ನ್ಯೂಸ್

ರಾಜ್ಯ ಬಜೆಟ್​ 2025-26| ಎಸ್​ಸಿ, ಎಸ್​ಟಿ ಸಮುದಾಯಕ್ಕೆ ಕಾಮಗಾರಿಯಲ್ಲಿ ಮೀಸಲಾತಿ; ಎಸ್​ಸಿಪಿ-ಟಿಎಸ್​ಪಿ ಯೋಜನೆಗೆ ಭರ್ಜರಿ ಅನುದಾನ ಘೋಷಣೆ

ಬೆಂಗಳೂರು: 2025-26ನೇ ಸಾಲಿನ ಆಯವ್ಯಯವನ್ನು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದು, ಇಲಾಖೆಗಳಿಗೆ ಭರಪೂರ ಅನುದಾನವನ್ನು ಘೋಷಿಸಿದ್ದಾರೆ. ಮೂಲಸೌಕರ್ಯ ಕ್ಷೇತ್ರ, ಮಲ್ಟಿಫ್ಲೆಕ್ಸ್​ನಲ್ಲಿ ಏಕರೂಪ ದರ ನಿಗದಿ ಸೇರಿದಂತೆ ಪ್ರಮುಖ ಘೋಷಣೆಗಳನ್ನು ಮಾಡಿದ್ದು, ಎಸ್​ಸಿ-ಎಸ್​ಟಿ ಸಮುದಾಯಕ್ಕೆ ಕಾಮಗಾರಿಗಳಲ್ಲಿ ಬಜೆಟ್​ನಲ್ಲಿ ಮೀಸಲಾತಿಯನ್ನು ಘೊಷಿಸಲಾಗಿದೆ.

ಎಸ್​ಸಿ, ಎಸ್​ಟಿ ಸಮುದಾಯಕ್ಕೆ 2 ಕೋಟಿ ರೂಪಾಯಿಯವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗುವುದು. ಎಸ್​ಸಿಪಿ ಟಿಎಸ್​ಪಿ ಯೋಜನೆಗೆ 42018 ಕೋಟಿ ರೂ. ಮೀಸಲು ಇಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್​ನಲ್ಲಿ ಘೋಷಿಸಿದ್ದಾರೆ.

ಇನ್ನೂ ಬಜೆಟ್​ನಲ್ಲಿ ಪ್ರಮುಖ ಘೋಷಣೆಗಳನ್ನು ಮಾಡಲಾಗಿದ್ದು, ವೃತ್ತಿ ತೆರಿಗೆಯನ್ನು 200 ರೂ. ರಿಂದ 300 ರೂ.ಗೆ ವೃತ್ತಿ ತೆರಿಗೆ ಏರಿಕೆ ಮಾಡಲಾಗಿದೆ. ಇದಲ್ಲದೆ ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಮೂಲಸೌಕರ್ಯ ಅಭಿವೃದ್ಧಿ ಹೊಸ ಕಾರ್ಯಕ್ರಮ ಜಾರಿ ಮಾಡಲಾಗಿದ್ದು, ಈ ಯೋಜನೆಯಡಿ ರಾಜ್ಯದ ಎಲ್ಲಾ ವಿಧಾನಸಭೆ ಕ್ಷೇತ್ರದ ರಸ್ತೆ, ಸಣ್ಣ ನೀರಾವರಿ, ಮೂಲ ಸೌಕರ್ಯಗಳಿಗೆ 8 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಘೋಷಿಸಲಾಗಿದೆ.