ಎಚ್.ಡಿ.ಕೋಟೆ: ಬೀಚನಹಳ್ಳಿ ಕಬಿನಿ ಜಲಾಶಯದ ಸುಭಾಷ್‌ಪವರ್ ಕಾರ್ಪೋರೇಷನ್‌ನವರು ಸರ್ಕಾರದ ಗಮನಕ್ಕೆ ತಾರದೆ ಬೆಲ್ ಮೌತ್ನ ಕಬ್ಬಿಣದ ದುರಸ್ತಿ ಕಾರ್ಯ ಮಾಡಿದ್ದು, ಜಲಾಶಯಕ್ಕೆ ಕಂಟಕವಾಗಲಿದೆ ಎಂದು ಕರ್ನಾಟಕ ಕಸ್ತೂರಿ ನ್ಯಾಯಪರ ವೇದಿಕೆ ಆರೋಪಿಸಿದೆ.
ಬುಧವಾರ ಜಲಾಶಯದ ಮುಂಭಾಗ ಜಮಾಯಿಸಿದ ಕಾರ್ಯಕರ್ತರು, ಜಲಾಶಯ ಲೋಡ್ ಇರುವಾಗ ವಿದ್ಯುತ್ ಉತ್ಪಾದನೆಗೆ ಮುಂದಾಗಿ ಬೆಲ್ ಮೌತ್ನ ಕಬ್ಬಿಣದ ಪೈಪು ಕಿತ್ತುಬಂದಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಾರದೆ ದುರಸ್ತಿ ಮಾಡಲಾಗಿದೆ. ಅಲ್ಲದೆ ಕಡಿಮೆ ಗುಣಮಟ್ಟದ ಕಬ್ಬಿಣ ಬಳಸಿದ್ದು, ಜಲಾಶಯಕ್ಕೆ ಕಂಟಕಪ್ರಾಯವಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಅರಿವಿದ್ದರೂ ಸರ್ಕಾರ ಯಾವುದೇ ಕ್ರಮಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ಕಾರ್ಯಕರ್ತರನ್ನು ತಡೆದ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಪೊಲೀಸರ ಅನುಮತಿ ಮೇರೆಗೆ ರೈತ ಮುಖಂಡ ಗುರುಸ್ವಾಮಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವೇದಿಕೆ ಅಧ್ಯಕ್ಷ ಗಿರೀಶ್ ಶಿವಾರ್ಚಕ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ಕಾರ್ಯಕರ್ತರಾದ ವಿಶ್ವೇಂದ್ರ, ಪ್ರಕಾಶ್, ಕಿಶೋರ್ ಇನ್ನಿತರರು ಇದ್ದರು.