ಶಿರಾಳಕೊಪ್ಪ: ಅಲ್ಪಸಂಖ್ಯಾತ ಸಮುದಾಯ ವಾಸವಿರುವ ಪ್ರದೇಶಗಳ ಅಭಿವೃದ್ಧಿಗೆ ಪುರಸಭೆ ಈ ವರ್ಷದ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಅಬ್ದುಲ್ ನವೀದ್ ಮತ್ತಿತರರು ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಣದ ಹಳ್ಳೂರು ಖಾನಕೇರಿ ಪ್ರದೇಶದಲ್ಲಿ ುಟ್‌ಪಾತ್ ಟೈಲ್ಸ್ ಅಳವಡಿಕೆಯಾಗಿಲ್ಲ. ಚರಂಡಿ ಸೌಲಭ್ಯಗಳಿಲ್ಲದೆ ಜನ ಪರದಾಡುತ್ತಿದ್ದಾರೆ. ಮಠದಗದ್ದೆ, ದೊಡ್ಡಬ್ಯಾಣದ ಕೇರಿ ಹಾಗೂ 11ನೇ ವಾರ್ಡ್‌ನ ಕೇರಿಗಳಲ್ಲಿ ಓಡಾಡಲು ರಸ್ತೆಗಳಿಲ್ಲದೆ ಮಳೆಗಾಲದಲ್ಲಿ ವೃದ್ಧರು, ಶಾಲಾ ಮಕ್ಕಳು ಸಂಕಷ್ಟ ಎದುರಿಸುವಂತಾಗಿದೆ. ಬಸ್ ನಿಲ್ದಾಣ ಪ್ರದೇಶದಲ್ಲಿ ಮಳೆ ನೀರು ಹೋಗಲು ಕಾಲುವೆ ಇಲ್ಲದ ಕಾರಣ ಮಳೆಗಾಲದಲ್ಲಿ ಮಳೆ ನೀರು ಗಾಂಧಿ ನಗರ ಪ್ರದೇಶದ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಆಗುತ್ತಿದೆ. ಪಟ್ಟಣದಲ್ಲಿ ಕೋಟಿಗಟ್ಟಲೆ ಸಾರ್ವಜನಿಕ ತೆರಿಗೆ ಹಣದಿಂದ ನಿರ್ಮಾಣಗೊಂಡಿರುವ ುಡ್‌ಕೋರ್ಟ್ ಮತ್ತು ಮಿನಿ ಪಾರ್ಕ್‌ಗಳು ಪಾಳು ಬಿದ್ದಿದ್ದು ಪುರಸಭೆಯ ನಿರ್ಲಕ್ಷ ್ಯಕ್ಕೆ ಹಿಡಿದ ಕನ್ನಡಿ ಎಂದು ದೂರಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಹಂತ ಹಂತವಾಗಿ ಎಲ್ಲ ಅಹವಾಲುಗಳ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪುರಸಭೆ ಉಪಾಧ್ಯಕ್ಷ ಮುದಸ್ಸಿರ್ ಅಹಮದ್, ಸದಸ್ಯ ಮಕ್ಬುಲ್ ಸಾಬ್, ಪರಿಸರ ಅಭಿಯಂತ ರಾಘವೇಂದ್ರ ಹಿರೇಜಂಬೂರು ಮುಖಂಡರಾದ ಮಂಜುನಾಥಯ್ಯ, ಜಾಕಿರ್ ಹುಸೇನ್, ಅವಿನಾಶ್, ಪ್ರವೀಣ್, ಸುಹೈಲ್, ಮೃತ್ಯುಂಜಯ, ತಾಹಿರ್, ಮಾಲತೇಶ್, ಅಶ್ವಾಕ್ ಅಹಮದ್ ಇತರರಿದ್ದರು.