ಭದ್ರಾವತಿ ಸಿಂಗನಮನೆಯಲ್ಲಿ ಭದ್ರಾ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಕಾರ್ಮಿಕರ ದಿನವನ್ನು ಆಚರಿಸಿದರು. ಮಾದೇಶ್, ಮುರುಗೇಶ್, ಸರವಣ, ದಾಮೋದರ್ ಇತರರಿದ್ದರು.  
ನ್ಯೂಸ್

ಸೌಲಭ್ಯಕ್ಕಾಗಿ ನೋಂದಣಿ ಮಾಡಿಕೊಳ್ಳಿ

ಶಿವಕುಮಾರ ಎಸ್.ಪಿ.

ಭದ್ರಾವತಿ: ತಾಲೂಕಿನ ಸಿಂಗನಮನೆ, ತಾವರೆಘಟ್ಟ ಹಾಗೂ ಕಂಬದಾಳ್ ಹೊಸೂರು ಗ್ರಾಪಂಗಳ ವ್ಯಾಪ್ತಿಯ ಭದ್ರಾ ಕಟ್ಟಡ ಕಾರ್ಮಿಕರ ಸಂಘದಿಂದ ಗುರುವಾರ ಕಾರ್ಮಿಕರ ದಿನವನ್ನು ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಾದೇಶ್, ಸರ್ಕಾರ ಕಟ್ಟಡ ಕಾರ್ಮಿಕರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ. ಪ್ರತಿಯೊಬ್ಬರೂ ಸಂಘದಲ್ಲಿ ನೋಂದಣಿ ಮಾಡಿಸಿಕೊಂಡು ಯೋಜನೆಗಳ ಲಾಭ ಪಡೆಯಬೇಕು. ಮಕ್ಕಳಿಗೆ ಹಾಗೂ ಇಡಿ ಕುಟುಂಬಕ್ಕೆ ಆರೋಗ್ಯ ವಿಮೆ ಸೌಲಭ್ಯ, ಮಕ್ಕಳ ಶಿಕ್ಷಣಕ್ಕೆ ಸಾಲ ಸೌಲಭ್ಯ ದೊರೆಯುತ್ತಿದೆ. ಅದರ ಮೂಲಕ ಮಕ್ಕಳ ಭವಿಷ್ಯ ರೂಪಿಸಿಕೊಡುವಂತೆ ಕರೆ ನೀಡಿದರು.

ಉಪಾಧ್ಯಕ್ಷ ಸರವಣ, ದಾಮೋದರ್, ಮೋಹನ್, ಪುಟ್ಟರಾಜು, ಬಗರ್‌ಹುಕುಂ ಸಮಿತಿ ಸದಸ್ಯ ಮುರುಗೇಶ್, ಶಶಿಕುಮಾರ್, ಸುಬ್ಬಣ್ಣ, ಮಂಜುನಾಥ, ಶಫಿ, ಶಿವಣ್ಣ, ಶ್ರೀನಿವಾಸ್ ಇತರರಿದ್ದರು.