ಮಳೆಗಾಲ ಮತ್ತು ಚಳಿಗಾಲದಲ್ಲಿ ಬಿಸಿಬಿಸಿಯಾಗಿ ಏನಾದರೂ ತಿಂಡಿ ತಿನ್ನಲು ಇಷ್ಟಪಡುತ್ತಾರೆ. ತಯಾರಿಸುವ ತಿನಿಸು ಆರೋಗ್ಯಕರವಾಗಿದ್ದಾರೆ ಇನ್ನೂ ಸಂತೋಷವಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಪಾಲಕ್ ಸೊಪ್ಪಿನಿಂದ ಮಾಡುವ ತಿಂಡಿ ರೋಗ್ಯ ಪ್ರಯೋಜನಗಳು ಸಿಗುತ್ತವೆ. ಎಲ್ಲರಿಗೂ ಇಷ್ಟವಾಗುವಂಥ ರುಚಿಕರ ಪಾಲಕ್ ಸಮೋಸಾ ಮಾಡುವುದ ಸುಲಭ. ಇಲ್ಲಿದೆ ಮಾಡುವ ವಿಧಾನ
- 1 ಕಪ್ ಹಿಟ್ಟು
- ರುಚಿಗೆ ಉಪ್ಪು
- ಪಾಲಕ್ ಸೊಪ್ಪು
- ಹಸಿರು ಮೆಣಸಿನಕಾಯಿ
- 1/2 ಕಪ್ ಹಸಿರು ಬಟಾಣಿ
- 1 ಹಚ್ಚಿದ ಈರುಳ್ಳಿ
- 4 ಬೇಯಿಸಿದ ಆಲೂಗಡ್ಡೆ
- 1 ಟೀಸ್ಪೂನ್ ತುರಿದ ಶುಂಠಿ
- 1/2 ಟೀಸ್ಪೂನ್ ಜೀರಿಗೆ
- ಮಸಾಲಾ ಪುಡಿಗಳು (ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲಾ ಪುಡಿ, ಒಣ ಮಾವಿನ ಪುಡಿ) ಕೊತ್ತಂಬರಿಸೊಪ್ಪು
- ಅಡುಗೆ ಎಣ್ಣೆ
- ಪಾಲಕವನ್ನು ಚೆನ್ನಾಗಿ ತೊಳೆದು ಸ್ವಚ್ಚಗೊಳಿಸಿದ ಬಳಿಕ ಮಿಕ್ಸಿ ಜಾರ್ನಲ್ಲಿ ಪಾಲಕ್ ಮತ್ತು ಹಸಿಮೆಣಸಿಕಾಯಿ ಜತೆಗೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ದು ಬಟ್ಟಲಿನಲ್ಲಿ 1 ಕಪ್ ಹಿಟ್ಟು, ಉಪ್ಪು, ಬಿಸಿ ಎಣ್ಣೆ ಮತ್ತು ಪಾಲಾಕ್ ಪೇಸ್ಟ್ ಅನ್ನು ಸೇರಿಸಿ ಚಪಾತಿ ಹಿಟ್ಟಿನಂತೆ ಮಾಡಿ.
- ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ನಂತರ ಜೀರಿಗೆ, ಕರಿಬೇವಿನ ಎಲೆ, ಕಸೂರಿ ಮೇಥಿ, ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ತುರಿದ ಶುಂಠಿ ಸೇರಿಸಿ ಫ್ರೈ ಮಾಡಿ. ಸ್ವಲ್ಪ ಸಮಯದ ನಂತರ ಹಸಿರು ಬಟಾಣಿ, ಈರುಳ್ಳಿ ಸೇರಿಸಿ ಮಧ್ಯಮ ಉರಿಯಲ್ಲಿ 2 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಬೇಯಿಸಿದ ಆಲೂಗೆಡ್ಡೆ ಸೇರಿಸಿ ಮಿಶ್ರಣ ಮಾಡಿ. 5 ನಿಮಿಷಗಳ ಕಾಲ ಫ್ರೈ ಮಾಡಿ, ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲಾ ಪುಡಿ, ಒಣ ಮಾವಿನ ಪುಡಿ ಸೇರಿಸಿ ಮಿಶ್ರಣ ಮಾಡಿ. ನಂತರ ಸ್ವಲ್ಪ ತಣ್ಣಗಾಗಲು ಬಿಡಿ.
- ಸಿದ್ಧಪಡಿಸಿರು ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಚಪಾತಿ ಹದಕ್ಕೆ ಲಟಿಸಿ ಕೋನ್ ಆಕಾರದಲ್ಲಿ ತಯಾರಿಸಿ. ನಂತರ ಕೋನ್ ಒಳಗೆ ತಯಾರಿಸಿರುವ ಮಿಶ್ರಣವನ್ನು ಹಾಕಿ. ಅದರ ಅಂಚುಗಳ ಮೇಲೆ ನೀರನ್ನು ಲೇಪಿಸಿ ಮುಚ್ಚಿ. ನಂತರ ಕಾದಿರುವ ಅಡುಗೆ ಎಣ್ಣೆಯಲ್ಲಿ ಹಾಕಿ ಕರಿಯಿರಿ. ನಂತರ ಹಸಿರು ಚಟ್ನಿ ಅಥವಾ ಟೊಮ್ಯೊಟೊ ಸಾಸ್ನೊಂದಿಗೆ ಸವಿಯಲು ನೀಡಿ.