ರೇಣುಕಸ್ವಾಮಿ ಕೊಲೆ ಪ್ರಕರಣ: ಮಾಫಿ ಸಾಕ್ಷಿ ಪ್ರದೋಶ್​ ಹೇಳಿದ್ದೇನು | Actor Darshan 
ನ್ಯೂಸ್

ನಟಿಯರಿಗೆ Photo ಕಳಿಸಿ ರೇಟ್ ಕೇಳಿದ್ದ ರೇಣುಕಸ್ವಾಮಿ!

2ನೇ ದಿನವಾದ ಮಂಗಳವಾರವೂ ಪ್ರದೋಷ್ ಹೇಳಿಕೆ ಮುಂದುವರಿಕೆ

ಬೆಂಗಳೂರು: ‘ಚಿತ್ರದುರ್ಗದ ರೇಣುಕಸ್ವಾಮಿ, ಆರೋಪಿ ಪವಿತ್ರಾ ಮಾತ್ರವಲ್ಲದೆ ಕೆಲ ನಟಿಯರು ಸೇರಿ ಹಲವು ಮಹಿಳೆಯರಿಗೆ ತನ್ನ ಮರ್ಮಾಂಗದ Photo ಕಳುಹಿಸಿ ಕಿರುಕುಳ ನೀಡಿದ್ದ’ ಎಂಬುದು ಆತನ ಮೊಬೈಲ್ ಪರಿಶೀಲನೆ ವೇಳೆ ಗೊತ್ತಾಗಿತ್ತು ಎಂದು ಮಾಫಿ ಸಾಕ್ಷಿ ಪ್ರದೋಷ್ ನುಡಿದಿದ್ದಾನೆ.

ರೇಣುಕಸ್ವಾಮಿ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಹೇಳಿಕೆ 2ನೇ ದಿನವಾದ ಮಂಗಳವಾರವೂ ಮುಂದುವರಿಯಿತು. ಕಾಮಾಕ್ಷಿಪಾಳ್ಯ ಪೊಲೀಸರು, ಪ್ರದೋಷ್‌ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ಪ್ರದೋಷ್, ತನ್ನ ಹೇಳಿಕೆ ಮುಂದುವರಿಸಿದ.

‘ಬೆತ್ತಲೆಯಾಗಿದ್ದ ರೇಣುಕಸ್ವಾಮಿ ಅಳುತ್ತ ನೆಲದ ಮೇಲೆ ಕೂತಿದ್ದ. ಆಗ ದರ್ಶನ್, ನನ್ನನ್ನು ಕರೆದು ರೇಣುಕಸ್ವಾಮಿ ಮೊಬೈಲ್ ಪರಿಶೀಲಿಸು ಎಂದರು. ನಾನು ಅವನ ಮೊಬೈಲ್ ತೆಗೆದುಕೊಂಡು Facebook ಮೆಸೆಂಜರ್ ತೆರೆದೆ, ಅದರಲ್ಲಿ 8ಕ್ಕೂ ಹೆಚ್ಚು ಮಹಿಳೆಯರಿಗೆ ತನ್ನ ಮರ್ಮಾಂಗದ Photo ಕಳುಹಿಸಿ, ರೇಟ್ ಎಷ್ಟು? ಎಂದು ಕೇಳಿರುವುದನ್ನು ಗಮನಿಸಿದೆ’ ಎಂದು ಪ್ರದೋಷ್ ತಿಳಿಸಿದ್ದಾನೆ.

ಆತನ ಇನ್‌ಸ್ಟಾಗ್ರಾಂನಲ್ಲಿ ಕೆಲ ನಟಿಯರಿಗೆ ತನ್ನ ಮರ್ಮಾಂಗದ Photo ಕಳುಹಿಸಿ, ಮಂಚಕ್ಕೆ ಬಾ.. ಎನ್ನುವ ಜತೆಗೆ ನಿಮ್ಮ ರೇಟ್ ಎಷ್ಟು? ಎಂದು ಕೇಳಿದ್ದ. ಈ ಪೈಕಿ ಪವಿತ್ರಾಗೆ ಹೆಚ್ಚು ಸಂದೇಶ ಕಳುಹಿಸಿದ್ದ. ಅದರಲ್ಲಿ ಪೋರ್ನ್ ವಿಡಿಯೋ, ಪೋಟೋ ಹಾಗೂ ಖಾಸಗಿ ಅಂಗದ Photo ಸಹ ಇದ್ದವು ಎಂದು ತಿಳಿಸಿದ್ದಾನೆ.

‘ಆತನ ವಾಟ್ಸ್‌ಆ್ಯಪ್‌ನಲ್ಲಿ ‘ಪವ್ವಿ’ ಎಂದು ಸೇವ್ ಆಗಿರೋ ಹೆಸರಿತ್ತು. ಅದರಲ್ಲಿ 2-3 ದಿನಗಳ ಸಂಭಾಷಣೆಯಿತ್ತು. ಅದರಲ್ಲೂ ಅದೇ ತರಹದ ಚಿತ್ರಗಳಿದ್ದವು. ನಾನು ‘ಪವ್ವಿ’ ಹೆಸರಿನ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಿದಾಗ, ಆ ನಂಬರ್ ಎ-3 ಪವನ್‌ದಾಗಿತ್ತು. ಅದರಲ್ಲಿದ್ದ ಸಂದೇಶಗಳನ್ನು ದರ್ಶನ್‌ಗೆ ಹೇಳುತ್ತಿದ್ದೆ. ಆಗ ದರ್ಶನ್, ರೇಣುಕಸ್ವಾಮಿ ಎದೆಗೆ ಮತ್ತೊಮ್ಮೆ ಒದ್ದ. ಅವನು ನೆಲಕ್ಕೆ ಉರುಳಿದ. ಇದೇ ವೇಳೆ ದರ್ಶನ್‌ನನ್ನು ಹುಡುಕಿಕೊಂಡು 11ನೇ ಆರೋಪಿ ಲಕ್ಷ್ಮಣ್ ಬಂದ. ಆಗ ದರ್ಶನ್, ಇಲ್ಲಿಗೆ ನಿವ್ಯಾಕೆ ಬಂದ್ರಿ ಎಂದು ಪ್ರಶ್ನಿಸಿದ. ಇದಾದ ಬಳಿಕ ಎಲ್ಲ ವಿಚಾರ ಲಕ್ಷ್ಮಣ್‌ಗೂ ತಿಳಿಯಿತು. ಅವನೂ ರೇಣುಕಸ್ವಾಮಿಗೆ ಕೈಯಿಂದ ಬಲವಾಗಿ ಗುದ್ದಿದ. ಆಗ ದರ್ಶನ್, ಅವನನ್ನು ಮುಟ್ಟಬೇಡಿ ಲಕ್ಷ್ಮಣ್, ಅವನಿಗೆ ‘ಏಡ್ಸ್’ ಇದೆ ಎಂದರು. ಗಾಬರಿಗೊಂಡ ಲಕ್ಷ್ಮಣ್, ರೇಣುಕಸ್ವಾಮಿಯಿಂದ ದೂರ ಸರಿದು ಕೈ ತೊಳೆದುಕೊಂಡ ಎಂದು ಪ್ರದೋಷ್ ವಿವರಿಸಿದ್ದಾನೆ.

ಭೇಟಿಯಾಗೋಣ ಬಾ

ದರ್ಶನ್ ಹೋಗುತ್ತಿದ್ದ ಕಾರನ್ನು ಹಿಂಬಾಲಿಸುತ್ತಿದ್ದೆ. ನನ್ನ ಕಾರಿನಲ್ಲಿ 3ನೇ ಆರೋಪಿ ಪವನ್ ಕೂತಿದ್ದ. ಅವನಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಇದೆಲ್ಲ ಏಕೆ ಮಾಡ್ತಿದ್ದೀಯಾ? ಅವನು ಸತ್ತರೆ, ಏನು ಮಾಡ್ತೀರಿ? ಅಂದಿದ್ದಕ್ಕೆ 3 ತಿಂಗಳು ಜೈಲಲ್ಲಿ ಇದ್ದು, ಬೇಲ್ ಮೇಲೆ ಬರುತ್ತೇನೆ ಎಂದು ತಿಳಿಸಿದ್ದ. ಬಳಿಕ ಅವನನ್ನು ಎಲ್ಲಿಂದ ಕರೆದುಕೊಂಡು ಬಂದಿದ್ದೀರಿ? ಎಂದೆ. ಪವಿತ್ರಕ್ಕಳಂತೆ ನಟಿಸಿ ಸಂದೇಶ ಕಳುಹಿಸಿದ್ದೆ. ಅವನು ತನ್ನ ಮರ್ಮಾಂಗದ Photo ಕಳಿಸಿದ್ದ. ಆಗ ನಾನು, ಭೇಟಿಯಾಗೋಣ ಬಾ’ ಎಂದೆ. ಕೂಡಲೇ ಆತ ಲೈವ್ ಲೊಕೇಷನ್ ಕಳಿಸಿದ್ದ. ಅವನು ಚಿತ್ರದುರ್ಗದಲ್ಲಿರುವುದು ಗೊತ್ತಾಯಿತು. ಎ-4 ರಾಘವೇಂದ್ರನಿಗೆ ರೇಣುಕಸ್ವಾಮಿಯನ್ನು ಕರೆತರುವಂತೆ ಹೇಳಿದ್ದೆ. ಅವರು ಕರೆದುಕೊಂಡು ಬಂದರು ಎಂದು ತಿಳಿಸಿದ. ಅಷ್ಟರಲ್ಲಿ ದರ್ಶನ್ ಅವರ ಮನೆ ಬಂತು. ಪವನ್‌ನನ್ನು ಅಲ್ಲಿ ಇಳಿಸಿ, ನಾನು ನನ್ನ ಮನೆಗೆ ಹೊರಟೆ ಎಂದು ಪ್ರದೋಷ್ ತಿಳಿಸಿದ್ದಾನೆ.

ಶೂಟ್ ಮಾಡಿಕೊಳ್ತೇನೆ ಎಂದಿದ್ದ ದರ್ಶನ್!

‘ನನ್ನ ಕಾರಿನಲ್ಲಿ ಮನೆಗೆ ಹೊರಟಿದ್ದೆ. ಆಗ ಲಕ್ಷ್ಮಣ್‌ಗೆ ೆನ್ ಮಾಡಿ ರೇಣುಕಸ್ವಾಮಿ ಹೇಗಿದ್ದಾನೆ? ಅವನಿಗೆ ಪೇನ್ ಕಿಲ್ಲರ್ ಟ್ಯಾಬ್ಲೆಟ್ ಕೊಟ್ರಾ? ಎಂದು ಕೇಳಿದೆ. ಆಗ ಲಕ್ಷ್ಮಣ್, ಆತ ಸತ್ತಿದ್ದಾನೆ ಎಂದು ತಿಳಿಸಿದ. ಈ ವಿಚಾರವನ್ನು ದರ್ಶನ್‌ಗೆ ತಿಳಿಸಿದ್ದೀರಾ? ಎಂದು ಕೇಳಿದೆ. ನಾನಂತೂ ತಿಳಿಸಲ್ಲ ಎಂದರು. ನನ್ನ ಕಾರನ್ನು ತಿರುಗಿಸಿ ದರ್ಶನ್ ಅವರ ಮನೆಗೆ ಬಂದು, ರೇಣುಕಸ್ವಾಮಿ ಸತ್ತಿರುವ ಬಗ್ಗೆ ತಿಳಿಸಿದೆ. ದರ್ಶನ್ ಆತಂಕಗೊಂಡು ನೆಲಕ್ಕೆ ಕುಸಿದ. ‘ಪ್ರದೋಷ್, ನಾನ್ ಶೂಟ್ ಮಾಡಿಕೊಳ್ತೇನೆ. ನೀವೇ ಏನಾದರೂ ಮಾಡಬೇಕು’ ಎಂದು ಮನವಿ ಮಾಡಿಕೊಂಡ. ನಾನು ಅಲ್ಲಿಂದ ಪಟ್ಟಣಗೆರೆ ಶೆಡ್‌ಗೆ ಹೊರಟೆ ಎಂದು ಪ್ರದೋಷ್ ವಿವರಿಸಿದ್ದಾನೆ.

ಕೊಲೆ ಬಳಿಕ ಪಿಎಸ್‌ಐ ಸಲಹೆ!

ಪಟ್ಟಣಗೆರೆ ಶೆಡ್ ಬಳಿ ಹೋದಾಗ, ಆರೋಪಿಗಳಾದ ಎ-11 ನಾಗರಾಜ್, ಎ-10 ವಿನಯ್, ಎ-12 ಲಕ್ಷ್ಮಣ್, ಎ-7 ಅನುಕುಮಾರ್, ಎ-6 ಜಗದೀಶ್, ಎ-8 ರವಿ, ಎ-3 ಪವನ್ ಇದ್ದರು. ನಾನು ಕಾರಿನಿಂದ ಇಳಿದು ಅವರ ಬಳಿ ಹೋದೆ. ಆಗ ಪವನ್‌ಗೆ ನಾಗರಾಜ ಬೈದು, ಇವನೇ ಎಲ್ಲರ ತಲೆಗೆ ತಂದಿಟ್ಟ ಎಂದ. ಆ ವೇಳೆ ನನಗೆ ಪರಿಚಯವಿದ್ದ ಪಿಎಸ್‌ಐ ಒಬ್ಬರಿಗೆ ೆನ್ ಮಾಡಿ, ನಮ್ಮ ಹುಡುಗರು ಹಣಕಾಸಿನ ವಿಚಾರವಾಗಿ ಹೊಡೆದಾಡಿಕೊಂಡಿದ್ದಾರೆ. ಈ ಪೈಕಿ ಒಬ್ಬ ಸತ್ತಿದ್ದಾನೆ. ಏನು ಮಾಡಬೇಕು? ಎಂದು ಕೇಳಿದೆ. ಅವರು ಸಮೀಪದ ಠಾಣೆಗೆ ಶರಣಾಗುವಂತೆ ತಿಳಿಸಿದರು. ಅದರಂತೆ ಮೂವರಿಗೆ ಶರಣಾಗಲು ಒಪ್ಪಿಸಿದೆ ಎಂದು ಮಾಫಿ ಸಾಕ್ಷಿ ತಿಳಿಸಿದ್ದಾನೆ.

₹30 ಲಕ್ಷ ಕೊಡಿ, ಸರಿ ಮಾಡುತ್ತೇವೆ!

ಕೃತ್ಯ ನಡೆದ ಸ್ಥಳದಿಂದ ಲಕ್ಷ್ಮಣ್, ನಾಗರಾಜ್ ಮತ್ತೆ ನಾನು ದರ್ಶನ್ ಮನೆಗೆ ಬಂದೆವು. ಅವರಿಗೆ ಸಮಾಧಾನ ಮಾಡಿ, ಮೂವರಿಗೆ ಶರಣಾಗಲು ತಿಳಿಸಿದ್ದೇವೆ, ಅವರೂ ಒಪ್ಪಿದ್ದಾರೆ. ಆದರೆ ಸ್ವಲ್ಪ ದುಡ್ಡು ಖರ್ಚು ಆಗಲಿದೆ. ಅಂದಾಜು 30 ಲಕ್ಷ ರೂ. ಬೇಕಾಗುತ್ತದೆ. ಏಕೆಂದರೆ ಅವರ ಮನೆಯವರಿಗೆ ಸಮಾಧಾನ ಮಾಡಬೇಕು. ಲಾಯರ್ ಖರ್ಚು ಮತ್ತು ಜೈಲಲ್ಲಿ ವ್ಯವಸ್ಥೆ ಮಾಡಿಸಬೇಕು ಎಂದು ವಿವರಿಸಿದೆ ಎಂದು ಪ್ರದೋಷ್ ಕೋರ್ಟಿಗೆ ತಿಳಿಸಿದ್ದಾನೆ.