ಶಿರಾಳಕೊಪ್ಪ ಪಟ್ಟಣದ ತಡಗಣಿ ಬಳಿಯ ಟಿಸಿ ರಿಪೇರಿ ಕೇಂದ್ರಕ್ಕೆ ಶಾಸಕ ಬಿ.ವೈ. ವಿಜಯೇಂದ್ರ ಭಾನುವಾರ ಭೇಟಿ ನೀಡಿ ಕುಂದುಕೊರತೆ ಆಲಿಸಿದರು. ಕೆ.ಎಸ್. ಗುರುಮೂರ್ತಿ, ಕೊಳಗಿ ರೇವಣಪ್ಪ, ಹನುಮಂತಪ್ಪ ಸಂಕ್ಲಾಪುರ, ಸಿದ್ಲಿಂಗಪ್ಪ, ಸಂಗಮೇಶ ಉಡುಗಣಿ, ತಡಗಣಿ ಮಂಜಪ್ಪ, ಎಚ್.ಎಂ. ಚಂದ್ರೇಶೇಖರ ಇತರರಿದ್ದರು. 
ನ್ಯೂಸ್

ರೈತರ ಸಮಸ್ಯೆಗೆ ಶೀಘ್ರ ಸ್ಪಂದಿಸಿ

ಶಿವಕುಮಾರ ಎಸ್.ಪಿ.

ಶಿರಾಳಕೊಪ್ಪ: ರೈತರ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಗೆ ತಕ್ಷಣ ಸ್ಪಂದಿಸಬೇಕು. ಲಂಚದ ಬೇಡಿಕೆಯಿಟ್ಟು ರೈತರಿಗೆ ತೊಂದರೆ ನೀಡುವ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.

ಶಿರಾಳಕೊಪ್ಪ ಹತ್ತಿರದ ತಡಗಣಿ ಬಳಿಯ ಟಿಸಿ ದುರಸ್ತಿ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ ಅವರು, ಮೆಸ್ಕಾಂ ಅಧಿಕಾರಿಗಳ ಜತೆ ಸಭೆ ನಡೆಸಿ, ರೈತರ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸಮಾಲೋಚಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಶಯದಂತೆ ಸ್ಥಾಪಿಸಿದ ಈ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸಬೇಕು. ಆದರೆ ಅಧಿಕಾರಿಗಳು ಟಿಸಿ ದುರಸ್ತಿಗೆ ಹದಿನೈದು ದಿನ ತೆಗೆದುಕೊಂಡರೆ ಬೆಳೆಗಳ ಹಾಳಾಗುತ್ತವೆ. ಹಾಗಾಗಿ ಬೇಗ ಸ್ಪಂದಿಸಬೇಕು ಎಂದರು.

ರೈತರಿಗೆ ಅನುಕೂಲವಾಗುವಂತೆ ತಕ್ಷಣ ಟಿಸಿ ವಿತರಿಸಬೇಕು. ರೈತರೊಂದಿಗೆ ಶಾಂತಿಯುತವಾಗಿ ವರ್ತಿಸಿ, ಸಂಯಮ ಕಾಪಾಡಿ. ಸಮಸ್ಯೆಗಳ ಬಗ್ಗೆ ಸ್ಪಂದಿಸಲು ಒಬ್ಬ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ತಿಳಿಸಿದರು. ರೈತರು ಟಿಸಿ ಮತ್ತು ಲೈನ್‌ಮನ್ ಬದಲಾವಣೆಗೆ ಸಂಬಂಧಿಸಿ ತಮ್ಮ ಅಹವಾಲುಗಳನ್ನು ಶಾಸಕರ ಎದುರು ಮಂಡಿಸಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಕೊಳಗಿ ರೇವಣಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತಪ್ಪ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ಲಿಂಗಪ್ಪ, ಪಿಎಸಿಎಸ್ ಅಧ್ಯಕ್ಷ ಸಂಗಮೇಶ, ತಡಗಣಿ ಮಂಜಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ಚಂದ್ರೇಶೇಖರ, ಮೆಸ್ಕಾಂ ಅಧಿಕಾರಿಗಳಾದ ಎಇಇ ಮಂಜಪ್ಪ, ಎ.ಇ. ರಮೇಶ ಆಚಾರ್ಯ, ರಾಜಪ್ಪ, ಮಂಜುನಾಥ, ಬಿ.ಎಸ್. ಬಾಲರಾಜ್ ಇತರರಿದ್ದರು.