ವಿಐಎಸ್‌ಎಲ್ ಆರಂಭಕ್ಕೆ ಆಗ್ರಹಿಸಿ ಜೆಡಿಎಸ್ ಮುಖಂಡರ ನಿಯೋಗ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿತು. ಕಡಿದಾಳ್ ಗೋಪಾಲ್, ಕರುಣಾಮೂರ್ತಿ ಮುಂತಾದವರು ಚಿತ್ರದಲ್ಲಿದ್ದಾರೆ.  
ನ್ಯೂಸ್

ವಿಐಎಸ್‌ಎಲ್ ಮುಚ್ಚದಂತೆ ಸಚಿವರಿಗೆ ಮನವಿ

ಶಿವಮೊಗ್ಗ: ವಿಐಎಸ್‌ಎಲ್ ಮುಚ್ಚುವ ಆದೇಶವನ್ನು ಮರುಪರಿಶೀಲಿಸಬೇಕು. ಕಾರ್ಖಾನೆಯನ್ನು ನವೀಕರಿಸಿ ಮತ್ತೆ ಉತ್ಪಾದನೆ ಆರಂಭಿಸಬೇಕೆಂದು ಒತ್ತಾಯಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ನೇತೃತ್ವದ ಜೆಡಿಎಸ್ ಮುಖಂಡರ ನಿಯೋಗ ಮಂಗಳವಾರ ತುಮಕೂರಿನಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಎಚ್‌ಡಿಕೆ ಅವರನ್ನು ಭೇಟಿಯಾದ ನಿಯೋಗ ವಿಐಎಸ್‌ಎಲ್ ಉಳಿಸುವಂತೆ ಮನವಿ ಮಾಡಿತು. ಭದ್ರಾವತಿ ಕ್ಷೇತ್ರದ ಜನರು ವಿಐಎಸ್‌ಎಲ್‌ನೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದಾರೆ. ಈ ಕಾರ್ಖಾನೆಗೆ ಭವ್ಯ ಇತಿಹಾಸವಿದೆ. ಇದನ್ನು ಮತ್ತೆ ಆರಂಭಿಸಿದರೆ ಈ ಕಾರ್ಖಾನೆ ಸ್ಥಾಪಿಸಿದ ಸರ್.ಎಂ.ವಿ.ವಿಶ್ವೇಶ್ವರಯ್ಯ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಜೆಡಿಎಸ್ ಮುಖಂಡರು ತಿಳಿಸಿದರು.
ವಿದೇಶಿ ಕಂಪೆನಿಗಳು ಭಾರದಲ್ಲಿ ಬಲವಾಗಿ ಬೆಳೆಯುತ್ತಿವೆ. ಆದರೆ ನಮ್ಮವರೇ ಸ್ಥಾಪಿಸಿದ ಇಂತಹ ಕಾರ್ಖಾನೆಗಳು ಮುಚ್ಚುತ್ತಿರುವುದು ದುರದೃಷ್ಟಕರ. ವಿಐಎಸ್‌ಎಲ್ ಮತ್ತೆ ಆರಂಭವಾಗಿ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ದೊರೆತರೆ ಈ ಭಾಗದ ಆರ್ಥಿಕ ಚಟುವಟಿಕೆಗೆ ಶಕತಿ ತುಂಬಿದಂತಾಗುತ್ತದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಕಾರ್ಖಾನೆ ನವೀಕರಣಕ್ಕೆ ಅನುದಾನ ನೀಡಬೇಕು. ಆಧುನಿಕ ಯಂತ್ರೋಪಕರಣ ಒದಗಿಸಬೇಕು ಎಂದು ಒತ್ತಾಯಿಸಿದರು. ಜೆಡಿಎಸ್ ಮುಖಂಡರ ಮನವಿಗೆ ಸ್ಪಂದಿಸಿದ ಎಚ್.ಡಿ.ಕುಮಾರ್, ಶೀಘ್ರವೇ ಅಧಿಕಾರಿಗಳ ಸಭೆ ಕರೆದು ವಿಐಎಸ್‌ಎಲ್ ಆರಂಭಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜೆಡಿಎಸ್ ಪ್ರಮುಖರಾದ ಶಾರದಾ ಅಪ್ಪಾಜಿ, ರಾಮಕೃಷ್ಣ, ತ್ಯಾಗರಾಜ್ , ರಮೇಶ್ ನಾಯ್ಕ, ಕರುಣಾಮೂರ್ತಿ, ದೀಪಕ್ ಸಿಂಗ್, ಸಂಗಯ್ಯ, ಗೋಪಿ, ದಯಾನಂದ, ಮಧು ಕುಮಾರ್, ಡಿ,ಉಮೇಶ್, ಗೀತಾ ಸತೀಶ್, ಗಿರೀಶ್ ಮುಂತಾದವರು ನಿಯೋಗದಲ್ಲಿದ್ದರು.