Cobra: ನೋಯ್ಡಾದ ಬಹುಮಹಡಿ ಕಟ್ಟಡವೊಂದರ ಲಿಫ್ಟ್‌ನಲ್ಲಿ ಪ್ರಯಾಣಿಕರಿಲ್ಲದ ವೇಳೆ ಏಕಾಏಕಿ ನಾಗರಹಾವು ಕಾಣಿಸಿಕೊಂಡಿದ್ದು, ಬಿಲ್ಡಿಂಗ್ ನಿವಾಸಿಗಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲದೆ, ಲಿಫ್ಟ್ನಲ್ಲಿದ್ದ ಹಾವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಭಾನುವಾರ ಸೆಕ್ಟರ್ 168ರಲ್ಲಿರುವ ಗೋಲ್ಡನ್ ಪಾಮ್ ಸೊಸೈಟಿಯ (ಬಿಲ್ಡಿಂಗ್) ನಿವಾಸಿಗಳು ಲಿಫ್ಟ್‌ನಲ್ಲಿ ಹಾವೊಂದು ಮಲಗಿರುವುದನ್ನು ಕಂಡು ಭಯಭೀತರಾದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಲವು ನಿವಾಸಿಗಳು ಲಿಫ್ಟ್‌ಗಾಗಿ ಕಾಯುತ್ತಿದ್ದಾಗ ಲಿಫ್ಟ್ ಬಾಗಿಲು ತೆಗೆದಾಗ ಅನಿರೀಕ್ಷಿತವಾಗಿ ಹಾವು ಕಂಡುಬಂದಿದೆ. ಇದರಿಂದ ಕೆಲಕಾಲ ಬಿಲ್ಡಿಂಗ್ಲ್ಲಿ ಉದ್ರಿಕ್ತ ವಾತವಾರಣ ಉಂಟಾಗಿದೆ.
ಲಿಫ್ಟ್‌ನಲ್ಲಿ ನಾಗರಹಾವು ಕಂಡು ಬಂದಿದ್ದು, ಅಲ್ಲಿನ ನಿವಾಸಿಗಳು ಹಾವನ್ನು ಹೊರ ಹಾಕಲು ಪ್ರಯತ್ನ ಮಾಡುತ್ತಿರುವ ದೃಶ್ಯಗಳು ಕಾಣಸಿಗುತ್ತದೆ. ಕೊನೆಗೂ, ತಾತ್ಕಾಲಿಕ ಉಪಕರಣಗಳೊಂದಿಗೆ, ಸೊಸೈಟಿಯ ನಿರ್ವಹಣಾ ಸಿಬ್ಬಂದಿ ನಾಗರಹಾವನ್ನು ಕಸದ ತೊಟ್ಟಿಯೊಳಗೆ ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಹತ್ತಿರದ ತೆರೆದ ಪ್ರದೇಶಕ್ಕೆ ಬಿಡಲಾಯಿತು.(ಏಜೆನ್ಸೀಸ್)