ಬೆಂಗಳೂರು: ರೇಣುಕಸ್ವಾಮಿ ಎನ್ನುವ ವ್ಯಕ್ತಿಯೊರ್ವನ ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಸ್ನೇಹಿತೆ ಪವಿತ್ರಾ ಗೌಡ ಅವರ ಗ್ಯಾಂಗ್ ಮೇಲಿದೆ. ಸದ್ಯ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಹಾಗೂ ಅವರ ಸಹಚರರು ಇದ್ದಾರೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪವಿತ್ರಾ ಗೌಡ ಅವರು ಮೊದಲು ಸಂಜಯ್ ಸಿಂಗ್ ಎನ್ನುವವರನ್ನು ಮದುವೆಯಾಗಿದ್ದರು. ಆಮೇಲೆ ಇವರಿಗೆ ವಿಚ್ಛೇದನ ಕೊಟ್ಟ ಬಳಿಕ ನಟ ದರ್ಶನ್ ಜೊತೆ ಒಡನಾಟ ಹೊಂದಿದ್ದರು. ಪಕ್ಕಾ ಮಿಡ್ಲ್ ಕ್ಲಾಸ್ ಹುಡುಗಿಯಾಗಿದ್ದ ಪವಿತ್ರಾಗೌಡಗೆ ಸಿರಿವಂತಿಕೆಯ ಕಿರೀಟ ಸಿಕ್ಕಿದ್ದು ದರ್ಶನ್ ಭೇಟಿಯಾದ್ಮೇಲೆ ಅಂತಾ ಹಲವರು ಮಾತನಾಡಿಕೊಳ್ತಾರೆ. ಪವಿತ್ರಾ ಬಾಳಲ್ಲಿ ದರ್ಶನ್ ಬಂದ್ಮೇಲೆಯೇ ಕೋಟಿ ಕೋಟಿ ಆಸ್ತಿ ಒಡತಿಯಾಗಿದ್ದಳು. ದರ್ಶನ್ ಪರಿಚಯವಾದ್ಮೇಲೆ ಪವಿತ್ರಾಳ ಫ್ರೆಂಡ್ ಸರ್ಕಲ್ಲೇ ಬದಲಾಗಿ ಹೋಯ್ತು ಅನ್ನೋದು ಆಕೆಯ ಹತ್ತಿರದವರು ಹೇಳುವ ಮಾತು. ದರ್ಶನ್ನ ಎಲ್ಲಾ ಸ್ನೇಹಿತರು ಈಕೆಗೂ ಸ್ನೇಹಿತರಾದ್ರು. ಉದ್ಯಮ ಸಾಮ್ರಾಜ್ಯಕ್ಕೂ ಈಕೆ ಕಾಲಿಟ್ಟಳು.
ಸಾಮಾನ್ಯ ಮನೆಯ ಹುಡುಗಿಯಾಗಿದ್ದ ಪವಿತ್ರ ದರ್ಶನ್ ಪರಿಚಯದ ನಂತರ ಹತ್ತಿಪ್ಪತ್ತು ಸಾವಿರ ರೂಪಾಯಿಯ ಬ್ರ್ಯಾಂಡೆಂಡ್ ಬಟ್ಟೆಗಳನ್ನ ನಿರಾಯಾಸವಾಗಿ ಧರಿಸೋದಕ್ಕೆ ಶುರುಮಾಡಿದ್ದರು. ಲಕ್ಷ ಲಕ್ಷ ಮೌಲ್ಯದ ಒಡವೆಗಳನ್ನ ಹಾಕೋದಕ್ಕೆ ಆರಂಭಿಸಿದ್ಲು. ಇಂಡಸ್ಟ್ರಿಯ ದೊಡ್ಡ ದೊಡ್ಡ ಫ್ಯಾಮಿಲಿಗಳ ಜೊತೆಗೆ ಕನೆಕ್ಟ್ ಆಗುವ ಮೂಲಕ ತನ್ನ ಸರ್ಕಲ್ನೂ ಗಟ್ಟಿಮಾಡಿಕೊಂಡ್ಲು.
ಸಿನಿಮಾರಂಗಕ್ಕೆ ಕಾಲಿಟ್ಟಿದ್ದ ಪವಿತ್ರಾ ಗೌಡಳಿಗೆ ಲಕ್ ಅಷ್ಟೇನೂ ಕೈ ಹಿಡೀಲಿಲ್ಲ. ಸಿನಿಮಾರಂಗದಲ್ಲಿ ಸಕ್ಸಸ್ ಆಗದ ಪವಿತ್ರ ದರ್ಶನ್ ಜೊತೆ ಜೊತೆಗಿದ್ದುಕೊಂಡೇ ಉದ್ಯಮದತ್ತಲೂ ಮುಖ ಮಾಡ್ತಾರೆ. ಅದೇ ಆರ್ ಆರ್ ನಗರದಲ್ಲಿ ರೆಡ್ ಕಾರ್ಪೆಟ್ ಸ್ಟುಡಿಯೋ 777 ಹೆಸರಿನಲ್ಲಿ ಫ್ಯಾಷನ್ ಬುಟಿಕ್ಗೆ ಪವಿತ್ರಾಳೇ ಓನರ್. ಈಕೆಯ ಬುಟಿಕ್ನಲ್ಲಿ ಡಿಸೈನರ್ವೇರ್ಗಳು ಸಿಗಲಿದ್ದು, ಸಾಕಷ್ಟು ಸೆಲೆಬ್ರಿಟಿಗಳು ಇಲ್ಲಿಗೆ ಬಂದು ಬಟ್ಟೆ ಖರೀದಿ ಮಾಡ್ತಾರೆ. ಈ ಶಾಪ್ನ ಓಪನಿಂಗ್ಗೆ ಕ್ರೇಜಿ ಕ್ವೀನ್ ರಕ್ಷಿತಾ, ಅಮೂಲ್ಯ, ಸೋನಲ್ ಮಾಂಟೆರೋದಂತಹ ಖ್ಯಾತ ನಾಯಕಿಯರು ಆಗಮಿಸಿ ಸಾಥ್ ಕೊಟ್ಟಿದ್ರು. ಪವಿತ್ರಾ ಗೌಡಳ ಈ ರೆಡ್ ಕಾರ್ಪೆಟ್ ಸ್ಟುಡಿಯೋ ಓಪನ್ ಮಾಡೋದಕ್ಕೆ ದರ್ಶನ್ 30 ಲಕ್ಷ ರೂಪಾಯಿಯಷ್ಟು ಹಣ ಕೊಟ್ಟಿದ್ದರು ಅಂತಾ ಹೇಳಲಾಗುತ್ತೆ. ಮಿಕ್ಕಿದ್ದನ್ನ ಪವಿತ್ರಾ ಲೋನ್ ಮಾಡಿ ಇನ್ವೆಸ್ಟ್ ಮಾಡಿದ್ರು ಅನ್ನೋ ಮಾತಿದೆ.
ಲಕ್ಷ ಲಕ್ಷ ಬೆಲೆ ಬಾಳುವ ಕಾರು, ಒಡವೆಗಳು. ಡಿಸೈನರ್ ವೇರ್ಗಳೂ.. ಒಂದೊಂದು ಬಟ್ಟೆ, ವಾಚು, ಒಡವೆಗಳೆಲ್ಲಾ ಬ್ರ್ಯಾಂಡೆಡ್ ಹಾಗೂ ಸಖತ್ ಎಕ್ಸ್ಪೆನ್ಸಿವ್. ಅಂದಹಾಗೇ, ಪವಿತ್ರ ಗೌಡಳ ಜೀವನ ಕಳೆದ ಹತ್ತು ಹನ್ನೆರಡು ವರ್ಷಗಳ ಹಿಂದೆ ಹೀಗಿರಲಿಲ್ಲ. ಸಾಮಾನ್ಯ ಮಧ್ಯಮವರ್ಗದ ಕುಟುಂಬದ ಹೆಣ್ಣು ಮಗಳಾಗಿದ್ದ ಈಕೆ ಇಷ್ಟೊಂದು ಸೌಂಡ್ ಮಾಡಲು ಶುರುಮಾಡಿದ್ದು ಕೆಲ ವರ್ಷಗಳ ಹಿಂದಷ್ಟೇ. ರಾಣಿ ಅಂಗಡಿ ಮಾಲೀಕನ ಪುತ್ರಿ ಕೋಟಿ ಕುಳವಾಗಿದ್ದೇಗೆ ಅನ್ನೋದು ಸಖತ್ ಇಂಟರೆಸ್ಟಿಂಗ್.