ನ್ಯೂಸ್

ಆದ್ಯಾ ಜೊತೆ ಪವನ್​ ಕಲ್ಯಾಣ್​ ಸೆಲ್ಫಿ: ಮಾಜಿ ಪತ್ನಿ ಕಾಮೆಂಟ್​ ಹೀಗಿದೆ ನೋಡಿ..

ಅಮರಾವತಿ: ಆಂಧ್ರಪ್ರದೇಶದ ಕಾಕಿನಾಡದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತಮ್ಮ ಪುತ್ರಿ ಆದ್ಯಾ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಅವರ ಮಾಜಿ ಪತ್ನಿ ರೇಣು ದೇಸಾಯಿ ಈ ಫೋಟೋಗಳನ್ನು ಹಂಚಿಕೊಂಡು ಆಸಕ್ತಿದಾಯಕ ಪೋಸ್ಟ್ ಮಾಡಿದ್ದಾರೆ.

ಪವನ್​ ಹೋಗಿದ್ದ ಕಾರ್ಯಕ್ರಮಕ್ಕೆ ಪುತ್ರಿ ಆದ್ಯಾ ಹೋಗಿದ್ದಳು. ಆಗ ಪವನ್ ಕಲ್ಯಾಣ್ ತಮ್ಮ ಪುತ್ರಿ ಆದ್ಯಾ ಜೊತೆ ಸೆಲ್ಫಿ ತೆಗೆದುಕೊಂಡಿದ್ದು, ಅವರ ಜೊತೆಗಿನ ಸೆಲ್ಫಿ ವೈರಲ್ ಆಗಿದೆ. ರೇಣು ದೇಸಾಯಿ ಅವರು ತಮ್ಮ ಪುತ್ರಿಯೊಂದಿಗೆ ಉಪ ಮುಖ್ಯಮಂತ್ರಿ ಸೆಲ್ಫಿ ತೆಗೆದುಕೊಳ್ಳುವ ದೃಶ್ಯಗಳನ್ನು ನೋಡಿ ಕಾಮೆಂಟ್​ ಮಾಡಿದ್ದಾರೆ.

''ಸ್ವಾತಂತ್ರ್ಯ ದಿನಾಚರಣೆಗೆ ಅಪ್ಪನ ಜೊತೆ ಹೋಗಬೇಕಾ?'' ಎಂದು ಅದ್ಯಾ ನನ್ನನ್ನು ಕೇಳಿದಳು. ನಿನ್ನ ತಂದೆಯೊಂದಿಗೆ ಸಮಯ ಕಳೆಯಲು ಮತ್ತು ಉನ್ನತ ಹುದ್ದೆಯಲ್ಲಿರುವವರ ಜೀವನ ಹೇಗಿರುತ್ತದೆ ಎಂದು ನೋಡಲು ನನಗೆ ಸಂತೋಷವಾಗುತ್ತದೆ. ಹೋಗಿ ಬಾ ಎಂದು ತಿಳಿಸಿದ್ದೆ. ಆದ್ಯ ಅಲ್ಲಿಗೆ ಹೋಗಿದ್ದರಿಂದ ಆಕೆ ಜನರಿಗೆ ತಮ್ಮ ತಂದೆಯ ಸೇವೆಯನ್ನು ಅರ್ಥಮಾಡಿಕೊಂಡಳು. ಆಂಧ್ರ ಜನ ಇದನ್ನು ನೋಡಿ ಮೆಚ್ಚಿದ್ದಾರೆ ಎಂದು ರೇಣು ಹೇಳಿದ್ದಾರೆ.