ಆಯನೂರು, ಹಾರನಹಳ್ಳಿ ಹಾಗೂ ಸವಳಂಗ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಕೆಎಸ್‌ಆರ್‌ಟಿಸಿ ಅಧಿಕಾರಿ ದಿನೇಶ್‌ಕುಮಾರ್‌ಗೆ ಮನವಿ ಸಲ್ಲಿಸಿದರು. ಸವಿತಾ, ನಿರ್ಮಲಾ, ಚಂದ್ರಮ್ಮ, ಉಷಾ, ನಸೀಮಾ ಬಾನು, ಸೌಮ್ಯಾ ಇತರರಿದ್ದರು.  
ನ್ಯೂಸ್

ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ನೀಡುವಂತೆ ಮನವಿ

ಶಿವಕುಮಾರ ಎಸ್.ಪಿ.

ಆಯನೂರು: ಶಿವಮೊಗ್ಗ, ಆಯನೂರು, ಹಾರನಹಳ್ಳಿ ಹಾಗೂ ಸವಳಂಗ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಿಡುವಂತೆ ಒತ್ತಾಯಿಸಿ ಆಯನೂರು ಕೋಟೆ ಗ್ರಾಮದ ಕುವೆಂಪು, ವರಮಹಾಲಕ್ಷ್ಮೀ, ಕೃತಿಕಾ, ಆದಿಲಕ್ಷ್ಮೀ ಸ್ತ್ರೀ ಸ್ವಸಹಾಯ ಸಂಘದ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಮಹಿಳೆಯರು ಎಸ್‌ಎಂಎಸ್‌ಎಸ್ ಸಂಸ್ಥೆ ಸಹಕಾರದೊಂದಿಗೆ ಶಿವಮೊಗ್ಗದ ವಿಭಾಗೀಯ ಸಂಚಾರ ಅಧಿಕಾರಿ ದಿನೇಶ್‌ಕುಮಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.

ನಮ್ಮ ಭಾಗದಲ್ಲಿ ಪ್ರತಿದಿನ ವಿದ್ಯಾರ್ಥಿಗಳು, ಉದ್ಯೋಗಿಗಳು, ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವರು, ವೈಯಕ್ತಿಕ ಕೆಲಸಗಳಿಗೆ ಪಟ್ಟಣಗಳಿಗೆ ಹೋಗಿಬರಲು ಬಸ್ ವ್ಯವಸ್ಥೆ ಇಲ್ಲ. ಆಯನೂರು ಕೋಟೆ ಗ್ರಾಮದಿಂದ ಬೆಳಗ್ಗೆ ವಿದ್ಯಾರ್ಥಿಗಳು 2 ಕಿ.ಮೀ. ದೂರದ ಆಯನೂರು ಗ್ರಾಮಕ್ಕೆ ನಡೆದು ಬಂದು ಬಸ್ ಹತ್ತಬೇಕು. ಹೀಗಾಗಿ ಈ ಭಾಗದಲ್ಲಿ ಶೀಘ್ರ ಬಸ್ ಬಿಡಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಹೆಚ್ಚುವರಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಾಲಕರ ನೇಮಕಾತಿಯೂ ಆಗುತ್ತಿದೆ. ವಿವಿಧ ಗ್ರಾಮಸ್ಥರ ಬೇಡಿಕೆಯಂತೆ ಆಗಸ್ಟ್‌ನಿಂದ ಈ ಮಾರ್ಗದಲ್ಲಿ 2 ಬಸ್ ಸಂಚರಿಸುವ ವ್ಯವಸ್ಥೆ ಮಾಡುವುದಾಗಿ ಅಧಿಕಾರಿ ದಿನೇಶ್‌ಕುಮಾರ್ ಭರವಸೆ ನೀಡಿದರು.
ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ಕಾರ್ಯಕರ್ತೆ ಸವಿತಾ, ನಿರ್ಮಲಾ, ಚಂದ್ರಮ್ಮ, ಉಷಾ, ನಸೀಮಾ ಬಾನು, ಸೌಮ್ಯಾ, ಯಶೋದಾ, ರೂಪಾ, ವಿಜಯಾ ಇತರರಿದ್ದರು.