ನ್ಯೂಸ್

ರೆಫ್ರಿಜರೇಷನ್​ ತರಬೇತಿ ಶಿಬಿರ ಆಯೋಜನೆ

Haveri - Kariyappa Aralikatti

ಹಾವೇರಿ: ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಕೆನರಾ ಬ್ಯಾಂಕ್​ ದೇಶಪಾಂಡೆ ಆರ್​ ಸೆಟ್​ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗೆ ಮೇ 16ರಿಂದ ಉಚಿತವಾಗಿ ರೆಫ್ರಿಜರೇಷನ್​ ಮತ್ತು ಏರ ಕಂಡಿಷನಿಂಗ್​ ತರಬೇತಿ ಆಯೋಜಿಸಿದೆ.

ತರಬೇತಿಯು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿರುತ್ತದೆ. ಅಭ್ಯಥಿರ್ಗಳು 18 ರಿಂದ 45 ವರ್ಷದೊಳಗಿರಬೇಕು. ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ಅಭ್ಯಥಿರ್ಗಳು ತಮ್ಮ ಸ್ವ ವಿವರಗಳೊಂದಿಗೆ ನಿರ್ದೇಶಕರು, ಕೆನರಾ ಬ್ಯಾಂಕ್​ ದೇಶಪಾಂಡೆ ಆರ್​ಸೆಟ್​ ಸಂಸ್ಥೆ, ಹಳಿಯಾಳ ಉತ್ತರ ಕನ್ನಡ ಜಿಲ್ಲೆ ಈ ವಿಳಾಸಕ್ಕೆ ಅಜಿರ್ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.