ಭದ್ರಾವತಿ: ನಗರದ ಲಯನ್ಸ್‌ಕ್ಲಬ್ ಶುಗರ್‌ಟೌನ್‌ನಿಂದ ಗಾಂಧಿ ಜಯಂತಿ, ಲಾಲ್ ಬಹದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.
ಲಯನ್ಸ್ ಪದಾಧಿಕಾರಿಗಳು ಕೋಟ ಶಿವರಾಮ ಕಾರಂತರ ವನದಲ್ಲಿ ಶ್ರಮದಾನ ನಡೆಸಿದರು. ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕ್ಲಬ್ ಮಹಾಪೋಷಕರಾದ ಡಾ. ಟಿ.ನರೇಂದ್ರಭಟ್, ಕೆ.ಅನಂತ ಕೃಷ್ಣನಾಯಕ್, ಮದಿಯಲಗನ್ ಅವರಿಗೆ ಸನ್ಮಾನಿಸಲಾಯಿತು.
ಕ್ಲಬ್ ಅಧ್ಯಕ್ಷ ಆರ್.ಉಮೇಶ್, ತಮ್ಮೇಗೌಡ, ಎಂ.ಸಿ.ಯೋಗೀಶ್, ಡಾ. ಗುರುರಾಜ್, ಲಿಂಗೋಜಿರಾವ್, ನಾಗರಾಜ್, ಕೃಷ್ಣ, ಮಧುಸೂಧನ್ ಇತರರಿದ್ದರು.