ಬೆಂಗಳೂರು: ಅತಿ ಹಿಂದುಳಿದ 70 ಜಾತಿ-ಉಪಜಾತಿಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸು ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಮನವಿ ಸ್ವೀಕರಿಸಿ ಮಾತಾಡಿದ ಸಚಿವರು, ಬಲಾಢ್ಯ ಸಮುದಾಯಕ್ಕೂ ಅಹವಾಲು ಕೊಡಲು ಅವಕಾಶ ವಿದೆ. ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ತೀರ್ಮಾನ ಮಾಡುತ್ತದೆ. ಹಿಂದುಳಿದ ಆಯೋಗದ ಅಧ್ಯಕ್ಷರು ಹಲವು ಸಮುದಾಯದ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದಾರೆ ಎಂದರು.
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ವಿಚಾರವಾಗಿ 15 ದಿನದಲ್ಲಿ ಸಭೆ ಕರೆದು ಚರ್ಚೆ ಮಾಡುತ್ತೇವೆ. ಅತಿ ಧಾರುಣ ಪರಿಸ್ಥಿತಿಯಲ್ಲಿರುವ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶತಾಯಗತಾಯ ಶ್ರಮಿಸುತ್ತೇನೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಲೇಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದರು.
ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತಾಗಿ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ಅರಸು ಅವರ ಭೂಸುಧಾರಣೆ ಯೋಜನೆಯ ಫಲಾನುಭವಿ ನಾನು. ಅವತ್ತು ನನಗೆ 2 ಎಕರೆ ಭೂಮಿ ಸಿಕ್ಕಿತ್ತು ಎಂದು ಸ್ಮರಿಸಿಕೊಂಡರು.
ಪಂಚಮಸಾಲಿ 2ಎ ಗೆ ಬೇಡ: ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಪಿ.ಆರ್ ರಮೇಶ್, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ ನರೇಂದ್ರ ಬಾಬು, ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ ಮತ್ತಿತರರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಅತಿ ಹಿಂದುಳಿದವರಿಗೆ ಘೊರ ಅನ್ಯಾಯವಾಗುತ್ತದೆ. ಹೀಗಾಗಿ ಅವರನ್ನು ಸೇರಿಸಬಾರದೆಂದು ಒಕ್ಕೂರಲಿನಿಂದ ಸಚಿವರ ಬಳಿ ಮನವಿ ಮಾಡಿಕೊಂಡರು.
ದೇವರಾಜ ಅರಸು ಅವರ ಮೊಮ್ಮಗ ಸೂರಜ್, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಆಚಾರಿ, ನಿವೃತ್ತ ಐಎಎಸ್ ಅಧಿಕಾರಿ ಎಸ್. ಪುಟ್ಟಸ್ವಾಮಿ, ಕೆಎಎಸ್ ಅಧಿಕಾರಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆಎನ್ ಲಿಂಗಪ್ಪ, ಮಾಜಿ ಶಾಸಕ ತಿಪ್ಪಣ್ಣ ಮತ್ತಿತರರು ಉಪಸ್ಥಿತರಿದ್ದರು.
ಐದು ಪ್ರಮುಖ ಬೇಡಿಕೆಗಳು:
ಪಟ್ಟಿಗೆ ಶಿಫಾರಸಾದ ಜಾತಿಗಳು: ಮುತ್ರಚ, ಬೈರಾಗಿ, ಡವರಿ, ಗುಸಾಯಿ, ಹೆಳೊವ, ನಂದಿ ವಾಲಾ, ಬುಂಡೆ ಬೆಸ್ತರ್, ಕಬ್ಬೆರ/ ಕಬ್ಬೆರ್, ಖಾರವಿ/ ಕೊಂಕಣ ಖಾರವಿ, ಕಿಲ್ಲಿ ಕ್ಯಾತ, ಎಲೆ ಗಾಲ, ಗೌರಿಗ, ಪಂಗ್ಯೂಲ್, ಪಂಗ್ಯೂಸಲ್, ಜೀನಗಾರ, ಥೀವರ್, ಕಲರಿ, ಕಲ್ಲಾರ್, ಕಲ್ಲುಕುಟಿಗ ಉಪ್ಪಾರ, ಪಾಡಿ, ಗೌಳಿ, ಭಂಜರಿ, ಬ್ರಿಂಜರಿ, ವಂಜರ, ವಾಂಜಾರಿ, ಲಾಂಬೈದ್, ಗೋರ್ /ಗೊರಿಯ, ರಿಮೋಷಿ, ಕಾಡುಗೊಲ್ಲ, ಹಟ್ಟಿ ಗೊಲ್ಲ, ಸಕಜವಡು, ಹಾಲ ಕ್ಷತ್ರಿಯ, ಇಳವನ್, ತಿಯನ್/ತಿಯ್ಯ, ಕುಂಬಾರ, ಕ್ಷೌರಿಕ, ನಾಡಿಗ್, ಅಗ್ನಿವಂಶ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿಯ, ಗೆಜ್ಜಗಾರ, ತರುವನ್, ಘಾಡ್ಸಿ, ಬೋಗರ್, ಕುಟುಮ, ಕುಲವಾಡಿ ಮರಾಠಿ, ಪೊಲೆದವ/ಪೊಲೆದವರು, ಮಿರಲ್, ಸ್ವಕುಲಸಾಲಿ/ಸ್ವಕುಲಸಾಲೆ, ಜ್ಯೋತಿನಗರ್/ ಜ್ಯೋತಿನಗರ ವ್ಯಾಸ, ಬಾಂದಿ, ಬೊಲಹಲ್ಲಾಳ, ಬಲ್ಲಾಳ, ಭಾಟಿಯಾಲ್, ಭಾಟ್ಟಿಯ, ಕೊಟೈಯಾರ, ಕುಮಾರ ಕ್ಷತ್ರಿಯ, ಸಾರುಗಾರ(ನಾರ್ತ್ಕೆನರಾ), ಸರ್ವೆಗಾರ(ಸೌತ್ ಕೆನರಾ), ಕ್ಷತ್ರಿಯ/ಕ್ಷತ್ರಿ, ರಾಜು ಕ್ಷತ್ರಿಯ, ರಾಜು-ರಾಜು, ರಾಜು ವರ್/ರಾಜವರ್/ ರಾಚೇವರ್, ತುಳು, ತುಳುವ, ಅರೆಕ್ಷತ್ರಿ, ಅರೆ ಮರಾತ, ಆರ್ಯ ಮರಾಠ, ಆರ್ಯ, ಆರ್ಯರು, ಕೊಂಕಣ, ಮರಾಠ ಮತ್ತು ಕ್ಷತ್ರಿಯ ಮರಾಠ.