ಶಿವಮೊಗ್ಗ ಪಾಲಿಕೆ ವಾರ್ಡ್ ನಂ.34ರ ಅಭಿವೃದ್ಧಿಗೆ ಆಗ್ರಹಿಸಿ ಎಂ.ಸಮೀವುಲ್ಲಾ ನೇತೃತ್ವದಲ್ಲಿ ಅಬ್ದುಲ್ ವಹಾಬ್, ರಿಯಾಜ್ ಅಹ್ಮದ್, ಇನಾಯಿತ್, ಮಹಮದ್ ಗೌಸ್ ಖಾನ್ ಮತ್ತಿತರರು ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಿದರು. 
ನ್ಯೂಸ್

ಚರಂಡಿ ಕಾಮಗಾರಿ ಪೂರ್ಣಗೊಸಲು ಒತ್ತಾಯಿಸಿ ಮನವಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ವಿದ್ಯಾನಗರ ವಾರ್ಡ್ ನಂ.34ರ ಮೆಹಬೂಬ್ ನಗರ ಸೇರಿ ಹಲವು ಬಡಾವಣೆಯ ಹಳೇ ಚರಂಡಿಗಳ ದುರಸ್ತಿ ಹಾಗೂ ಉಳಿದ ಚರಂಡಿ ಕಾಮಗಾರಿಗಳ ಪೂರ್ಣಗೊಳಿಸಲು ಒತ್ತಾಯಿಸಿ ನಿಸ್ವಾರ್ಥ ಜನಶಕ್ತಿ ವೇದಿಕೆಯ ಸಂಸ್ಥಾಪಕ ಎಂ.ಸಮೀವುಲ್ಲಾ ನೇತೃತ್ವದಲ್ಲಿ ನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.

ವಾದಿ-ಎ-ಹುದಾ, ಮೆಹಬೂಬ್ ನಗರ, ಮದಾರಿಪಾಳ್ಯ ಸೇರಿ ಹಲವು ಬಡಾವಣೆಗಳಲ್ಲಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಚರಂಡಿ ಕಾಮಗಾರಿ ಪೂರ್ಣವಾಗದೇ ಇರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಮೊದಲು ಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಮೆಹಬೂಬ್ ನಗರದ ಒಂದನೇ ಮುಖ್ಯರಸ್ತೆ ಹಾಗೂ ವಿವಿಧ ಅಡ್ಡರಸ್ತೆಗಳ ಕಾಮಗಾರಿ ಬಹಳ ವರ್ಷಗಳಿಂದ ಸ್ಥಗಿತವಾಗಿದೆ. ಇಲ್ಲಿ ಕೂಡಲೇ ಬೀದಿ ದೀಪ ಅಳವಡಿಸಬೇಕು. ಯುಜಿಡಿ ಕಾಮಗಾರಿ ಆರಂಭಿಸಬೇಕು. ಹಂದಿ, ನಾಯಿಗಳನ್ನು ನಿಯಂತ್ರಿಸಬೇಕು. ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು. ಶಿವಮೊಗ್ಗ- ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಬೀದಿದೀಪ ಸಂಪೂರ್ಣವಾಗಿ ಹಾಳಾಗಿದೆ ಎಂದು ದೂರಿದರು.

ಪ್ರಮುಖರಾದ ರಿಯಾಜ್ ಅಹ್ಮದ್, ಅಬ್ದುಲ್ ವಹಾಬ್ ಮುಲ್ಲಾ, ಮಹಮದ್ ಯೂಸ್, ಶಬ್ಬೀರ್ ಖಾನ್, ಇನಾಯಿತ್, ಕೆ.ಬಿ.ಇಬ್ರಾಹಿಂ, ಸೂಫಿ ವೌಲಾನ, ಮಹಮದ್ ಗೌಸ್ ಖಾನ್ ಇತರರಿದ್ದರು.