ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಹಿಂದುವಿರೋಧಿ ತಪ್ಪುಮಾಹಿತಿಗಳು ಹೆಚ್ಚಾಗಿವೆ ಎಂಬ ಆತಂಕಕಾರಿ ವಿಷಯವೊಂದು ಹೊರಬಿದ್ದಿದೆ. ಅಧ್ಯಯನವೊಂದರ ಅಂಶಗಳು ಈ ಮಾಹಿತಿಯನ್ನು ಹೊರಗೆಡಹಿದೆ.
ಸೋಷಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಆ್ಯಪ್ಗಳಲ್ಲಿ ಹಿಂದುಗಳ ವಿರುದ್ಧವಾಗಿ ತಪ್ಪು ಮಾಹಿತಿಗಳನ್ನು ಹರಿಬಿಡುತ್ತಿರುವ ಪ್ರಕರಣಗಳು ಕಳೆದ ಕೆಲವು ದಿನಗಳಿಂದ ಹೆಚ್ಚಾಗಿದೆ ಎಂಬುದು ಅಮೆರಿಕದ ರಟ್ಜರ್ಸ್ ಯುನಿವರ್ಸಿಟಿಯ ಅಧ್ಯಯನದಲ್ಲಿ ತಿಳಿದುಬಂದಿದೆ.
ಹಾಗಂತ ಹಿಂದುವಿರೋಧಿ ಸಂದೇಶಗಳೆಲ್ಲವೂ ಪಾಕಿಸ್ತಾನದಿಂದಲೇ ಪೋಸ್ಟ್ ಆಗುತ್ತಿಲ್ಲ. ಇರಾನ್ ಮತ್ತಿತರ ದೇಶಗಳಿಂದಲೂ ಈ ತಪ್ಪು ಮಾಹಿತಿ ಪೋಸ್ಟ್ ಆಗುತ್ತಿದೆ ಎಂದು ಈ ಅಧ್ಯಯನ ಹೇಳಿದೆ.