ನ್ಯೂಸ್

ಮೀಸಲಾತಿ ಕುರಿತು ಹೇಳಿಕೆ: ರಾಹುಲ್ ಗಾಂಧಿ ನಾಲಿಗೆ ಕತ್ತರಿಸುವುದಲ್ಲ, ಸುಡಬೇಕು ಎಂದು ಬಿಜೆಪಿ ಸಂಸದ!

ನವದೆಹಲಿ: ಬಿಜೆಪಿ ರಾಜ್ಯಸಭಾ ಸಂಸದ ಅನಿಲ್ ಬೋಂಡೆ ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಲಿಗೆಯನ್ನು ಕತ್ತರಿಸಬಾರದು ಆದರೆ ಮೀಸಲಾತಿ ವ್ಯವಸ್ಥೆ ಕುರಿತು ಅವರ ಹೇಳಿಕೆಗಾಗಿ ನಾಲಗೆ ಸುಡಬೇಕು ಎಂದಿದ್ದು, ವಿವಾದಕ್ಕೆ ಆಸ್ಪದವಾಗಿದೆ.

ರಾಹುಲ್ ಗಾಂಧಿ ಅವರ ನಾಲಗೆ ಕತ್ತರಿಸುವ ವ್ಯಕ್ತಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣದ ಶಾಸಕ ಸಂಜಯ್‌ ಗಾಯಕ್‌ವಾಡ್‌ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಬೋಂಡೆ ಈ ಹೇಳಿಕೆ ನೀಡಿದ್ದಾರೆ.

ಮಂಗಳವಾರ ಮಹಾರಾಷ್ಟ್ರದ ಅಮರಾವತಿಯಲ್ಲಿ ಬಿಜೆಪಿ ಮುಖಂಡ ಬೋಂಡೆ, ನಾಲಗೆ ಕತ್ತರಿಸುವ ಭಾಷೆ ಸರಿಯಲ್ಲ, ಆದರೆ ಮೀಸಲಾತಿ ವಿರುದ್ಧ ರಾಹುಲ್ ಗಾಂಧಿ ಹೇಳಿರುವುದು ಅಪಾಯಕಾರಿ. “ಹಾಗಾಗಿ, ಯಾರಾದರೂ ವಿದೇಶದಲ್ಲಿ ಏನಾದರೂ ಅಸಂಬದ್ಧವಾಗಿ ಮಾತನಾಡಿದರೆ, ನಂತರ ಅವರ ನಾಲಗೆಯನ್ನು ಕತ್ತರಿಸುವುದಕ್ಕಿಂತ, ಅದನ್ನು ಸುಟ್ಟುಬಿಡಬೇಕು. ಅದು ರಾಹುಲ್ ಗಾಂಧಿ, ಜ್ಞಾನೇಶ್ ಮಹಾರಾವ್ ಅಥವಾ ಶ್ಯಾಮ್ ಮಾನವ್ ಯಾರೇ ಆಗಿರಲಿ ಅವರು ‘ಬಹುಜನ’ ಮತ್ತು ಬಹುಸಂಖ್ಯಾತರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ” ಎಂದು ಬೋಂಡೆ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರ ಭದ್ರತೆಗೆ ಧಕ್ಕೆ ತರುವ ಮತ್ತು ಶಾಂತಿ ಕದಡುವ ಉದ್ದೇಶ ಹೊಂದಲಾಗಿದೆ ಎಂದು ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್ ಇಂದು ಪೊಲೀಸ್ ದೂರು ದಾಖಲಿಸಿದೆ. ಎಐಸಿಸಿ ಖಜಾಂಚಿ ಮತ್ತು ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಅವರು ತುಘಲಕ್ ರೋಡ್ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ಸಲ್ಲಿಸಿದ ದೂರಿನಲ್ಲಿ, ಬಿಜೆಪಿ ನಾಯಕರಾದ ತರ್ವಿಂದರ್ ಸಿಂಗ್ ಮರ್ವಾ, ರವನೀತ್ ಸಿಂಗ್ ಬಿಟ್ಟು ಮತ್ತು ರಘುರಾಜ್ ಸಿಂಗ್ ಮತ್ತು ಶಿವಸೇನಾ ಶಾಸಕ ಸಂಜಯ್ ಅವರ ಇತ್ತೀಚಿನ ಹೇಳಿಕೆಗಳನ್ನು ಕಾಂಗ್ರೆಸ್ ಉಲ್ಲೇಖಿಸಿದೆ.

ದೂರು ದಾಖಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಕೆನ್, ದಿವಂಗತ ಇಂದಿರಾ ಗಾಂಧಿ ಮತ್ತು ದಿವಂಗತ ರಾಜೀವ್ ಜಿ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವುದು ನಮಗೆಲ್ಲರಿಗೂ ತಿಳಿದಿದೆ. ಆ ನಂತರವೂ ಇಂತಹ ಬೆದರಿಕೆಗಳನ್ನು ಹಾಕುತ್ತಿದ್ದಾರೆ.

ಬಿಜೆಪಿ ಸಂಸದ ರವನೀತ್ ಬಿಟ್ಟು ರಾಹುಲ್ ಗಾಂಧಿ ಅವರನ್ನು ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಕರೆದಿದ್ದಾರೆ. ಬಿಟ್ಟು ಅವರ ಹೇಳಿಕೆಯು ರಾಹುಲ್ ಗಾಂಧಿ ವಿರುದ್ಧ ಸಾರ್ವಜನಿಕ ದ್ವೇಷ ಮತ್ತು ಆಕ್ರೋಶವನ್ನು ಕೆರಳಿಸುವ ಮತ್ತು ಅವರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಗುರಿಯನ್ನು ಹೊಂದಿದೆ ಎಂದು ಕಾಂಗ್ರೆಸ್ ಹೇಳಿದೆ.