ನ್ಯೂಸ್

ಮಹಿಳೆಯರ ಮೈಗ್ರೇನ್ ಸಮಸ್ಯೆಗೆ ಪರಿಹಾರವೇನು?

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರನ್ನು ಬಹುವಾಗಿ ಕಾಡ್ತಾ ಇರೋ ಸಮಸ್ಯೆ ಮೈಗ್ರೇನ್​. ಹಿಂದಿನ ಕಾಲದಲ್ಲಿ ಇದು ವಯಸ್ಕ ಮಹಿಳೆಯರಲ್ಲಷ್ಟೇ ಕಂಡುಬರುತ್ತಿತ್ತು. ಈಗ 12 ವರ್ಷ ವಯಸ್ಸಿನ ಹೆಣ್ಮಗುವಿಗೂ ಈ ಆರೋಗ್ಯ ಸಮಸ್ಯೆ ಕಾಡುವುದು ಕಂಡು ಬರುತ್ತಿದೆ. ಇದನ್ನು ಅರ್ಧ ತಲೆನೋವು ಎಂದೂ ಹೇಳ್ತಾರೆ. ಯಾರಿಗೇ ಆದರೂ ತಲೆನೋವು ಕಾಣಿಸ್ತು ಅಂತಾದ್ರೆ ಕೂಡಲೇ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಲ್ಲಿ ಏನೂ ಸಮಸ್ಯೆ ಇಲ್ಲ ಎಂದಾದಾಗ ಕಂಪ್ಯೂಟರ್, ಮೊಬೈಲ್ ಸ್ಕ್ರೀನ್ ಟೈಮಿಂಗ್ ಬಗ್ಗೆ ಗಮನಹರಿಸಬೇಕು. ಹೆಚ್ಚು ಸಮಯ ಅದನ್ನು ಬಳಸುತ್ತಿದ್ದರೆ ಅದನ್ನು ಕಡಿಮೆ ಮಾಡಬೇಕು ಎಂದು ಆಯುರ್ವೇದ ವೈದ್ಯೆ ಡಾ.ಚಂದ್ರಕಲಾ ಪುತ್ರನ್ ಹೇಳಿದ್ದಾರೆ.

ನಮ್ಮ ಆರೋಗ್ಯದ ಪೂರ್ಣ ಮಾಹಿತಿ ನಮಲ್ಲಿ ಇರಬೇಕು. ಅಜೀರ್ಣತೆ, ಅಸಿಡಿಟಿ, ನಿದ್ರಾಹೀನತೆಗಳು ಇದ್ದಾಗಲೂ ಮೈಗ್ರೇನ್ ಉಂಟಾಗಬಹುದು. ತುಂಬಾ ಹೆಚ್ಚು ಯೋಚನೆ ಅಥವಾ ಚಿಂತೆ ಮಾಡಿದಾಗಲೂ, ತೀವ್ರ ದುಃಖ, ಶೋಕಕ್ಕೆ ಒಳಗಾದಾಗ, ಟೆನ್ಶನ್ ಆದಾಗಲು ಕೂಡ ಅರ್ಧ ತಲೆ ನೋವು ಕಾಣಿಸಿಕೊಳ್ಳಬಹುದು. ಇದಲ್ಲದೆ, ತುಂಬ ಹೆಣ್ಮಕ್ಕಳಿಗೆ ಋತುಸ್ರಾವದ ಸಂದರ್ಭದಲ್ಲಿ ನೋವು ಕಾಣಿಸುತ್ತದೆ. ಋತುಸ್ರಾವ ಅವಧಿ ಮುಗಿದ ಕೂಡಲೇ ನೋವೂ ಮರೆಯಾಗಬೇಕು. ಹಾಗೇ ಆಗಿಲ್ಲ ಅಂತ ಅಂದ್ರೆ, ಆಗ ಅಗತ್ಯ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ಡಾ.ಚಂದ್ರಕಲಾ ಪುತ್ರನ್ ವಿವರಿಸಿದ್ದಾರೆ. ಮೈಗ್ರೇನ್ ಸಂಬಂಧಿಸಿ ಡಾ.ಚಂದ್ರಕಲಾ ಅವರು ಈ ಬಗ್ಗೆ ಇನ್ನಷ್ಟು ವಿವರಣೆ ನೀಡಿದ್ದು, ಅದನ್ನು ಕೇಳಲು ವಿಡಿಯೋ ಕ್ಲಿಕ್ ಮಾಡಿ. (ದಿಗ್ವಿಜಯ ನ್ಯೂಸ್)