ನ್ಯೂಸ್

ಪೇಟಿಎಂನಿಂದ 20 ಸಾವಿರ ಸಿಬ್ಬಂದಿ ನೇಮಕ

ನವದೆಹಲಿ: ದೇಶದಾದ್ಯಂತ 20,000ಕ್ಕೂ ಹೆಚ್ಚು ಫೀಲ್ಡ್ ಮಾರಾಟ ಪ್ರತಿನಿಧಿಗಳನ್ನು ನೇಮಿಸಿಕೊಳ್ಳಲು ಪೇಟಿಎಂ ನಿರ್ಧರಿಸಿದೆ. ಇನೀಷಿಯಲ್ ಪಬ್ಲಿಕ್ ಆಫರಿಂಗ್​ಗೂ (ಐಪಿಒ) ಮುಂಚೆಯೇ ನೇಮಕಕ್ಕೆ ಕಂಪನಿ ಮುಂದಾಗಿದೆ.

ಪ್ರಮುಖ ಹಣಕಾಸು ತಂತ್ರಜ್ಞಾನ (ಫಿನ್​ಟೆಕ್) ಕಂಪನಿಯಾದ ಪೇಟಿಎಂ, ತನ್ನ ಪ್ರತಿಸ್ಪರ್ಧಿಗಳಾದ ಫೋನ್​ಪೇ ಮತ್ತು ಗೂಗಲ್ ಪೇ ಒಡ್ಡುತ್ತಿರುವ ಸ್ಪರ್ಧೆಯ ಹಿನ್ನೆಲೆಯಲ್ಲಿ ತನ್ನ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡಲು ಹೊರಟಿದೆ. ಅದರ ಭಾಗವಾಗಿ ಸಾವಿರಾರು ಜನರ ನೇಮಕದ ನಿರ್ಧಾರ ಕೈಗೊಂಡಿದೆ. ಹೊಸದಾಗಿ ನೇಮಕಗೊಳ್ಳುವ ಮಾರಾಟ ಪ್ರತಿನಿಧಿಗಳಿಗೆ ಮಾಸಿಕ ಸುಮಾರು 35,000 ರೂಪಾಯಿ ವೇತನ ಸಿಗುವ ಸಾಧ್ಯತೆಯಿದೆ.