ನ್ಯೂಸ್

ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ

ಎನ್.ವೆಂಕಟೇಶ್

 ಶಿಡ್ಲಟ್ಟ: ಜಿಲ್ಲೆಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಸಾರಥ್ಯದಲ್ಲಿ) ಸಂಟನೆ ಪ್ರಬಲವಾಗಿ ಬೆಳೆದಿದ್ದು, ಪದಾಧಿಕಾರಿಗಳು ಪ್ರಾಮಾಣಿಕವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಸುರೇಶ್​ಬಾಬು ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ತಾಲೂಕು ಟಕದ ಪದಾಧಿಕಾರಿಗಳ ಆಯ್ಕೆ ಮಾಡಿ ಮಾತನಾಡಿದರು.

ಸಮಾಜದಲ್ಲಿ ದುರ್ಬಲರ ಪರವಾಗಿ ಸಂಟನೆ ಕಾರ್ಯನಿರ್ವಹಿಸಬೇಕು. ಕನ್ನಡ ಭಾಷೆ, ನೆಲ, ಜಲ, ಸಂಸತಿ ವಿಚಾರ ಬಂದಾಗ ಎಲ್ಲರೂ ಒಂದಾಗಿ ಹೋರಾಡಿ ಕನ್ನಡ ಭಾಷೆ ಉಳಿಸಿ ಬೆಳೆಸಬೇಕು. ಸಂಟನೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಸಮಾಜ ಗುರುತಿಸುತ್ತದೆ ಜತೆಗೆ ಗೌರವವು ಸಿಗುತ್ತದೆ. ಸಂಟನೆಯನ್ನು ತಾಲೂಕಿನ ಮೂಲೆ ಮೂಲೆಯಲ್ಲಿ ಬಲಿಷ್ಠಗೊಳಿಸಬೇಕು ಎಂದರು. ತಾಲೂಕು ಅಧ್ಯಕ್ಷ ನಾಸಿರ್​ ಅಹ್ಮದ್​ ಮಾತನಾಡಿ, ನಮ್ಮ ಮನೆ ಕರ್ನಾಟಕ, ಸಂಕಷ್ಟದಲಿರುವವರಿಗೆನೆರವು ನೀಡಿ ಸಂಟನೆ ಬಲಿಷ್ಠಗೊಳಿಸುವ ಕೆಲಸ ಮಾಡಬೇಕು ಎಂದರು.ರಮಾಮಣಿ ಗಂಗಾಧರ್​, ಸಲೀಂ, ನಾಸಿರ್​ ಅಹಮ್ಮದ್​, ವೆಂಕಟೇಶಪ್ಪ, ನೂರುಲ್ಲಾ, ಚನ್ನಕೃಷ್ಣ, ಮಂಜುನಾಥ್​ ಇದ್ದರು.