ಆರ್.ಎಸ್.ಎಸ್.ಸಂಘಟನೆಗೆ ಅಪಾರ ಕಳ್ಳ ದುಡ್ಡು ಬರುತ್ತಿದ್ದು, ನೋಂದಣಿ ಮಾಡಿಸಿದರೆ ಲೆಕ್ಕ ಕೊಡಬೇಕಾಗುತ್ತದೆ ಎಂದು ಅವರು ಸಂಸ್ಥೆಯನ್ನು ನೋಂದಣಿ ಮಾಡಿಸುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.
ನಗರದಲ್ಲಿ ಶನಿವಾರ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯನ್ನು ನೋಂದಣಿ ಮಾಡಿಸಲ್ಲ ಎನ್ನುವ ಆರ್‌ಎಸ್‌ಎಸ್‌ನವರನ್ನು ಭಂಡರು ಎನ್ನಬೇಕು. ಕಾರಣ ಅವರಿಗೆ ಸಂವಿಧಾನದ ಅರಿವು ಇದೆಯಾ? ಗೌರವ ಇದೆಯಾ? ಅವರಿಗೆ ಸಂವಿಧಾನ, ಕಾನೂನು ಬೇಡವಾಗಿದೆ ಎಂದು ಹರಿಹಾಯ್ದರು.
ಯಾವುದೇ ಒಂದು ಸಂಘಟನೆಗೆ ಹೆಸರು, ನೋಂದಣಿ ಇರಬೇಕು. ನಮ್ಮ ದೇಶದ ಕೆಲವು ಸಂಘಟನೆಗಳಿಗೆ ವಿದೇಶದಿಂದ ಹಣ ಬರುವುದನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಬಿಲ್ ಪಾಸು ಮಾಡಿದೆ. ಅದೇ ತಮ್ಮ ಪಕ್ಷಕ್ಕೆ ಬರುವ ಹಣ ಯಾವುದು? ದೇಶಕ್ಕೆ ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ ನೂರು ವರ್ಷದ ಇತಿಹಾಸ ಕಾಂಗ್ರೆಸ್ ಪಕ್ಷದ ಆರ್ಥಿಕ ಪರಿಸ್ಥಿತಿ ನೋಡಿ, ಅದೇ ೧೨ ವರ್ಷ ಆಡಳಿತ ನಡೆಸಿರುವ ಬಿಜೆಪಿ ಅಕೌಂಟ್‌ನಲ್ಲಿ ಎಷ್ಟು ಹಣ ಇದೆ ನೋಡಿ. ಅವರಿಗೆ ಕಳ್ಳ ದುಡ್ಡು ಮುಚ್ಚಿಹಾಕಲು ಈ ಬಿಜೆಪಿ, ಆರ್‌ಎಸ್‌ಎಸ್‌ನವರು ನೋಂದಣಿ ಬೇಡ ಎನ್ನುತ್ತಿದ್ದಾರೆ ಎಂದರು.
ನಾನು ಮಂತ್ರಿ ಆಗಿದ್ದ ಸಹಿಸಲು ಆಗುತ್ತಿಲ್ಲ :
ಇನ್ನು ದಲಿತ ಸಮುದಾಯದ ನಿಷೇಽತ ಪದ ಪ್ರಯೋಗ ಮಾಡಿರುವ ವಿಡಿಯೋ ವೈರಲ್ ಬಗ್ಗೆ, ಅದು ಎರಡು ವರ್ಷ ಹಿಂದಿನದ್ದು ಇದ್ದು, ಅದನ್ನು ತಿರುಚಿದ್ದಾರೆ. ಒಂದು ಗುಂಪು, ಪಟ್ಟಭದ್ರ ಹಿತಾಸಕ್ತಿಗಳು ನನ್ನ ವಿರುದ್ಧ ಸಂಚು ಮಾಡುತ್ತಿದ್ದಾರೆ. ನನ್ನ ಬೆಳವಣಿಗೆ ಮತ್ತು ನಾನು ಮಂತ್ರಿ ಆಗಿದ್ದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಕುತಂತ್ರಿಗಳು ಎಂದ ಬಳಿಕ ಅಲ್ಲಿ ನಮ್ಮ ಪಕ್ಷದವರು, ಬೇರೆಯವರು ಇರಬಹುದು. ಅವರು ಮಂತ್ರಿ ಆಗಿದ್ದಾಗ ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ನಾನು ದ್ವೇಷವನ್ನು ಮಾಡಲ್ಲ. ನನಗೆ ರಾಜ್ಯ ಸರ್ಕಾರ ಜವಾಬ್ದಾರಿ ನೀಡಿದೆ. ಜನರು ಮತ್ತು ಈ ಭಾಗದ ಅಭಿವೃದ್ಧಿ ಪಡಿಸಬೇಕು ಅದನ್ನು ಮಾಡುತ್ತೇನೆ ಎಂದು ಹೇಳಿದರು.
ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ :
ಸಣ್ಣ ಕೈಗಾರಿಕೆ ಸಚಿವನಾಗಿ ಬಾಗಲಕೋಟೆ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿ, ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ಸ್ವಂತ ಉದ್ದಿಮೆ ಆರಂಭಿಸಲು ಆಸಕ್ತರು ಮುಂದೆ ಬರಬೇಕು. ಇಳಕಲ್ಲ ನಗರದಲ್ಲಿ ಟೆಕ್ಸಟೈಲ್ ಪಾರ್ಕ್ಗೆ ಈಗಾಗಲೇ ಭೂಮಿ ಗುರುತಿಸಿದ್ದು, ಪಿಪಿಟಿ ಮಾದರಿಯಲ್ಲಿ ನಿರ್ಮಾಣ ಮಾಡುವ ಗುರಿ ಇದೆ ಎಂದು ತಿಳಿಸಿದರು.
ಪಕ್ಷದ ಕಾರ್ಯಕರ್ತರಿಗೆ ಅಽಕಾರ ನೀಡುವ ನಿಟ್ಟಿನಲ್ಲಿ ಈಗಾಗಲೇ ಒಂದೊAದು ವಿಧಾನಸಭಾ ಕ್ಷೇತ್ರದಿಂದ ಮೂರು ಜನರ ಹೆಸರು ಕಳುಹಿಸಲಾಗಿದೆ. ಅವರಿಗೆ ಆದಷ್ಟು ಬೇಗ ವಿವಿಧ ನಿಗಮ, ಮಂಡಳಿ ಸೇರಿದಂತೆ ಅವಕಾಶ ಇರುವ ಕಡೆಗೆ ಅಽಕಾರ ನೀಡಲಾಗುವುದು ಎಂದರು.
ಮುಖ್ಯಮAತ್ರಿಗಳ ಆದೇಶದಂತೆ ಈಗಾಗಲೇ ಬರ ವೀಕ್ಷಣೆ ಮಾಡಿ, ಸರ್ಕಾರಕ್ಕೆ ವಾಸ್ತವ ವರದಿ ಸಲ್ಲಿಸಲಾಗಿದೆ. ಬರ ಘೋಷಣೆ ಮಾಡಲು ಕೆಲ ನಿಯಮಗಳು ಇವೆ. ಅವುಗಳನ್ನು ಆಧರಿಸಿ ಘೋಷಣೆ ಮಾಡಬೇಕಾಗುತ್ತದೆ. ಇನ್ನು ಕಳೆದ ವರ್ಷ ವಿಮೆ ಪರಿಹಾರ ಇನ್ನು ಬಂದಿಲ್ಲ ಎನ್ನುವುದು ತಮ್ಮ ಗಮನಕ್ಕೆ ಇದೆ. ಮೊದಲು ಆ ವಿಮಾ ಕಂಪನಿಗಳಿAದ ಪರಿಹಾರ ಕೊಡೆಸುವ ಕಡೆಗೆ ಗಮನ ಹರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯುಕೆಪಿಗೆ ಈಗಾಗಲೇ ಪರಿಹಾರದ ಬೆಲೆ ನಿಗದಿ ಪಡಿಸಿ, ಚೆಕ್ ವಿತರಣೆ ಮಾಡಲಾಗುತ್ತಿದೆ. ಪರಿಹಾರಕ್ಕೆ ಅನುದಾನ ತರುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.