FIR : ಮಹಾರಾಷ್ಟ್ರ ಮಾಜಿ ಸಿಎಂ ಏಕನಾಥ್ ಶಿಂಧೆ ಬಗ್ಗೆ ಅಲ್ಲಿನ ಹಾಸ್ಯನಟ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಮ್ರಾ ಮಾಡಿದ ಅಪಾಹಾಸ್ಯ(ಆರೋಪ) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜ್ಯದ್ಯಂತ ಆಕ್ರೋಶ ಭುಗಿಲೆದ್ದಿದೆ.
ಇದನ್ನೂ ಓದಿ:Basangouda Patil Yatnal Statement | ನಾನೇನಾದ್ರೂ ಮುಖ್ಯಮಂತ್ರಿ ಆದ್ರೆ ಒಂದು ಸಾವಿರ JCB ಆರ್ಡರ್ ಮಾಡ್ತೀನಿ
ಶಿವಸೇನಾ ನಾಯಕರು ನೀಡಿದ ದೂರಿನ ಮೇರೆಗೆ ಕುನಾಲ್ ಕಮ್ರಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೆ, ಸ್ಟ್ಯಾಂಡ್ಅಪ್ ಕಾರ್ಯಕ್ರಮದ ಸ್ಟೂಡಿಯೋವನ್ನು ಧ್ವಂಸಗೊಳಿಸಿದ್ದಕ್ಕಾಗಿ 40 ಜನರ ಶಿವಸೇನಾ ಕಾರ್ಯರ್ತರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಹಾಸ್ಯಮಯ ಮತ್ತು ತೀಕ್ಷಣವಾದ ಹೇಳಿಕೆಗಳಿಗೆ ಹೆಸರುವಾಸಿಯಾದ ಕುನಾಲ್ ಕಮ್ರಾ, ಇದೀಗ ತಮ್ಮ ಕಾರ್ಯಕ್ರಮವೊಂದರಲ್ಲಿ ''ಏಕನಾಥ್ ಶಿಂಧೆ ಬಿಜೆಪಿಯೊಂದಿಗೆ ಹೊಂದಣಿಕೆ ಮಾಡಿಕೊಂಡು ' ದೇಶದ್ರೋಹಿ' ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ'' ಎಂದು ಹಾಸ್ಯ ಮಾಡಿರುವ ವಿಡಿಯೋದಿಂದ ವಿವಾದಕ್ಕೆ ಸಿಲುಕಿದ್ದಾರೆ. ಅಲ್ಲದೇ ಇವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಈ ಹೇಳಿಕೆಗಳು ಶಿವಸೇನೆಯ (ಶಿಂಧೆ ಬಣ) ನಾಯಕರನ್ನು ಕೆರಳಿಸಿದ್ದು, ಭಾನುವಾರ ಮುಂಬೈನ ಖಾರ್ ಪ್ರದೇಶದಲ್ಲಿರುವ ಸ್ಟುಡಿಯೋ ಮತ್ತು ಹೋಟೆಲ್ ಯುನಿಕಾಂಟಿನೆಂಟಲ್ ಅನ್ನು ಧ್ವಂಸಗೊಳಿಸಿದರು. ವೀಡಿಯೊವನ್ನು ಈ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಹೀಗಾಗಿ, 40 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿವಾದದ ಕೆಲವು ಗಂಟೆಗಳ ನಂತರ, ಹಾಸ್ಯನಟ ಸಣ್ಣ ಪೋಸ್ಟ್‌ನೊಂದಿಗೆ ಪ್ರತಿಕ್ರಿಯಿಸಿದ್ದಾರೆ. "ಮುಂದಿರುವ ಏಕೈಕ ದಾರಿ" ಎಂದು ಬರೆದುಕೊಂಡು ತನ್ನ ಎಕ್ಸ್ ಖಾತೆಯಲ್ಲಿ ಸಂವಿಧಾನದ ಸಣ್ಣ ಪ್ರತಿಯನ್ನು ಹಿಡಿದಿರುವ ಫೋಟೋದೊಂದಿಗೆ ಹಂಚಿಕೊಂಡಿದ್ದಾರೆ.
ಇನ್ನು ಈ ವಿವಾದ ರಾಜ್ಯದ್ಯಂತ ಭುಗಿಲೆದಿದ್ದ ಹಿನ್ನೆಲೆ ಆಡಳಿತ ಮತ್ತು ವಿರೋಧ ಪಕ್ಷಗಳು ಕೆಸರೆರಚಾಟದಲ್ಲಿ ಮುಳುಗಿವೆ. ಶಿವಸೇನಾ ಶಾಸಕರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ ಮತ್ತು ಕಮ್ರಾಗೆ ಎರಡು ದಿನಗಳ ಗಡುವು ನೀಡಿದ್ದಾರೆ. ಅದು ವಿಫಲವಾದರೆ ಪೊಲೀಸ್ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಕಾಮಿಡಿಯನ್ ಕುನಾಲ್ ಕಮ್ರಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.(ಏಜೆನ್ಸೀಸ್)