vijayavani folder
ನ್ಯೂಸ್

ಪರೀಕ್ಷೆ ಮುಗಿದ ಆರೇ ದಿನಗಳಲ್ಲಿ ಫಲಿತಾಂಶ

ಬೆಂಗಳೂರು ವಿಶ್ವವಿದ್ಯಾಲಯ ನಡೆಸಿದ್ದ ಬಿ.ಎಡ್. ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು 6 ದಿನಗಳಲ್ಲಿ ಪ್ರಕಟಿಸಿದೆ.

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ನಡೆಸಿದ್ದ ಬಿ.ಎಡ್. ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು 6 ದಿನಗಳಲ್ಲಿ ಪ್ರಕಟಿಸಿದೆ.

ನ.6ರಂದು ನಡೆಸಲಾಗಿದ್ದ ಪರೀಕ್ಷೆಯಲ್ಲಿ 2,469 ವಿದ್ಯಾರ್ಥಿಗಳ 9,817 ಉತ್ತರ ಪತ್ರಿಕೆಗಳ ಮೌಲ್ಯವಾಪನವನ್ನು ತ್ವರಿತವಾಗಿ ಪೂರ್ಣಗೊಳಿಸಿ, ಶುಕ್ರವಾರ ಲಿತಾಂಶೋ ಘೋಷಿಸಿದೆ.

ರಾಜ್ಯದಲ್ಲಿ 16,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನ.16 ಕೊನೆಯ ದಿನಾಂಕವಾಗಿರುವುದರಿಂದ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ವಿವಿ ಫಲಿತಾಂಶವನ್ನು ಪ್ರಕಟಿಸಿದೆ ಎಂದು ವಿವಿಯ (ಮೌಲ್ಯಮಾಪನ) ಕುಲಸಚಿವ ಪ್ರೊ.ಆರ್. ಶಿವಪ್ಪ ಹೇಳಿದ್ದಾರೆ.

ವಿದ್ಯಾರ್ಥಿಗಳು ಉದ್ಯೋಗಾವಕಾಶದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ.ಸಿ. ಶಿವರಾಜು ಹೇಳಿದ್ದಾರೆ.