ನ್ಯೂಸ್

ರಿಕ್ಷಾ ಎಳೆಯುವವನ ಮಗಳ ಮದುವೆಗೆ ಶುಭ ಕೋರಿದ ಪ್ರಧಾನಿ: ಪತ್ರ ನೋಡಿ ಸಂತಸ ವ್ಯಕ್ತಪಡಿಸಿದ ಕುಟುಂಬ ಹೇಳಿದ್ದು ಹೀಗೆ...

malli

ವಾರಾಣಸಿ: ರಿಕ್ಷಾ ಎಳೆಯುವ ಮಂಗಲ್​ ಕೇವತ್​ ಎಂಬುವವರ ಮಗಳ ಮದುವೆಗೆ ಶುಭಾಶಯ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ರವಾನಿಸಿದ್ದಾರೆ.

ಪ್ರಧಾನಿ ಮೋದಿ ಅವರು ದತ್ತು ಪಡೆದ ದೊಮ್ರಿ ಎಂಬ ಗ್ರಾಮದ ನಿವಾಸಿ ಮಂಗಲ್​ ತಮ್ಮ ಮಗಳ ಮದುವೆಯ ಕರೆಯೋಲೆಯನ್ನು ಪ್ರಧಾನಿಗೆ ಕೊಟ್ಟಿದ್ದರು. ಇದಕ್ಕೆ ಉತ್ತರವಾಗಿ ಪ್ರಧಾನಿ ಕಚೇರಿಯಿಂದ ಶುಭಾಶಯ ಪತ್ರ ಮದುವೆ ದಿನವಾದ ಫೆ.12ರಂದೇ ಬಂದಿದೆ.

ಮದುವೆಯ ಮೊದಲ ಆಮಂತ್ರಣವನ್ನು ಫೆ.8ರಂದು ದೆಹಲಿಗೆ ಪ್ರಧಾನಿ ಅವರ ಕೈಯಲ್ಲಿ ಕೊಟ್ಟು ಬಂದಿದ್ದೆ. ಅವರು ಶುಭಾಶಯ ಕೋರಿ ಪತ್ರ ಬರೆದಿರುವುದು ನಮಗೆ ಸಂತಸ ತಂದಿದೆ ಎಂದು ಮಂಗಲ್​ ತಿಳಿಸಿದರು.

ಪ್ರಧಾನಿ ಅವರು ಬರೆದ ಪತ್ರ ನಮ್ಮನ್ನು ತಲುಪಿದೆ. ಪ್ರಧಾನಿಯಾದವರು ನನ್ನಂತಹ ಸಾಮಾನ್ಯನ ಬಗ್ಗೆಯೂ ಇಷ್ಟು ಕಾಳಜಿ ವಹಿಸುತ್ತಾರೆ ಎನ್ನುವುದಕ್ಕೆ ಈ ಪತ್ರ ಉದಾಹರಣೆ ಅಲ್ಲವೆ ಎಂದು ಖುಷಿ ಹಂಚಿಕೊಳ್ಳುತ್ತಾರೆ ಮಂಗಲ್​.

ಸದ್ಯದಲ್ಲೇ ಉತ್ತರ ಪ್ರದೇಶಕ್ಕೆ ಆಗಮಿಸಲಿರುವ ಪ್ರಧಾನಿ ಅವರನ್ನು ಭೇಟಿ ಮಾಡಲು ನಾವು ಉತ್ಸುಕರಾಗಿದ್ದೇವೆ. ಅವರ ಭೇಟಿಯಾಗಿ ನಮ್ಮ ಸಂಕಷ್ಟಗಳನ್ನು ಅವರ ಬಳಿ ಹೇಳಿಕೊಳ್ಳಬೇಕು ಎನ್ನುತ್ತಾರೆ ಮಂಗಲ್​ ಮಡದಿ ರೇಣು ದೇವಿ. (ಏಜೆನ್ಸೀಸ್​)