ನ್ಯೂಸ್

'ಅಗ್ನಿವೀರ್' ಆರ್​ಎಸ್​ಎಸ್​ ಯೋಜನೆ ಎಂಬ ಸತ್ಯ ಗೊತ್ತಾಗಿದೆ! ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರವು ಕಳೆದ ವರ್ಷ ಪ್ರಾರಂಭಿಸಿದ ಅಗ್ನಿವೀರ್ ಯೋಜನೆ ಆರ್​ಎಸ್​ಎಸ್​ ಹಾಗೂ ಗೃಹ ಸಚಿವಾಲಯದಿಂದ ಬಂದಿದೆಯೇ ಹೊರತು ಸೇನೆಯಿಂದಲ್ಲ ಎಂಬುದನ್ನು ಭಾರತೀಯ ಸೇನೆಯ ನಿವೃತ್ತ ಹಿರಿಯ ಅಧಿಕಾರಿಗಳು ಹೇಳಿದ್ದಾರೆ ಎಂದು ಸಂಸತ್​ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ದೇಶದಾದ್ಯಂತ ಅಗ್ನಿವೀರ್ ಯೋಜನೆಯ ಬಗ್ಗೆ ಜನರು ಧನಾತ್ಮಕವಾಗಿ ಮಾತನಾಡಿದರು. ಆದರೆ ಭಾರತದ ಯುವಕರು ಮಾತ್ರ ನಾಲ್ಕು ವರ್ಷಗಳ ನಂತರ ಅವರನ್ನು ಸೇನೆಯಿಂದ ತೊರೆಯಲು ಕೇಳಿಕೊಂಡಿರುವ ಬಗ್ಗೆ ನಮಗೆ ತಿಳಿಸಿದರು ಎಂದು ರಾಹುಲ್ ಗಾಂಧಿ ಸಂಸತ್​ನಲ್ಲಿ ಪ್ರಸ್ತಾಪಿಸಿದ್ದಾರೆ.

ರಾಹುಲ್ ಗಾಂಧಿ ಸಂಸತ್​ನಲ್ಲಿ ಮಾತನಾಡುತ್ತಾ, ಅಗ್ನಿವೀರ್ ಯೋಜನೆಯನ್ನು ಸೇನೆಯ ಮೇಲೆ ಹೇರಲಾಗುತ್ತಿದೆ. ಅಲ್ಲದೆ ಜನರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ ಮತ್ತೆ ಅವರನ್ನು ಸಮಾಜಕ್ಕೆ ಹಿಂತಿರುಗಿಸಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಹಿಂಸಾಚಾರ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂಬುದನ್ನು ನಿವೃತ್ತ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ನಿವೃತ್ತವ ಸೇನಾ ಅಧಿಕಾರಿಗಳು ಹೇಳಿರುವ ಪ್ರಕಾರ, ಅಗ್ನಿವೀರ್ ಯೋಜನೆಯನ್ನು ಆರಂಭಿಸಲು ಸೇನೆ ಮುಂದಾಗಿಲ್ಲ. ಬದಲಾಗಿ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸೇನೆಯ ಮೇಲೆ ಈ ಯೋಜನೆಯನ್ನು ಒತ್ತಾಯಿಸಿದ್ದಾರೆ ಎಂದು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮಾತನಾಡುತ್ತಾ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)