ನ್ಯೂಸ್

ಇದು ‘ಡಿ‌’ಗ್ಯಾಂಗ್ ಪಾರ್ಟಿಯ ರಿ-ಕ್ರಿಯೇಟ್ ಫೋಟೋ; ಸ್ಟೋನಿ ಬ್ರೂಕ್ ಪಬ್​ನಲ್ಲಿದೆ ಸ್ಪೆಷಲ್ ಡಿ-ಬಾಸ್ ಸಫಾರಿ ರೂಮ್

ಬೆಂಗಳೂರು:  ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಹಿನ್ನಲೆಯಲ್ಲಿ ಆತನನ್ನು ಕೊಲೆ ಮಾಡಿದ್ದಾರೆ ಎನ್ನುವ ಪ್ರಕರಣದಲ್ಲಿ ನಟ ದರ್ಶನ್​ ಸೇರಿದಂತೆ 17 ಜನ ಜೈಲಿನಲ್ಲಿದ್ದಾರೆ. ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತಾಗಿ ಪೊಲೀಸರು 17 ಆರೋಪಿಗಳು.. 231 ಸಾಕ್ಷಿ.. 3991 ಪುಟಗಳಲ್ಲಿ ಇದೆ. ಕೊಲೆ ಪ್ರಕರಣದ FIR ನಲ್ಲಿ ಪವಿತ್ರಾ ಗೌಡ A1 ಮತ್ತು ದರ್ಶನ್‌ A2 ಆಗಿದ್ದರು. ಅನೇಕರು ಇದು ಬದಲಾಗಬಹುದೆಂದು ಭಾವಿಸಿದ್ದರು. ಆದರೆ ಚಾರ್ಜ್‌ ಶೀಟ್‌ ನಲ್ಲಿಯೂ ಪವಿತ್ರಾ ಗೌಡ A1 ಮತ್ತು ದರ್ಶನ್‌ A2 ಎಂದೇ ದಾಖಲಿಸಿದ್ದಾರೆ. ಎಸಿಪಿ ಚಂದನ್​​ ಕುಮಾರ್ ಹಾಗೂ ತನಿಖಾ ತಂಡ ಈ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ.

ಮೂವರು ಪ್ರತ್ಯಕ್ಷ ಸಾಕ್ಷಿದಾರರು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ ನ 8 ವರದಿಗಳು, 27 ಜನರ 164 ಹೇಳಿಕೆ, 8 ಇತರೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ, 56 ಜನ ಪೊಲೀಸರು, 59 ಪಂಚರ ಸಮಕ್ಷಮದಲ್ಲಿ ಮಹಜರು ಸೇರಿ ಈ ಪ್ರಕರಣದಲ್ಲಿ ಒಟ್ಟು 231 ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. 

ಚಾರ್ಜ್​ಶೀಟ್ ಬೆನ್ನಲ್ಲೇ ಪೊಲೀಸರ ವಿಚಾರಣೆಗೆ ಸಂಬಂಧಿಸಿದ ಕೆಲವು ಮಹತ್ವದ ವಿಚಾರಗಳು ಬಳಕಿಗೆ ಬರುತ್ತಿದೆ. ಶೆಡ್​ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಹಲ್ಲೆ ನಡೆಸಿರುವ ಫೋಟೋ ವೈರಲ್ ಬೆನ್ನಲ್ಲೇ, ಇದೀಗ ಪೊಲೀಸರು ರೀ-ಕ್ರಿಯೇಟ್ ಮಾಡಿದ ಫೋಟೋ ಒಂದು ವೈರಲ್ ಆಗಿದೆ.

ರೀ-ಕ್ರಿಯೇಟ್ ಫೋಟೋದಲ್ಲಿ ಏನಿದೆ?: ವಿನಯ್, ದರ್ಶನ್, ಚಿಕ್ಕಣ್ಣ, ಪವನ್, ನಾಗರಾಜ್ ಇತರರು ಇರೋದನ್ನು ಗಮನಿಸಬಹುದಾಗಿದೆ. ಚಿಕ್ಕಣ್ಣ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಚಿಕ್ಕಣ್ಣ ಅವರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಈ ಫೋಟೋ ಸ್ಟೋನಿ ಬ್ರೂಕ್ ಪಬ್​ ತೆಗೆದಿರುವುದಾಗಿದೆ. ಈ ಪಬ್​​ನಲ್ಲಿ ದರ್ಶನ್​ಗಾಗಿ ಮಾಡಿರುವ ಸ್ಪೆಷಲ್ ರೂಂ. ಸ್ಟೋನಿ ಬ್ರೂಕ್ ಪಬ್​ಗೆ ಬಂದಾಗ ದರ್ಶನ್ ಇರೋದು ಇಲ್ಲೇ. ಈ ಸಪರೇಟ್ ರೂಂಗೆ ಡಿ ಬಾಸ್ ಸಫಾರಿ ಎಂದು ಹೆಸರಿಡಲಾಗಿದೆ. ಸ್ಟೋನಿ ಬ್ರೂಕ್ ಪಬ್​ಗೆ ಬಂದಾಗ ದರ್ಶನ್ ಇರೋದು ಇಲ್ಲೇ. ಈ ಸಪರೇಟ್ ರೂಂಗೆ ಡಿ ಬಾಸ್ ಸಫಾರಿ ಎಂದು ಹೆಸರಿಡಲಾಗಿದೆ. ಈ ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​ ವೈರಲ್​ ಆಗಿದೆ.