ನ್ಯೂಸ್

ಚಾರ್ ಧಾಮ್ ಯಾತ್ರೆಗೆ ನೋಂದಣಿ

ಬಾಬುಪ್ರಸಾದ್​ ಮೋಡಿಸ್​

ಡೆಹ್ರಾಡೂನ್: ಪ್ರಸಕ್ತ ವರ್ಷದ ಚಾರ್ ಧಾಮ್ ಯಾತ್ರೆಗೆ ನೋಂದಣಿ ಆರಂಭವಾಗಿದ್ದು, ಆಧಾರ್ ನೋಂದಣಿ ಮತ್ತು ದೃಢೀಕರಣ ಕಡ್ಡಾಯಗೊಳಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರ ಗುರುವಾರ ಹೇಳಿದೆ.

ಭಕ್ತರಿಗೆ ಉತ್ತಮ ಸೌಲಭ್ಯ ಮತ್ತು ಸುಗಮ ದರ್ಶನ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಆಧಾರ್ ನೋಂದಣಿಯನ್ನು ಕಡ್ಡಾಯ ಮಾಡಲಾಗಿದೆ. ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಂಡು, ನಂತರ ನಿಗದಿತ ಸ್ಥಳದಲ್ಲಿ ಟೋಕನ್ ಪಡೆದು ಯಾತ್ರೆ ಕೈಗೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.

ಪ್ರಯಾಣಕ್ಕೂ ಮುನ್ನ ಆಧಾರ್ ದೃಢೀಕೃತ ನೋಂದಣಿ ಕಡ್ಡಾಯವಾಗಿದೆ. ನೋಂದಣಿಯಲ್ಲಿ ಸರಿಯಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಸಾಕಷ್ಟು ದಪ್ಪನೆಯ ಬಟ್ಟೆ, ಛತ್ರಿ, ಕೋಟ್ ಇತ್ಯಾದಿಗಳನ್ನು ಭಕ್ತರು ಹೊಂದಿರಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ನಿಖರವಾದ ಆರೋಗ್ಯ ಮಾಹಿತಿಯನ್ನು ನೀಡಬೇಕು. ಹಿರಿಯ ನಾಗರಿಕರು ಪ್ರಯಾಣಕ್ಕೂ ಮುನ್ನ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. heliyatra.irctc.co.in ನಿಂದ ಹೆಲಿಕಾಪ್ಟರ್ ಟಿಕೆಟ್​ಗಳನ್ನು ಬುಕ್ ಮಾಡಬಹುದು ಎಂದು ಉತ್ತರಾಖಂಡದ ಸರ್ಕಾರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.