಈಗ ಅವರು ತಮ್ಮ ಹೊಸ ಚಿತ್ರದ ಫಸ್ಟ್​ಲುಕ್​ ಮತ್ತು ಹೆಸರುನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ಗುರುವಾರ ಬೆಳಿಗ್ಗೆ ತಮ್ಮ ಚಿತ್ರದ ಒಂದಿಷ್ಟು ವಿವರಗಳೊಂದಿಗೆ ಭೇಟಿಯಾಗುವುದಾಗಿ ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'Surprise ಅಂತ ಹಾಕಿದ್ವಲ್ಲ... ಅದ್ಕೆ ಸ್ವಲ್ಪ ಬೇಗನೇ ಬಂದ್ವಿ. Sorry, ಜಾಸ್ತಿ ದಿನ ಮನೇಲಿ ಸುಮ್ಮ್ನೆ ಕುತ್ಕೊಳ್ಳೊಕ್ ಆಗ್ದೆ ಸಿನೆಮಾ ಮಾಡ್ಕೊಂಡ್ ಬಂದಿದ್ದೀವಿ, ಅದ್ನ ಹೇಳೋಣ ಅಂತ ಬಂದಿದ್ದು. Title, Firstlook ಹಾಗೂ ಉಳಿದ ವಿವರಗಳೊಂದಿಗೆ ನಾಳೆ ಮತ್ತೆ ಭೇಟಿಯಾಗೋಣ' ಎಂದು ಹೇಳಿದ್ದಾರೆ. ಜತೆಗೆ ಚಿತ್ರದ ಹಾಡಿನ ಒಂದು ವಿಡಿಯೋ ಸಹ ಶೇರ್​ ಮಾಡಿಕೊಂಡಿದ್ದಾರೆ.

ಅಂದಹಾಗೆ, ಚಿಕ್ಕಮಗಳೂರು ಕಡೆ ಹೋಗಿ ಸದ್ದಿಲ್ಲದೆ 45 ದಿನಗಳ ಕಾಲ ಚಿತ್ರೀಕರಣ ಮುಗಿಸಲಾಗಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜತೆಗೆ ಗಾನವಿ, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ‘ಲಾಫಿಂಗ್’ ಬುದ್ಧ’ ಚಿತ್ರವನ್ನು ನಿರ್ದೇಶಿಸಿರುವ ಭರತ್ ರಾಜ್ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.