English Title Kannada Movies
English Title Kannada Movies -
ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಕ್ರೇಜ್ ಹೆಚ್ಚುತ್ತಿದೆ. ಬಹುಭಾಷೆಗಳಲ್ಲಿ ಥಿಯೇಟರ್ ರಿಲೀಸ್ ಮಾಡಲು ಆಗದಿದ್ದರೂ, ಒಟಿಟಿ, ಟಿವಿ ಅಥವಾ ಯೂಟ್ಯೂಬ್ನಲ್ಲಿ ಡಬ್ ಮಾಡಿ ಬಿಡುಗಡೆ ಮಾಡುವ ಅವಕಾಶವಿದೆ. ಹೀಗಾಗಿಯೇ ಚಿತ್ರತಂಡಗಳು ಎಲ್ಲ ಭಾಷೆಗಳ ಜನರಿಗೂ ಕನೆಕ್ಟ್ ಆಗುವಂತಹ ಇಂಗ್ಲೀಷ್ ಶೀರ್ಷಿಕೆಗಳತ್ತ ಹೆಚ್ಚು ಗಮನ ಹರಿಸುತ್ತಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಟೈಟಲ್ಗಳದ್ದೇ ಕಾರುಬಾರು. ಈಗ ಈ ವಿಷಯದ ಬಗ್ಗೆ ಮಾತನಾಡಲು ಕಾರಣ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಮೂಡಿಬರುತ್ತಿರುವ "ಟಾಕ್ಸಿಕ್' ಹೊರತುಪಡಿಸಿ ಈ ತಿಂಗಳು ಬರೋಬ್ಬರಿ 35ಕ್ಕೂ ಅಧಿಕ ಆಂಗ್ಲ ಶೀರ್ಷಿಕೆ ಹೊಂದಿರುವ ಕನ್ನಡ ಸಿನಿಮಾಗಳು ಸದ್ದು ಮಾಡಿವೆ. ಕೆಲವು ರಿಲೀಸ್ ಆದರೆ, ಇನ್ನು ಕೆಲ ಹೊಸ ಆಂಗ್ಲ ಶೀರ್ಷಿಕೆಯ ಚಿತ್ರಗಳು ಘೋಷಣೆಯಾಗಿದ್ದು, ಮುಹೂರ್ತ ಆಚರಿಸಿಕೊಂಡಿವೆ. ಜತೆಗೆ ಕೆಲ ತಂಡಗಳು ಟ್ರೇಲರ್, ಧ್ವನಿಸುರಳಿ ಬಿಡುಗಡೆ ಸೇರಿ ವಿವಿಧ ಹಂತದ ಕುರಿತು ಮಾಹಿತಿ ನೀಡಿವೆ.
ಜುಲೈನಲ್ಲಿ ಒಟ್ಟು 19 ಸಿನಿಮಾಗಳು ರಿಲೀಸ್ ಆಗಿವೆ, ಆಗುತ್ತಿವೆ. ಅವುಗಳಲ್ಲಿ ಶೇಕಡ 37 ಪ್ರತಿಶತ@ ಅರ್ಥಾತ್ ಏಳು ಚಿತ್ರಗಳು ಆಂಗ್ಲ ಶೀರ್ಷಿಕೆ ಹೊಂದಿರುವುದು ವಿಶೇಷ. ಹೌದು, ಜು. 3 "ಲವ್ ಸೀಸನ್ಸ್', "ಡೆಡ್ಲಿ ಕಿಲ್ಲರ್', ಜು. 10 "ಮದರ್ ಪ್ರಾಮಿಸ್', "ಬಾಯ್ಸ್ ನೆವರ್ ಕಾಂಪ್ರಮೈಸ್' ಮತ್ತು "ಬ್ಯೂಟಿ', ಜು. 17 "ಾದರ್ಸ್ ಡೇ' ಬಿಡುಗಡೆಯಾಗಿದ್ದು, ಇದೇ ಶುಕ್ರವಾರ ಜು. 31 "ಜಾಲಿ' ಚಿತ್ರ ತೆರೆಗೆ ಬರಲಿದೆ.
ಹುಟ್ಟಿದ ದಿನ ಉಡುಗೊರೆಗಳ ಹಬ್ಬ!
ನಟ ಶಿವರಾಜಕುಮಾರ್ ಜು.1 2ರಂದು 64ನೇ ವಸಂತಕ್ಕೆ ಕಾಲಿರಿಸಿದರು. ಅಂದು ಅವರು ನಟಿಸುತ್ತಿರುವ ಸಾಲು ಸಿನಿಮಾಗಳ ಮಾಹಿತಿ ನೀಡಲಾಯಿತು. "ಘೋಸ್ಟ್' ಖ್ಯಾತಿಯ ಶ್ರೀನಿ ನಿರ್ದೇಶಿಸುತ್ತಿರುವ "ಎ ಾರ್ ಆನಂದ್', ಪವನ್ ಒಡೆಯರ್ ಆ್ಯಕ್ಷನ್&ಕಟ್ ಹೇಳುತ್ತಿರುವ "ಬೇಲ್', ಶಿವಣ್ಣ ಕ್ಯಾನ್ಸರ್ ಸೋಲಿಸಿದ ಹೋರಾಟದ ಕುರಿತ "ಸರ್ವೈವರ್' ಸಾಕ್ಷ$್ಯಚಿತ್ರ, ಹೇಮಂತ್ ರಾವ್ ನಿರ್ದೇಶಿಸುತ್ತಿರುವ "666 ಆಪರೇಷನ್ ಡ್ರೀಮ್ ಥಿಯೇಟರ್' ತಂಡಗಳು ವಿಶೇಷ ಉಡುಗೊರೆ ನೀಡಿದವು. ಜತೆಗೆ ಹೊಸ ಸಿನಿಮಾ "ಜೆಜೆ ರಾಯ್' ಘೋಷಣೆ ಕೂಡ ಮಾಡಲಾಯಿತು. ಹಾಗೇ ನಟ ಜು. 8ರಂದು ಶ್ರೀನಗರ ಕಿಟ್ಟಿ ಹುಟ್ಟುಹಬ್ಬವನ್ನು ಮೂರು ಚಿತ್ರತಂಡಗಳು ಒಟ್ಟಿಗೆ ಸೇರಿ ಆಚರಿಸಿದವು. ವಿಶೇಷ ಅಂದರೆ ಅದರಲ್ಲಿ "ಲವ್ ಕೇಸ್' ಮತ್ತು "ಮದರ್ ಲವ್' ಎರಡು ಇಂಗ್ಲೀಷ್ ಶೀರ್ಷಿಕೆಯ ಚಿತ್ರಗಳಿದ್ದವು. ನಟ ಹರೀಶ್ ರಾಜ್ ಜು. 26ರಂದು ತಮ್ಮ ಹುಟ್ಟಿದ ದಿನದಂದು "ಲವ್ ಕಾಕ್ಟೇಲ್' ಸಿನಿಮಾ ಘೋಷಿಸಿದರು.
ಇನ್ನು ಈ ತಿಂಗಳು ಕೆಲ ಹೊಸ ಸಿನಿಮಾಗಳ ಶೀರ್ಷಿಕೆ ಘೋಷಣೆ, ಮುಹೂರ್ತ ನೆರವೇರಿದೆ. "ಬೆಟಾಲಿಯನ್', "ರಾ.ರಾ. ಆರ್ಎಕ್ಸ್', ಹನ್ಸಿಕಾ ಮೊಟ್ವಾನಿ ಕಮ್ಬ್ಯಾಕ್ ಚಿತ್ರ "ಪ್ಯಾರಡಾಕ್ಸ್', "ಡೀಟಾಕ್ಸ್', ಲೂಸ್ ಮಾದ ಯೋಗಿ ಅಭಿನಯಿಸುತ್ತಿರುವ "ಾರೆವರ್', "ಆನ', "ಮೇರಿ' ನಿರ್ದೇಶಕ ಮನೋಜ್ ಪಿ. ನಡುಲಮನೆ ನಾಯಕನಾಗಿ ನಟಿಸುತ್ತಿರುವ "ಲವ್ ಥಿಯರಿ', ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಹಿಟ್ ಸಿನಿಮಾ "ಅಮೆರಿಕಾ ಅಮೆರಿಕಾ' ಸೀಕ್ವೆಲ್... ಹೀಗೆ ಬಹುತೇಕ ಚಿತ್ರಗಳು ಆಂಗ್ಲ ಶೀರ್ಷಿಕೆ ಹೊಂದಿವೆ.
ಹಾಡು, ಟ್ರೇಲರ್, ಇತ್ತೀಚಿನ ಮ್ಯಾಟರ್?
ದುನಿಯಾ ವಿಜಯ್ ನಿರ್ದೇಶನದಲ್ಲಿ ವಿನಯ್ ರಾಜಕುಮಾರ್, ಮೊನಿಷಾ ವಿಜಯ್ ನಟಿಸುತ್ತಿರುವ "ಸಿಟಿ ಲೈಟ್ಸ್', ಶಿವತೇಜಸ್ ನಿರ್ದೇಶನದಲ್ಲಿ ಅಜೇಯ್ ರಾವ್ ಮತ್ತು ಬೃಂದಾ ಆಚಾರ್ಯ ನಟಿಸುತ್ತಿರುವ "ಪಾರ್ಟನರ್', "ಜಾಕಿ 42' ಚಿತ್ರಗಳ ಹಾಡು, "ಮಿ. ಆ್ಯಂಡ್ ಮಿಸಸ್ ರಾಜಾಹುಲಿ', "ಲವ್ 2 ಲಸ್ಸಿ' ಸಿನಿಮಾಗಳ ಆಡಿಯೋ, ಪ್ರಿಯಾಂಕಾ ಉಪೇಂದ್ರ ಅಭಿನಯದ 50ನೇ ಚಿತ್ರ "ಡಿಟೆಕ್ಟಿವ್ ತೀಕ್ಷ$$$$್ಣ', "ಲ್ೈ ಟುಡೇ', "ಪಿಚ್ಚರ್' ಚಿತ್ರಗಳ ಟ್ರೇಲರ್, "ಎನ್ಎಚ್ 66' ಮತ್ತು "ಹುಬ್ಬಳ್ಳಿ ಹಂರ್ಟಸ್' ಚಿತ್ರಗಳಿಗೆ ಕುಂಬಳಕಾಯಿ, ತನುಷ್ ಶಿವಪ್ಪ ನಟಿಸುತ್ತಿರುವ "ಬಾಸ್' ವಿವಾದ, "ರೋಲೆಕ್ಸ್' ಚಿತ್ರದ ಕೋಮಲ್ ಹೊಸ ಪೋಸ್ಟರ್, "ಸೆಲೆಬ್ರಿಟಿ' ಹಾಡಿನ ಚಿತ್ರೀಕರಣ, "ನೆಕ್ಸ್ಟ್ ಲೆವೆಲ್' ತಂಡ ಸೇರಿದ ಉಪೇಂದ್ರ ಅಣ್ಣ ಸುಧೀಂದ್ರ ಮಗ ನಿರಂಜನ್... ಹೀಗೆ ಹಲವು ಇಂಗ್ಲೀಷ್ ಶೀರ್ಷಿಕೆಯ ಚಿತ್ರಗಳ ಹೊಸ ಹೊಸ ಮಾಹಿತಿ ಕೂಡ ಜುಲೈನಲ್ಲಿ ದೊರೆಯಿತು.