ನ್ಯೂಸ್

ಫೆವಿಕ್ವಿಕ್​ ನಿಮ್ಮ ಚರ್ಮಕ್ಕೆ ಅಂಟಿಕೊಂಡಿದಿಯೇ? ಹಾಗಿದ್ದರೆ, ಇಲ್ಲಿದೆ ಸುಲಭ ಪರಿಹಾರ Feviquik

Feviquik : ಸಾಮಾನ್ಯವಾಗಿ ಮನೆಯಲ್ಲಿ ಏನದರೂ ಕಿತ್ತು ಹೋದರೆ, ಒಡೆದು ಹೋದಂತಹ ಸಮಯದಲ್ಲಿ ಫೆವಿಕ್ವಿಕ್​ ಗಮ್​ ಬಳಸುವುದನ್ನು ನೀವು ಮಾಡಿರುತ್ತೀರಿ. ಕೆಲವೊಮ್ಮೆ ಆತುರವೋ ಅಥವಾ ಅಚಾನಕ್​ ಆಗಿಯೋ ನಿಮ್ಮ ಕೈಯಿಗೆ ಗಮ್​ ಅಂಟುಕೊಳ್ಳಬಹುದು. ಈ ವೇಳೆ ನೀರಿನಿಂದ ತೊಳೆದರೂ ಅದು ನಿಮ್ಮ ಕೈಯನ್ನು ಬಿಡುವುದಿಲ್ಲ. ಆಗ ಏನು ಮಾಡಬೇಕೆಂದು ತೋಚದಿರಬಹುದು. ಹಾಗಾಗಿ ಈ ಸಲಹೆಗಳನ್ನು ಪಾಲಿಸಿ ಇದು ನಿಮ್ಮ ಕೈಗೆ ಅಂಟಿಕೊಂಡಿರುವ ಗಮ್​ನ್ನು ಬಿಡಿಸಲು ಸಹಾಯ ಮಾಡಬಹುದು..

1. ಬಿಸಿ ನೀರು ಮತ್ತು ಸಾಬೂನು

ಅಚಾನಕ್ಕಾಗಿ ನಿಮ್ಮ ಕೈಗೆ ಏನಾದರು ಗಮ್​ ಹತ್ತಿಕೊಂಡಿದ್ದರೆ ಮೊದಲು ನೀವು ನಿಮ್ಮ ಕೈಯನ್ನು ಬಿಸಿ ನೀರಿನಲ್ಲಿ 5 ನಿಮಿಷ ಎದ್ದಿರಿ. ನಂತರ ಯಾವುದಾದರು ಸಾಬೂನಿನಿಂದ ಕೈಯನ್ನು ಉಜ್ಜಿ ತೊಳೆಯಿರಿ. ಇದು ಗಮ್​ನ್ನು ಮೆದುಗೊಳಿಸಿ ಅಂಟನ್ನು ತೆಗೆಯಲು ಸಹಾಯ ಮಾಡುತ್ತದೆ.

2. ಅಸಿಟೋನ್​ ಅಥವಾ ನೈಲ್​ ಪಾಲಿಷ್​ ರಿಮೂವರ್

ಒಂದು ಹತ್ತಿಗೆ ಅಸಿಟೋನ್​ ಹಚ್ಚಿ ಅದನ್ನು ಗಮ್​ ಅಂಟಿಕೊಂಡಿರುವ ಭಾಗಕ್ಕೆ ಹಚ್ಚಿ 5 ನಿಮಿಷ ಉಜ್ಜಿರಿ. ಇದಾದ ನಂತರ ಯಾವುದೇ ಸಾಬಾನು ಹಾಕಿ ತೊಳೆಯಿರಿ. ಇದು ಅಂಟಿಕೊಂಡಿರುವ ಗಮ್​ನಿಂದ ಹೊರತೆಗೆಯಲು ಸಹಾಯ ಮಾಡುತ್ತದೆ. ಈ ವೇಳೆ ಬಿಸಿಲಿಗೆ ಹೋಗಬೇಡಿ ಏಕೆಂದರೆ ಇದು ಅಸಿಟೋನ್​​ಗೆ ಇರಿಟೇಟ್​ ಮಾಡಬಹುದು.

3. ವ್ಯಾಸಲಿನ್​ ತೈಲ

ಗಮ್​ ಅಂಟಿಕೊಂಡ ಜಾಗಕ್ಕೆ ವ್ಯಾಸಲಿನ್​ ಅಥವಾ ತರಕಾರಿ ಎಣ್ಣೆಯನ್ನು ಸಿಂಪಡಿಸಿ 5 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ಗಮ್​ನ್ನು ಬಿಡಿಸಲು ಸಹಾಯ ಮಾಡುತ್ತದೆ. ಈ ವೇಳೆ ಸೂರ್ಯನ ಶಾಖದಿಂದ ದೂರ ಇರಿ. ಇಲ್ಲದಿದ್ದರೆ ಗಮ್​​ನಿಂದ ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

4. ಉಪ್ಪು ಮತ್ತು ನೀರಿನ ಮಿಶ್ರಣ

ಒಂದು ಚಮಚ ಉಪ್ಪನ್ನು ಕೈಯಲ್ಲಿ ಇಟ್ಟುಕೊಂಡು ನೀರನ್ನು ಸೇರಿಸಿ ಮಿಶ್ರಣವನ್ನು ಮಾಡಿಕೊಂಡು ನಂತರ ಯಾವ ಭಾಗದಲ್ಲಿ ಗಮ್​ ಅಂಟಿಕೊಂಡಿದಿಯೋ ಆ ಭಾಗಕ್ಕೆ ಸುರಿದು 3-4 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. ಇದು ಗಮ್​ನ್ನು ಚರ್ಮದಿಂದ ಬಿಡಿಸಲು ಸಹಾಯ ಮಾಡುತ್ತದೆ.

5. ಮೃದು ಸ್ಕ್ರಬ್​

ನಿಮ್ಮ ಚರ್ಮಕ್ಕೆ ಗಮ್​ ಅಂಟಿಕೊಂಡ ನಂತರ ಮೆತ್ತನೆಯ ಬ್ರಷ್​ನಿಂದ 3 ನಿಮಿಷ ಉಜ್ಜಿರಿ ಇದು ಚರ್ಮದಿಂದ ಗಮ್​ನ್ನು ತೆಗೆಯಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ