ನ್ಯೂಸ್

ದಾಖಲೆ ಲಾಭ ಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್; 3 ತಿಂಗಳಲ್ಲಿ 26,994 ಕೋಟಿ ರೂ. ಪ್ರಾಫಿಟ್; ಶೇ. 78ರಷ್ಟು ಬೆಳವಣಿಗೆ

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಶುಕ್ರವಾರ ಪ್ರಸಕ್ತ ವರ್ಷದ ಮೊದಲ ತ್ರೖೆಮಾಸಿಕ ಅವಧಿಯ ಆರ್ಥಿಕ ಫಲಿತಾಂಶವನ್ನು ಪ್ರಕಟಿಸಿದೆ. ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ 26,994 ಕೋಟಿ ರೂ. ಲಾಭ ಗಳಿಸಿದ್ದು, ಇದು ಈವರೆಗಿನ ಅತ್ಯಧಿಕ ತ್ರೖೆಮಾಸಿಕ ಲಾಭವಾಗಿದೆ. ಹಿಂದಿನ ವರ್ಷದ ಇದೇ ಅವಧಿಗಿಂತ ಇದು ಶೇ. 78.3ರಷ್ಟು ಬೆಳವಣಿಗೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿ 15,138 ಕೋಟಿ ರೂ. ಲಾಭ ಗಳಿಸಿತ್ತು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ನಿವ್ವಳ ಲಾಭವು ಜನವರಿಯಿಂದ ಮಾರ್ಚ್​ವರೆಗಿನ ತ್ರೖೆಮಾಸಿಕದಲ್ಲಿ ಗಳಿಸಿದ 19,407 ಕೋಟಿ ರೂ.ಗೆ ಹೋಲಿಸಿದರೆ ಶೇ. 39ರಷ್ಟು ಹೆಚ್ಚಾಗಿದೆ. ರಿಟೇಲ್ ಮತ್ತು ದೂರಸಂಪರ್ಕ ಕ್ಷೇತ್ರಗಳಲ್ಲಿನ ಏರಿಕೆಯನ್ನು ಕಂಪನಿ ಕಾಯ್ದುಕೊಂಡಿದೆ. ಜಿಯೋಗೆ ಅದರ ಗ್ರಾಹಕರ ಸಂಖ್ಯೆಯ ಏರಿಕೆಯಿಂದ ಲಾಭವಾಗಿದ್ದರೆ; ಅಂಗಡಿಗಳ ವಿಸõತ ಜಾಲದಲ್ಲಿ ಹೆಚ್ಚಿನ ಗ್ರಾಹಕರ ಆಗಮನದಿಂದ ರಿಟೇಲ್ ವ್ಯವಹಾರ ಲಾಭ ಮಾಡಿದೆ. ಕಾರ್ಯಾಚರಣೆಯಿಂದ ಬಂದ ಆದಾಯ ಹಿಂದಿನ ವರ್ಷದ ಇದೇ ತ್ರೖೆಮಾಸಿಕದಲ್ಲಿ ಆಗಿದ್ದ 2.36 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇ. 5.26ರಷ್ಟು ಏರಿಕೆಯಾಗಿ 2.48 ಲಕ್ಷ ಕೋಟಿ ರೂ.ಗೆ ತಲುಪಿದೆ. ಕಚ್ಚಾ ತೈಲ ಬೆಲೆ ಕುಸಿತದಿಂದಾಗಿ ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ವ್ಯವಹಾರ ವಾರ್ಷಿಕವಾಗಿ ಶೇ. 1.5ರಷ್ಟು ಕಡಿಮೆಯಾಗಿದೆ.