ನ್ಯೂಸ್

ಏಷ್ಯಾದ ಶ್ರೀಮಂತ ಕುಟುಂಬ ಯಾವುದು ಗೊತ್ತಾ?

ನವದೆಹಲಿ: ಕರೊನಾ ಮಹಾಮಾರಿ ಉದ್ಯಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರೂ, ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಗೆ ಮಾತ್ರ ಹೆಚ್ಚಿನ ಆರ್ಥಿಕ ಸಮಸ್ಯೆ ಉಂಟು ಮಾಡಿಲ್ಲ. ಏಕೆಂದರೆ, ಏಷ್ಯಾದ ಎರಡನೇ ಅತಿ ಶ್ರೀಮಂತ ಕುಟುಂಬಕ್ಕಿಂತ ದುಪ್ಪಟ್ಟು ಆಸ್ತಿ ಹೊಂದಿರುವ ಅಂಬಾನಿ ಕುಟುಂಬ, ಏಷ್ಯಾದ ಅತಿ ಶ್ರೀಮಂತ ಕುಟುಂಬ ಎಂಬ ಖ್ಯಾತಿಯನ್ನು ಮುಂದುವರಿಸುವಲ್ಲೂ ಯಶಸ್ವಿಯಾಗಿದೆ.

ಬ್ಲೂಮ್​ಗ್ ಸಂಸ್ಥೆ ಪ್ರಕಟಿಸಿದ ಏಷ್ಯಾದ ಅತಿ ಶ್ರೀಮಂತರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಈ ಮಾಹಿತಿ ನೀಡಲಾಗಿದೆ. ವರ್ಷಾರಂಭದಲ್ಲಿ ಜಿಯೋ ದೂರವಾಣಿ ಸಂಸ್ಥೆ ಮೇಲೆ ಬಂಡವಾಳ ಹೆಚ್ಚಿಸಿದ ಮುಕೇಶ್, ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್​ಆರ್​ವಿಎಲ್) ಮೇಲೂ ಹೂಡಿಕೆ ಅಧಿಕಗೊಳಿಸಿದರು. ಹಲವು ಪ್ರಮುಖ ಖಾಸಗಿ ಈಕ್ವಿಟಿ ಫಂಡ್ ಮತ್ತು ತಂತ್ರಜ್ಞಾನ ಕಂಪನಿಗಳು ಮುಕೇಶ್ರ ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದು ಅವರ ಉದ್ಯಮ ವಿಸ್ತರಣೆ ಯೋಜನೆಗೆ ಸಹಕಾರಿಯಾಗಿ ಅವರ ಆಸ್ತಿ ಮೌಲ್ಯ ವೃದ್ಧಿಸಲು ಕಾರಣವಾಯಿತು.