ಕೋಲಾರ: ನಿವೇಶನ, ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಮೀಸಲಿಟ್ಟಿರುವ ಜಮೀನುಗಳು ಖಾಸಗಿ ವ್ಯಕ್ತಿಗಳ ಪಲಾಗುತ್ತಿದ್ದು, ಇದನ್ನು ರಕ್ಷಣೆ ಮಾಡುವುದು ಸೇರಿ ಹಲವು ವಿಷಯಗಳಿಗೆ ಚರ್ಚೆ ನಡೆಸಿ, ರ್ನಿಣಯ ಕೈಗೊಳ್ಳಲಾಯಿತು.
ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸದಸ್ಯರ ಸಾಮಾನ್ಯ ಸಭೆಯಲ್ಲಿ, ಟ್ರೇಡ್ ಪರವಾನಗಿ, ಜಾಹೀರಾತು ಶುಲ್ಕ ವಸೂಲಿ, ಕಸ ವಿಲೇವಾರಿ ಹಾಗೂ ಪರಿಸರ ವಿಭಾಗದ ಅಧಿಕಾರಿ, ಸಿಬ್ಬಂದಿ ಕಾರ್ಯ ವೈಖರಿ, ನಗರಸಭೆ ಆಸ್ತಿ ರಕ್ಷಣೆ ಕುರಿತು ಸುಧೀರ್ಘ ಚರ್ಚೆ ನಡೆಯಿತು.
ಸದಸ್ಯ ಬಿ.ಎಂ.ಮುಬಾರಕ್ ಮಾತನಾಡಿ, ನಗರದಲ್ಲಿ 35 ವಾರ್ಡ್ ಇದ್ದು, ಕಸ ನಿರ್ವಹಣೆಯು ಹಳಿ ತಪ್ಪಿದೆ, ಮನೆಮನೆಗೆ ಭೇಟಿ ನೀಡಿ ಕಸ ಸಂಗ್ರಹ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಕಸ ಸಂಗ್ರಹ ಮಾಡುತ್ತಿರುವುದಾದರೆ ಎಲ್ಲಿ ದಾಸ್ತಾನು ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಆರೋಗ್ಯ ನಿರೀಕ್ಷಕ ನವಾಜ್ ಪ್ರತಿಕ್ರಿಯಿಸಿ, ನಗರದ 18 ವಾರ್ಡ್ಗಳಲ್ಲಿ ಕಸ ಸಂಗ್ರಹ ಆಗುತ್ತಿದೆ ಎಂದರು.
ಅಧಿಕಾರಿಗಳು ದಾಳಿ ವೇಳೆ ವಶಕ್ಕೆ ಪಡೆದ ಪ್ಲಾಸ್ಟಿಕ್ ಯಾರಿಗೆ ನೀಡಲಾಗಿದೆ. ಈ ವೇಳೆ ಪಂಚನಾಮೆ ಮಾಡಬೇಕು, ದಿನಚರಿಯ ಬಗ್ಗೆ ಅಧ್ಯಕ್ಷೆ, ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಟ್ರೇಡ್ ಪರವಾನಗಿ ಎಷ್ಟು ವಸೂಲಿ ಮಾಡಿದ್ದೀರಾ, ನಗರದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿದ್ದು, 200ಕ್ಕೂ ಹೆಚ್ಚು ಜಾಹೀರಾತು ಲಕಗಳು ಇವೆ, ಪ್ಲೇಕ್ಸ್ ಹಾಕಬಾರದು ಅಂತ ಸರ್ಕಾರದ ಗೆಜೆಟ್ ಇದೆಯಾ. ಆದಾಯ ಸೃಜನೆಯಾಗುವ ವಿಚಾರದಲ್ಲಿ ರಾಜೀಯಾಗಬೇಡಿ ಎಂದು ಹೇಳಿದರು.
ನಗರಸಭೆಗೆ ಸೇರಿದ ಬಹುತೇಕ ಆಸ್ತಿಗಳ ಸಂಬಂಧ ಕೋರ್ಟ್ಗಳಲ್ಲಿ ದಾವೆ ಇವೆ. ಯಾವ ನ್ಯಾಯಾಲಯಕ್ಕೆ ಯಾವ ವಕೀಲರನ್ನು ನೇಮಕ ಮಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆಸ್ತಿ ಉಳಿವಿಗಾಗಿ ಎದುರಾಳಿಗೆ ಸಮಾನರಾದ ಹಾಗೂ ಹೊಂದಾಣಿಕೆಯಾಗದ ವಕೀಲರನ್ನು ನೇಮಕ ಮಾಡಿಕೊಂಡರೆ, ಆಸ್ತಿ ಉಳಿಸಿಕೊಳ್ಳಬಹುದು ಎಂದು ಸದಸ್ಯ ಬಿ.ಎಂ.ಮುಬರಾಕ್ ಅಭಿಪ್ರಾಯ ವ್ಯಕ್ತಪಡಿಸಿದರು.
* ತಿಂಗಳ ವಸೂಲಿ ಆರೋಪ
ಅಂಗಡಿಗಳ ಮೇಲೆ ದಾಳಿ ಮಾಡುವ ಅಧಿಕಾರಿಗಳು ಇದ್ದಷ್ಟು ಪ್ಲಾಸ್ಟಿಕ್ ವಶಕ್ಕೆ ಪಡೆದುಕೊಂಡು ನಂತರ ಅದು ಏನಾಯಿತು ಎಂಬುವುದರ ಮಾಹಿತಿ ನೀಡಿಲ್ಲ. ಇದುವರೆಗೂ ಮಾಲೀಕರ ವಿರುದ್ಧ ದೂರು ದಾಖಲಿಸಿಲ್ಲ, ಅಧಿಕಾರಿಗಳಿಗೆ ತಿಂಗಳ ಮಾಮೂಲಿ ನೀಡದಿದ್ದಕ್ಕೆ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಸದಸ್ಯ ರಾಕೇಶ್ ಅವರು, ನಮ್ಮ ಆರೋಗ್ಯ ನಿರೀಕ್ಷರ ಮರ್ಯಾದೆ ಎಂದು ಟೀಕಿಸಿದರು.
* ಧೂಳು ತೆಗೆಯುವ ಯಂತ್ರ ಖರೀದಿಸಿ
ನಗರದಲ್ಲಿ ಕಸ ನಿರ್ವಹಣೆಗೆ 5.50 ಲಕ್ಷ ವೆಚ್ಚದಲ್ಲಿ ುಷ್ಕಾರ್ಟ್ ಖರೀದಿಗೆ ಟೆಂಡರ್ ಕರೆಯಲು ವಿಚಾರ ಪ್ರಸ್ತಾಪವಾದಾಗ ಮಧ್ಯ ಪ್ರವೇಶಿಸಿದ ಸದಸ್ಯ ಅಂಬರೀಶ್, ನಗರಸಭೆ ಆವರಣದಲ್ಲಿರುವ ಶೌಚಗೃಹಗಳು ನಿರ್ವಹಣೆಯಿಲ್ಲದೆ ಸೋರಗುತ್ತಿವೆ. ಚುನಾವಣೆ ವೇಳೆ ಮೊಬೈಲ್ ಶೌಚಗೃಹ ಖರೀದಿ ಮಾಡಲು ಆಯೋಗಕ್ಕೆ ಸಾಕಷ್ಟು ದುಡ್ಡು ಬರುತ್ತದೆ. ಕಚೇರಿಗೆ ಬಂದವರು ಟೌನ್ ಕ್ಲಬ್ಗೆ ಅಥವಾ ಹೊರಗೆ ಹೋಗಬೇಕು. ಇದರ ಬದಲು ರಸ್ತೆಗಳಲ್ಲಿ ಧೂಳು ತೆಗೆಯುವ ಯಂತ್ರಗಳನ್ನು ಖದೀದಿ ಮಾಡಲು ಯೋಜನೆ ರೂಪಿಸಬೇಕು ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಒಮ್ಮದ ತೀರ್ಮಾನ ಕೈಗೊಳ್ಳಲಾಯಿತು.
* ನಗರಸಭೆ ಆಸ್ತಿಗಳ ರಕ್ಷಣೆ ಮುಖ್ಯ
ಪೌರಕಾರ್ಮಿಕರು ದೇವರು ಇದ್ದಹಾಗೆ, ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಿದ್ದೇವೆ. ಬಡಾವಣೆ ಅಭಿವೃದ್ಧಿಪಡಿಸಿ ಹಂಚಿಕೆ ಮಾಡೊಣ. ಹೆಸರಾದರೂ ಶಾಶ್ವತವಾಗಿ ಉಳಿಯುತ್ತದೆ ಎಂದು ಸದಸ್ಯ ಮುರಳಿಗೌಡ ಸಭೆಯ ಗಮನ ಸೆಳೆದರು. ಖಾದ್ರಿಪುರ, ಬಸವನತ್ತು, ಸಂಗೋಡಹಳ್ಳಿ ಸಮೀಪ ಆಶ್ರಯ ಸಮಿತಿ ಯೋಜನೆಯಡಿ ಜಮೀನು ಮಂಜೂರಾಗಿದೆ. ಆದರೆ ಕೆಲ ಜಾಗಗಳ ದಾಖಲೆಗಳು ಖಾಸಗಿ ವ್ಯಕ್ತಿಗಳ ಹೆಸರಿಗೆ ಸೃಷ್ಟಿಯಾಗಿದ್ದು, ಪಹಣಿ ಬರುತ್ತಿದೆ. ಇದಕ್ಕೆ ಈಗ ವಾರಸುದಾರರು ಹುಟ್ಟಿಕೊಂಡಿದ್ದಾರೆ, ಜಾಗಗಳನ್ನು ಉಳಿಸದಿದ್ದರೆ ಕೆಟ್ಟ ಹೆಸರು ಬರುತ್ತದೆ ಎಂದು ಎಚ್ಚರಿಸಿದರು.
* ಸದಸ್ಯರ ನಡುವೆ ಗದ್ದಲ
ಅಲ್ಪಸಂಖ್ಯಾತರ ಇಲಾಖೆ ಮೂಲಕ ಅಲ್ಪ ಸಂಖ್ಯಾತರ ಬಡಾವಣೆಗಳ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ನಿರ್ಮಿತಿ ಹಾಗೂ ಲ್ಯಾಂಡ್ ಆರ್ಮಿ ಸಂಸ್ಥೆಗಳಿಂದ ಕಾಮಗಾರಿ ಪ್ರಾರಂಭವಾಗಿದ್ದು, ಇವು ಎಂಎಲ್ಎ, ಎಂಎಲ್ಸಿ, ಎಂಪಿ ಹಣತಿಯಂತೆ ನಡೆಯುತ್ತಿವೆ ಎಂದು ಸದಸ್ಯ ಬಿ.ಎ.ಮುಬಾರಕ್ ಆರೋಪಿಸಿದರು.
ಇದಕ್ಕೆ ಸದಸ್ಯ ಅಪ್ಸರ್ ಆಕ್ಷೇಪ ವ್ಯಕ್ತಪಡಿಸಿ, ಎರಡೂ ಸಂಸ್ಥೆಗಳಿಗೆ ಡಿಸಿ ಅಧ್ಯಕ್ಷರಾಗಿದ್ದು, ಆಧಾರ ಇದ್ದರೆ ದೂರು ಕೊಡಿ, ಇಲ್ಲವಾದರೆ ತನಿಖಾ ಸಂಸ್ಥೆಗಳಿಗೆ ದೂರು ಕೊಡಿ, ಜನ ಪ್ರತಿನಿಧಿಗಳ ವಿರುದ್ಧ ಸಭೆಯಲ್ಲಿ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಮುಬಾರಕ್ ಪ್ರತಿಕ್ರಿಯಿಸಿ, ನಾನು ಮಾತನಾಡುವುದೇ ಹೀಗೆ ಎಂದು ಹಠಕ್ಕೆ ಬಿದ್ದರು. ಆಗ ಅಪ್ಸರ್ ಸಭೆಯಲ್ಲಿ ಕುಳಿತು ಧರಣಿ ನಡೆಸಲು ಮುಂದಾದರು. ಅಲ್ಲದೆ ಕೈಕೈ ಮೀಲಾಯಿಸುವ ಹಂತಕ್ಕೂ ತಲುಪಿತು. ಇತರೆ ಸದಸ್ಯರು ಮತ್ತು ಅಧ್ಯೆ ಇಬ್ಬರನ್ನು ಸಮಾಧಾನಪಡಿಸಲು ವಿಲರಾದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಗಲ್ಪೇಟೆ ಇನ್ಸ್ಪೆಕ್ಟರ್ ಅರುಣ್ ಪಾಟೀಲ್ ಮಧ್ಯ ಪ್ರವೇಶಿಸಿ, ಪರಿಸ್ಥಿತಿ ಹತೋಟಿಗೆ ತಂದರು.
* ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಏಕಿಲ್ಲ ಕ್ರಮ?
ನಗರಸಭೆಗೆ ಸೇರಿದ ಜಾಗವನ್ನು ಮಹಿಳಾ ಸಮಾಜ ಶಾಲೆಗೆ ಅನಧಿಕೃತವಾಗಿ ಭೋಗ್ಯಕ್ಕೆ ನೀಡಲಾಗಿದೆ. ಈ ಬಗ್ಗೆ ನೋಂದಣಿ ಮಾಡಿಲ್ಲ, 100 ರೂ. ಛಾಪ ಕಾಗದದ ಮೇಲೆ ಬರೆದು ಭೋಗ್ಯ ಮುಂದುವರೆಸಲಾಗಿದೆ. ಜತೆಗೆ ನಕಲಿ ದಾಖಲೆ ಸೃಷ್ಟಿ ಮಾಡಿರುವವರ ವಿರುದ್ಧ ದೂರು ನೀಡಿದ್ದರೂ ಕ್ರಮವಹಿಸಿಲ್ಲ, ಈ ಬಗ್ಗೆ ನ್ಯಾಯಲಯದಲ್ಲಿ ತೀರ್ಪು ಸಹ ಆಗಿದೆ ಎಂದು ಸದಸ್ಯ ಪ್ರವಿಣ್ಗೌಡ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಬಾರಕ್, ನ್ಯಾಯಲಯದಲ್ಲಿ ತೀರ್ಪು ಆಗಿದ್ದರೆ ಯಾಕೆ ಮೇಲ್ಮನವಿ ಹೋಗಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರವಿಣ್ಗೌಡ ಇದನ್ನು ಕೇಳಬೇಕಾಗಿರುವುದು ಅಧಿಕಾರಿಗಳನ್ನ, ನೀವು ಯಾರ ಪರ ನಿಲುವು ತೋರುತ್ತಿದ್ದೀರಾ ಎಂಬುದನ್ನು ಸ್ಪಷ್ಟಪಡಿಸಿ ಎಂದು ಹೇಳಿದರು. ಮಹಿಳಾ ಸಮಾಜ ಶಾಲೆಗೆ ನಗರಸಭೆ ಜಾಗವನ್ನು ಲೀಸ್ ಮುಂದುವರೆದಿರುವುದು ಅವೈಜ್ಞಾನಿಕ. ನಕಲಿ ದಾಖಲೆ ಸೃಷ್ಟಿಸಿರುವವರ ವಿರುದ್ಧ ದೂರು ನೀಡಿದ್ದರು ಸಹ ಯಾಕೆ ಅಧಿಕಾರಿಗಳು ಕ್ರಮವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.