ನ್ಯೂಸ್

ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವೆ ಬಿರುಕು?: ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ರಾಮ್ ಮಾಧವ್ |Ram Madhav

Ram Madhav: ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದೇ ಸೈದ್ಧಾಂತಿಕ ಕುಟುಂಬ ಭಾಗ ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಶನಿವಾರ (ಆಗಸ್ಟ್​,16) ಹೇಳಿದರು.ಅಲ್ಲದೆ, ಸಂಘ ಮತ್ತು ಬಿಜೆಪಿ ನಡುವಿನ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.

ಈ ಬಗ್ಗೆ ಮಾತನಾಡಿದ ರಾಮ್ ಮಾಧವ್, ಬಿಜೆಪಿ ರಾಜಕೀಯದಲ್ಲಿ ಕೆಲಸ ಮಾಡಿದರೆ, ಆರ್‌ಎಸ್‌ಎಸ್ ಇದರ ಹೊರಗೆ ಸಾಮಾಜಿಕ ಸೇವೆಯ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಮಾಧವ್ ಒತ್ತಿ ಹೇಳಿದರು.ಅಲ್ಲದೆ, ಸಂಘ ಮತ್ತು ಬಿಜೆಪಿ ನಡುವೆ ಯಾವುದೇ ಉದ್ವಿಗ್ನತೆ ಇಲ್ಲ ಎಂದು ತಿಳಿಸಿದರು. ಸಂಘಕ್ಕೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಹಿನ್ನೆಲೆಯ ಜನರು ಸ್ವಾಗತಾರ್ಹರು ಎಂದು ಹೇಳಿದ್ದಾರೆ.

ಅಲ್ಲದೆ, ಕೆಲವರು, ರಾಜಕೀಯ ಕಾರಣಗಳಿಂದಾಗಿ, ಯಾವಾಗಲೂ ಆರ್‌ಎಸ್‌ಎಸ್ ವಿರೋಧಿಸಿದ್ದಾರೆ. ಉದಾಹರಣೆಗೆ, ಕೆಲವು ಕಾಂಗ್ರೆಸ್ ನಾಯಕರು. ರಾಜಕೀಯ ಕಾರಣಗಳಿಗಾಗಿ ವಿರೋಧಿಸಿದರು. ಆದರೆ, ಎಲ್ಲರಿಗೂ ಆರ್‌ಎಸ್‌ಎಸ್ ರಾಜಕೀಯದಿಂದ ದೂರವಿದ್ದು ಹಿಂದೂ ಧರ್ಮ ಮತ್ತು ದೇಶಕ್ಕಾಗಿ ಕೆಲಸ ಮಾಡುತ್ತದೆ ಎಂದು ತಿಳಿದಿದೆ. ಸಂಘಟನೆಯು ವ್ಯಕ್ತಿ ನಿರ್ಮಾಣದ ಕೆಲಸ ಮಾಡುತ್ತಿದೆ. ನಮ್ಮ ಕೆಳ ಹಂತದ ಸಂಘಟನೆಯಲ್ಲಿ, ವೈವಿಧ್ಯಮಯ ಹಿನ್ನೆಲೆಯ ಎಲ್ಲರಿಗೂ ಕೆಲಸ ಮಾಡಲು ಅವಕಾಶ ಸಿಗುತ್ತದೆ ಎಂದು ರಾಮ್ ಮಾಧವ್ ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ಆರ್‌ಎಸ್‌ಎಸ್ ಅನ್ನು ಹೊಗಳಿದ್ದಕ್ಕಾಗಿ ಕಾಂಗ್ರೆಸ್ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಕರೆದ ನಂತರ ಮಾಧವ್ ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್​)