ದೆಹಲಿ: ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದಿರುವ ಪ್ರಮುಖ ರೆಡ್ಮಿ ಕಂಪನಿಯು ಶೀಘ್ರದಲ್ಲೇ ಮತ್ತೊಂದು ಸ್ಮಾರ್ಟ್ಫೋನ್ನ್ನು ಬಿಡುಗಡೆ ಮಾಡಲಿದ್ದು, ಮೊಬೈಲ್ ಪ್ರೀಯರೆಲ್ಲರೂ ಈ ಫೋನ್ಗಾಗಿ ಕಾತುರದಿಂದ ಬಿಡುಗಡೆಯಾಗುವುದನ್ನು ನೋಡುತ್ತಿದ್ದಾರೆ.
ರೆಡ್ಮಿ ನೋಟ್ ಸರಣಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದ ನಂತರ ಮೊಬೈಲ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕಂಪನಿಯು ಕೆಲ ದಿನಗಳ ಹಿಂದೆ ರೆಡ್ಮಿ ನೋಟ್ 12 ಸರಣಿಗಳನ್ನು ಬಿಡುಗಡಗೊಳಿಸಿತ್ತು. ಇದರ ಬೆನ್ನಲ್ಲೆ ರೆಡ್ಮಿ ನೋಟ್ 13 ಸರಣಿಯನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದ ಹೇಳಲಾಗಿದೆ. Redmi Note 13 ಸರಣಿಯ ಸ್ಮಾರ್ಟ್‌ಫೋನ್‌ಗಳು Redmi Note 13, Redmi Note 13 Pro, Redmi Note 13 Pro+ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿರುತ್ತವೆ. ಆದರೆ ಕಂಪನಿಯು ಇದನ್ನು ಅಕ್ಟೋಬರ್ ಕೊನೆಯ ವಾರದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಿದೆಯಂತೆ.
ಇದನ್ನೂ ಓದಿ: ಪತಿ ಸುಖವಾಗಿರಲೆಂದು ಜಾಮೀನು ಕೊಡಿಸಿದ ಪತ್ನಿ: ಗುಂಡಿಕ್ಕಿ ಆಕೆಯ ಪ್ರಾಣ ತೆಗೆದ ಗಂಡ..
ಕಂಪನಿಯು ಅಧಿಕೃತವಾಗಿ ಈ ಸ್ಮಾರ್ಟ್‌ಫೋನ್ ಕುರಿತಾಗಿ ಯಾವುದೇ ವಿಶೇಷತೆಗಳ ಬಗ್ಗೆ ಹೇಳದಿದ್ದರೂ. ರೆಡ್ಮಿ ನೋಟ್ 12 ಪ್ರೋ ಪ್ಲಸ್ನಂತೆ, ರೆಡ್ಮಿ ನೋಟ್ 13 ಪ್ರೋ ಪ್ಲಸ್ ಹಿಂಭಾಗದಲ್ಲಿ 200MP ಪ್ರಾಥಮಿಕ ಕ್ಯಾಮರಾದೊಂದಿಗೆ ಬರಲಿದೆ. ಹಿಂಭಾಗದ ಫ್ರೇಮ್ ಇನ್ನೂ ಎರಡು ಕ್ಯಾಮೆರಾ ಸಂವೇದಕಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ.
ಹೆಚ್ಚುವರಿಯಾಗಿ, ಲಾಸ್ಟ್ ಎಲ್ಇಡಿ ಫ್ಲ್ಯಾಷ್ ಲೈಟ್ ಸೆಟಪ್ ಹೊಂದಿರುವುದರೆ ಜತೆಗೆ 4x ಇನ್-ಸೆನ್ಸರ್ ಜೂಮ್ ಬೆಂಬಲ ಆಯ್ಕೆಯೊಂದಿಗೆ ಬರಲಿದೆ. ಅಲ್ಲದೇ, 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿರಲಿದ್ದು, ಕರ್ವ್ಡ್-ಎಡ್ಜ್ ಡಿಸ್ಪ್ಲೇ ಒಳಗೊಂಡಿರಲಿದೆ ಎನ್ನಲಾಗಿದೆ. ಉಳಿದಂತೆ ಫಿಂಗರ್ಪ್ರಿಂಟ್ ಸೆನ್ಸಾರ್, 6 ಇಂಚಿನ ಪರದೆ, ಚಾರ್ಜಿಂಗ್ಗಾಗಿ ಸಿ ಪೋರ್ಟ್ ಮತ್ತು 5ಜಿ ಬೆಂಬಲವನ್ನು ಇದು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.(ಏಜೆನ್ಸೀಸ್)