ನವದೆಹಲಿ: ದೇಶವು ಇಂದು 71ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಈ ಸುದಿನದಂದು ರಾಷ್ಟ್ರದ ಜನತೆ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಿ ರಾಷ್ಟ್ರಪ್ರೇಮವನ್ನು ಮೆರೆಯುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ರಾಷ್ಟ್ರದ ಜನತೆಗೆ ಗಣರಾಜ್ಯೋತ್ಸವದ ಶುಭಕೋರಿದ್ದಾರೆ. ದೇಶದ ಗಮನ ಸೆಳೆದಿರುವ ದೆಹಲಿಯ ರಾಜಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಈ ಬಾರಿ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನರೋ ಭಾಗವಹಿಸಿದ್ದಾರೆ.
11:45 AM: ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕ ರಾಜಪಥ್ನಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ.
11:40 AM: ಪರೇಡ್ ಮುಗಿಸಿ ಹೊರಟ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಗಣರಾಜ್ಯೋತ್ಸವ ಪಥಸಂಚಲನದ ಮುಖ್ಯ ಅತಿಥಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನರೋ.
11:28 AM: ವಿವಿಧ ಯುದ್ಧ ವಿಮಾನಗಳಿಂದ ಆಗಸದಲ್ಲಿ ಶಕ್ತಿ ಪ್ರದರ್ಶನ.
11:26 AM: ಸಹಾಯಕ ಸಬ್ ಇನ್ಸ್ಪೆಕ್ಟರ್ ಅನಿತಾ ಕುಮಾರಿ ವಿವಿ ನೇತೃತ್ವದಲ್ಲಿ ಐದು ಮೋಟರ್ಬೈಕ್ ಸಹಾಯದಿಂದ 21 ಮಹಿಳೆಯರಿಂದ ಮಾನವ ಪಿರಾಮಿಡ್ ನಿರ್ಮಾಣ.
11:24 AM: ಪ್ರಧಾನ ಮಂತ್ರಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ 2020 ವಿಜೇತರು ಪರೇಡ್ನಲ್ಲಿ ಭಾಗವಹಿಸಿರುವುದು. 18 ಹುಡುಗಿಯರು ಮತ್ತು 31 ಹುಡುಗರು ಸೇರಿದಂತೆ ಒಟ್ಟು 49 ಮಕ್ಕಳು ಪರೇಡ್ನಲ್ಲಿ ಭಾಗಿ.
11:22 AM: ಗುಜರಾತ್ನ ಜಾನಪದ ನೃತ್ಯ ಪ್ರಕಾರ ಗಾರ್ಬ ನೃತ್ಯವನ್ನು ಕಣ್ತುಂಬಿಕೊಂಡ ಪ್ರಧಾನಿ ನರೇಂದ್ರ ಮೋದಿ. ಗುಜರಾತ್ನ ವಿವಿಧ ಶಾಲೆಯ ಸುಮಾರು 150 ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನ.
11:19 AM: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸ್ವಾಮಿ ವಿವೇಕಾನಂದರ ಸಂದೇಶ ಸಾರುವ ಸಿಪಿಡಬ್ಲ್ಯೂಡಿ ತೋಟಗಾರಿಕೆ ಸ್ತಬ್ಧ ಚಿತ್ರ ಪ್ರದರ್ಶನ.
11:10 AM: ಪರೇಡ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ತಬ್ಧ ಚಿತ್ರ ಪ್ರದರ್ಶನ. ಸ್ತಬ್ಧ ಚಿತ್ರದಲ್ಲಿ ಕೇಂದ್ರಾಡಳಿತ ಪ್ರದೇಶದ ಮರಳಿ ಹಳ್ಳಿಗೆ ಕಾರ್ಯಕ್ರಮ ಸಂದೇಶವಿದೆ.
11:06 AM: ಕರ್ನಾಟಕದಿಂದ ಬಸವಣ್ಣನವರ ಅನುಭವ ಮಂಟಪ ಸೇರಿದಂತೆ ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶದ ಸ್ತಬ್ಧ ಚಿತ್ರಗಳು ಭಾಗಿಯಾಗಿರುವುದು.
11:04 AM: ಒಡಿಶಾದ ಲಿಂಗರಾಜ ದೇವರಿನ ರುಕಾನಾ ರಥ ಯಾತ್ರೆಯ ಸ್ತಬ್ಧ ಚಿತ್ರ ಪ್ರದರ್ಶನ.
11:02 AM: ಹಿಮಾಚಲ ಪ್ರದೇಶದ ಕುಲು ದಸರಾ ಹಬ್ಬ ಮತ್ತು ಮಧ್ಯಪ್ರದೇಶದ ಬುಡಕಟ್ಟು ಜನಾಂಗದ ಮ್ಯೂಸಿಯಂನ ಸ್ತಬ್ಧ ಚಿತ್ರಗಳು.
10:59 AM: ತೆಲಂಗಾಣದ ಹೂವಿನ ಹಬ್ಬ ಬಥುಕಮ್ಮ ಪ್ರತಿಬಿಂಬಿಸುವ ಹಾಗೂ ಬಿದಿರು ಮತ್ತು ಕಬ್ಬಿನ ಕರಕುಶಲ ವಸ್ತುಗಳನ್ನು ಸಾರುವ ಅಸ್ಸಾಂನ ಸ್ತಬ್ಧ ಚಿತ್ರಗಳು.
10:57 AM: ರಾಜಸ್ಥಾನ ರಾಜಧಾನಿ ಜೈಪುರದ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆ ಸಾರುವ ಸ್ತಬ್ಧ ಚಿತ್ರ ಪರೇಡ್ನಲ್ಲಿ ಭಾಗಿ.
10:56 AM: ರಾಜಪಥ್ ಪರೇಡ್ನಲ್ಲಿ ಕೋಲ್ಕತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗಿಯಾಗಿರುವುದು.
10:53 AM: ಹಿರಿಯ ಅಧಿಕಾರಿ ಚಾರು ಶರ್ಮಾ ನೇತೃತ್ವದಲ್ಲಿ ಬಿರ್ಲಾ ಬಾಲಿಕ ವಿದ್ಯಾಪೀಠದಿಂದ ಪಿಲಾನಿ ಬ್ಯಾಂಡ್ ಪ್ರದರ್ಶನ. 56 ವರ್ಷಗಳಿಂದ ಈ ಶಾಲೆಯು ಗಣರಾಜ್ಯೋತ್ಸವ ಪರೇಡ್ನಲ್ಲಿ ನಿರಂತರವಾಗಿ ಭಾಗವಹಿಸುತ್ತಿದೆ.
10:51 AM: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಮತ್ತು ಪುತ್ರಿ ಪ್ರತಿಭಾ ಅಡ್ವಾಣಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಮತ್ತ ಇತರ ನಾಯಕರು ಗಣರಾಜ್ಯೋತ್ಸವ ಪರೇಡ್ನಲ್ಲಿ ಸಾಕ್ಷಿಯಾಗಿರುವುದು.
10:49 AM: ಡೆಪ್ಯೂಟಿ ಕಮಾಂಡೆಂಟ್ ಘನಶ್ಯಾಮ್ ಸಿಂಗ್ ಕಮಾಂಡ್ ಅಡಿಯಲ್ಲಿ ಗಡಿ ಭದ್ರತಾ ಪಡೆಯ ಒಂಟೆ ಪಡೆಯಿಂದ ಪಥಸಂಚಲನ. ಬಿಎಸ್ಎಫ್ ಧ್ಯೇಯೋಕ್ತಿ "ಸಾಯುವವರೆಗೂ ಕರ್ತ್ಯವ್ಯ ನಿರ್ವಹಿಸು" ಎಂಬುದು.
10:46 AM: ಏರ್ ಡಿಫೆನ್ಸ್ ರೆಜಿಮೆಂಟ್ನ ಲೆಫ್ಟಿನೆಂಟ್ ವಿವೇಕ್ ವಿಜಯ್ ನೇತೃತ್ವದಲ್ಲಿ ರಾಜಪಥ್ ಪರೇಡ್ನಲ್ಲಿ ಏರ್ ಡಿಫೆನ್ಸ್ನ ಟ್ಯಾಕ್ಟಿಕಲ್ ಕಂಟ್ರೋಲ್ ರಾಡರ್ ವಾಹನ ಪ್ರದರ್ಶನ.
10:43 AM: ಸಹಾಯಕ ಕಮಾಂಡೆಂಟ್ ಅಮಿತ್ ಯಾದವ್ ನೇತೃತ್ವದಲ್ಲಿ ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಪಥಸಂಚಲನ ತಂಡ ಪರೇಡ್ನಲ್ಲಿ ಪಾಲ್ಗೊಂಡಿರುವುದು.
10:42 AM: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ಕೇಂದ್ರ ರಾಜ್ಯ ವಿತ್ತಸಚಿವ ಅನುರಾಗ್ ಠಾಕೂರ್ ಪರೇಡ್ನಲ್ಲಿ ಭಾಗಿಯಾಗಿರುವುದು.
10:40 AM: ಬೋಯಿಂಗ್ ಪಿ81 ಲಾಂಗ್ ರೇಂಜ್ ಕಡಲ ಗಸ್ತು ವಿಮಾನ ಮತ್ತು ಕೋಲ್ಕತದ ಕ್ಲಾಸ್ ಡೆಸ್ಟ್ರೋಯರ್ ಹಾಗೂ ಕಲ್ವಾರಿ ಕ್ಲಾಸ್ ಜಲಾಂತರ್ಗಾಮಿಯಂತಹ ಪ್ರಮುಖ ನೌಕಾಪಡೆಯ ಆಸ್ತಿಗಳನ್ನು ಭಾರತೀಯ ನೌಕಾಪಡೆ ಪರೇಡ್ನಲ್ಲಿ ಪ್ರದರ್ಶಿಸಿತು.
10:36 AM: ರಾಜಪಥ್ ಪರೇಡ್ನಲ್ಲಿ ನಾವಲ್ ಬ್ರಾಸ್ ಬ್ರ್ಯಾಂಡ್ ಪ್ರದರ್ಶನ.
10:33 AM: ನಾಲ್ಕನೇ ತಲೆಮಾರಿನ ಸೇನಾಧಿಕಾರಿ ಕ್ಯಾಪ್ಟನ್ ತಾನ್ಯ ಶೆರ್ಗಿಲ್ ನೇತೃತ್ವದಲ್ಲಿ ಕಾರ್ಪ್ಸ್ ಆಫ್ ಸಿಗ್ನಲ್ ತಂಡ ಪರೇಡ್ನಲ್ಲಿ ಭಾಗವಹಿಸಿತು.
10:30 AM: ಸಿಖ್ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ನ 6ನೇ ಬೆಟಾಲಿಯನ್ನ ಮೇಜರ್ ಅಂಜುಮ್ ಗೋರ್ಕಾ ಅವರ ನೇತೃತ್ವದಲ್ಲಿ ಸಿಖ್ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟ್ನಿಂದ ಪಥಸಂಚಲನ.
10:25 AM: 269 ಮಧ್ಯಮ ರೆಜಿಮೆಂಟ್ನ ಕ್ಯಾಪ್ಟನ್ ಅಭಿನವ್ ಸಾಹು ಅವರ ಕಮಾಂಡಿಂಗ್ನಲ್ಲಿ ಕೆ-9-ವಜ್ರ-ಟಿ ಯುದ್ಧ ಟ್ಯಾಂಕರ್ ಪರೇಡ್ನಲ್ಲಿ ಭಾಗಿ.
10:23 AM: ರಾಜಪಥ್ನ ಪರೇಡ್ನಲ್ಲಿ ಭಾಗಿಯಾದ 86 ಆರ್ಮರ್ಡ್ ರೆಜಿಮೆಂಟ್ನ ಟಿ-90 ಭೀಷ್ಮಾ ಯುದ್ಧ ಟ್ಯಾಂಕರ್.
10:20 AM: ಅತ್ಯುನ್ನತ ಪ್ರಶಸ್ತಿಗಳಾದ ಶೌರ್ಯ ಪ್ರಶಸ್ತಿ, ಪರಮ ವೀರ ಚಕ್ರ ಮತ್ತು ಅಶೋಕ ಚಕ್ರ ಪುರಷ್ಕೃತರು.
10:12 AM: ದೆಹಲಿಯಲ್ಲಿರುವ ಮುಖ್ಯ ಕಚೇರಿಗಳಾದ ಅತಿ ವಿಶಿಷ್ಟ್ ಸೇವಾ ಮೆಡಲ್, ಸೇನಾ ಮೆಡಲ್, ವಿಶಿಷ್ಟ ಸೇವಾ ಮೆಡಲ್, ಜನರಲ್ ಆಫೀಸರ್ ಕಮಾಂಡಿಂಗ್ನ ಪರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅಸಿತ್ ಮಿಸ್ತ್ರಿ ಅವರು ಈ ವರ್ಷದ ಗಣರಾಜ್ಯೋತ್ಸವದ ಪರೇಡ್ನ ನೇತೃತ್ವ ವಹಿಸಿದ್ದಾರೆ.
10:11 AM: ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪತ್ನಿ ಗುರ್ಶರನ್ ಕೌರ್, ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಇತರೆ ಗಣ್ಯರು ರಾಜಪಥದಲ್ಲಿ ಉಪಸ್ಥಿತರಿರುವುದು.
10:08 AM: ಲೆಫ್ಟಿನೆಂಟ್ ಕರ್ನಲ್ ಸಿ ಸಂದೀಪ್ ಕಮ್ಯಾಂಡ್ ಅಡಿಯಲ್ಲಿ 2233 ಫೀಲ್ಡ್ ಬ್ಯಾಟರಿಯಿಂದ 21 ಗನ್ ಸೆಲ್ಯೂಟ್ ಗೌರವ.
10:04 AM: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ 71ನೇ ಗಣರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಧ್ವಜಾರೋಹಣ.
10:00 AM: ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ರಿಂದ ರಾಷ್ಟ್ರಗೀತೆಗೆ ಗೌರವ.
9:59 AM: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೊಂದಿಗೆ ಗಣರಾಜ್ಯೋತ್ಸವ ಪಥಸಂಚಲನದ ಮುಖ್ಯ ಅತಿಥಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನರೋ ಅವರು ರಾಜಪಥಕ್ಕೆ ಆಗಮನ.
9:55 AM: ರಾಜಪಥಕ್ಕೆ ಪ್ರಧಾನಿ ಮೋದಿ ಆಗಮನ. ಇನ್ನು ಕೆಲವೇ ಕ್ಷಣಗಳಲ್ಲಿ ಗಣರಾಜ್ಯೋತ್ಸವ ಪರೇಡ್ ಆರಂಭ.
9:49 AM: ರಾಷ್ಟ್ರಪತಿ ಭವನದಿಂದ ರಾಜಪಥಕ್ಕೆ ಹೊರಟ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಗಣರಾಜ್ಯೋತ್ಸವ ಪಥಸಂಚಲನದ ಮುಖ್ಯ ಅತಿಥಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನರೋ.
9:45 AM: ಯುದ್ಧ ಸ್ಮಾರಕದ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ರಿಂದ ನಮನ. ಮೂರು ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ನರಾವಣೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್ ಮತ್ತು ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಆರ್.ಕೆ.ಎಸ್ ಭದುರಿಯಾರ ಉಪಸ್ಥಿತಿ.
9:40 AM: ಮೂರು ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ನರಾವಣೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬಿರ್ ಸಿಂಗ್ ಮತ್ತು ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಆರ್.ಕೆ.ಎಸ್ ಭದುರಿಯಾರಿಂದ ಪ್ರಧಾನಿ ಮೋದಿಗೆ ಸ್ವಾಗತ
9:36 AM: ಇಂಡಿಯಾ ಗೇಟ್ನಲ್ಲಿರುವ ಯುದ್ಧ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮನ.