ನ್ಯೂಸ್

ರಾಜ್ಯದಲ್ಲಿ ತಗ್ಗಿದ ರಸ್ತೆ ಅಪಘಾತ

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವು- ನೋವಿನ ಸಂಖ್ಯೆ ಕೊಂಚ ಇಳಿಮುಖವಾಗಿದೆ. 2023ರಲ್ಲಿ ಪ್ರತಿದಿನ 33 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಆ ಸಂಖ್ಯೆ ಈಗ 26ಕ್ಕೆ ಇಳಿಕೆ ಆಗಿರುವುದು ಸಮಧಾನಕರ ವಿಷಯವಾಗಿದೆ.

2023ರ ಜನವರಿಂದಯಿಂದ ಸೆಪ್ಟೆಂಬರ್‌ವರೆಗೆ 9,123 ಮಂದಿ ರಸ್ತೆ ಅಪಘಾತಕ್ಕೆ ಬಲಿ ಆಗಿದ್ದರು. 2024ರ ಸೆ. 30ರ ವರೆಗೆ 8,388 ಸಾವು ಸಂಭವಿಸಿವೆ. ಅಂದರೆ 735 ಸಾವಿನ ಸಂಖ್ಯೆ ಇಳಿಮುಖವಾಗಿದೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸಾವಿನ ಸಂಖ್ಯೆಯಲ್ಲಿ ಏರುಪೇರಿನ ಬಗ್ಗೆ ಕಾದು ನೋಡಬೇಕಾಗಿದೆ.

ಸೆಪ್ಟೆಂಬರ್‌ನಲ್ಲಿ 792 ಸಾವು ಮತ್ತು 2,476 ಮಂದಿ ಗಾಯಗೊಂಡಿದ್ದರು. ಈ ಪೈಕಿ 292 (ಶೇ.37) ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾಣ ಬಿಟ್ಟಿದ್ದರೆ, 4,224 (ಶೇ.36) ಮಂದಿಗೆ ಗಾಯವಾಗಿದೆ. ಅಂದರೆ ರಾಜ್ಯದಲ್ಲಿ ವಾಹನಗಳ ಸಂಖ್ಯೆಯಲ್ಲಿ ದಿನೇದಿನೆ ಏರಿಕೆ ಕಾಣುತ್ತಿದೆ. 2023-24ರಲ್ಲಿ 3.03 ಕೋಟಿ ಇದ್ದ ವಾಹನಗಳು 2024-25ರಲ್ಲಿ 3.27 ಕೋಟಿಗೆ ಏರಿಕೆಯಾಗಿದೆ. ಆದರೂ ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖ ಕಂಡಿರುವುದು ಗಮನಾರ್ಹ.

ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ರಸ್ತೆ ಅಪಘಾತ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ನೈಸರ್ಗಿಕ ಕಾರಣಗಳು ಹೆಚ್ಚಾಗಿರುತ್ತದೆ. ಚಾಲಕ, ಸವಾರರು ಮದ್ಯ ಸೇವಿಸಿ ವಾಹನ ಚಲಾಯಿಸುವುದು, ಮಳೆಯಲ್ಲಿ ಬ್ರೇಕ್ ೇಲ್, ರಸ್ತೆ ಹಾಳಾಗುವುದು ಇನ್ನಿತರ ಕಾರಣಗಳಿಂದ ಅವಘಡಗಳು ಸಂಭವಿಸುತ್ತವೆ. ಈ 2 ತಿಂಗಳಲ್ಲಿ ಸಾವು- ನೋವಿನ ಬಗ್ಗೆ ವಿಶ್ಲೇಷಣೆ ಕಷ್ಟಸಾಧ್ಯವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಪ್ರಸ್ತುತ ಮೊದಲ 9 ತಿಂಗಳಲ್ಲಿ ರಸ್ತೆ ಅಪಘಾತ ಇಳಿಮುಖವಾಗಲು ಕೆಲ ಕಾರ್ಯಕ್ರಮಗಳು ಮತ್ತು ಕಟ್ಟುನಿಟ್ಟಿನ ಕ್ರಮಗಳು ಕಾರಣವಾಗಿವೆ. ಹೆಚ್ಚು ಅಪಘಾತ ಸಂಭವಿಸುತ್ತಿದ್ದ ಸ್ಪಾಟ್‌ಗಳನ್ನು ಅಲ್ಪಾ ವಧಿಯಲ್ಲಿ ಅಭಿವೃದ್ಧಿಪಡಿಸಿ ರಸ್ತೆ ಅಪಘಾತ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.

ಅದೇ ರೀತಿಯಾಗಿ ರಾಮನಗರ, ಬೆಳಗಾವಿ, ವಿಜಯನಗರ, ತುಮಕೂರು ಸೇರಿ ಕೆಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದು ಕಾರ್ಯಾಚರಣೆಗೆ ಇಳಿದು ವಾಹನ ಚಾಲಕ/ ಸವಾರರಿಗೆ ಜಾಗೃತಿ ಮೂಡಿಸುವುದು ಮತ್ತು ಸ್ಪಾಟ್‌ಗಳನ್ನು ಅಭಿವೃದ್ಧಿಪಡಿಸಿರುವುದು ಉತ್ತಮ ಕೆಲಸವಾಗಿದೆ. ಇದಲ್ಲದೆ, ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ಆಲ್ಕೋಮೀಟರ್‌ಗಳು ಇರಲಿಲ್ಲ. ಇದೀಗ ರಾಜ್ಯ ವ್ಯಾಪಿ ವಿಸ್ತರಿಸಲಾಗಿದೆ. ಜತೆಗೆ ಅತಿವೇಗದ ಚಾಲನೆ ತಪಾಸಣೆ ಸಲುವಾಗಿ ವಿಶೇಷ ಕ್ಯಾಮರಾಗಳ ಇರುವ ಯಂತ್ರಗಳನ್ನು ಕೊಡಲಾಗಿದೆ.

ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯಲ್ಲಿ ಎಟಿಎಂಸಿ ತಂತ್ರಜ್ಞಾನ ಅಳವಡಿಸಿದ್ದು, ಶಿಸ್ತುಪಥ ಉಲ್ಲಂಘನೆ, ಅತಿವೇಗದ ಚಾಲನೆ ಮಾಡುವ ವಾಹನಗಳ ವಿರುದ್ಧ ಕೇಸ್ ದಾಖಲಿಸಲಾಗುತ್ತಿದೆ. ಕಡ್ಡಾಯವಾಗಿ ಶೇ.10 ರಸ್ತೆಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘನೆ ಮಾಡುವರ ವಿರುದ್ಧ ಕೇಸ್ ದಾಖಲಿಸಿ ದಂಡ ವಸೂಲಿ ಮಾಡುವ ಕ್ರಮ ಕೈಗೊಳ್ಳಬೇಕಾಗಿದೆ. ಹಾಗಾಗಿ ರಾಜ್ಯದಲ್ಲಿ ಕೊಂಚ ಅಪಘಾತ ಇಳಿಮುಖವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾಹನ ಚಾಲಕ/ ಸವಾರರ ಗಮನಕ್ಕೆ

* ಮಳೆ ಜತೆಗೆ ಚಳಿಯೂ ಶುರುವಾಗಲಿದ್ದು, ಹೆಡ್‌ಲೈಟ್ ಬಗ್ಗೆ ಎಚ್ಚರ

* ಚಳಿ ಎಂದು ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ತಪ್ಪು

* ತುಂತುರು ಮಳೆ ಕಾರಣ ವಾಹನ ಬ್ರೇಕ್ ಪರೀಕ್ಷೆ ಮಾಡಿಕೊಳ್ಳಿ

* ಬೆಳಗಿನ ಜಾವ 2ರಿಂದ 6 ಗಂಟೆ ವರೆಗೆ ವಿಶ್ರಾಂತಿ ಒಳಿತು

* ದೂರ ಪ್ರಯಾಣಕ್ಕೆ ಇಬ್ಬರು ಚಾಲಕರು ಇದ್ದರೆ ಉತ್ತಮ

ರಾಜ್ಯದ ರಸ್ತೆ ಅಪಘಾತಗಳಲ್ಲಿ ಸಾವಿನ ಅಂಕಿ-ಅಂಶ:

------------------------------

ತಿಂಗಳು 2022 -2023 -2024

------------------------------

ಜನವರಿ 1,033 -1,053 -1,076

ೆಬ್ರವರಿ 1,000 -1,030- 1,031

ಮಾರ್ಚ್ 1,022- 1,013- 962

ಏಪ್ರಿಲ್ 1,013 -1,014 -1,054

ಮೇ 1,155 -1,201 -1,012

ಜೂನ್ 1,006- 1,059- 860

ಜುಲೈ 867- 862 -800

ಆಗಸ್ಟ್ 900 -914 -801

ಸೆಪ್ಟೆಂಬರ್ 823- 977- 792

ಅಕ್ಟೋಬರ್ 915 -1,060

ನವೆಂಬರ್ 921 -1,039

ಡಿಸೆಂಬರ್ 1,047- 1,105

==========================

ಒಟ್ಟು 11,702-- 12,321-- 8,388 (ಸೆ.30ಕ್ಕೆ)