ಬೆಂಗಳೂರು: ಫ್ರೈಡ್ ರೈಸ್ ಯಾರಿಗೆ ಇಷ್ಟವಿಲ್ಲ ಹೇಳಿ?, ಇದೊಂದು ಜನಪ್ರಿಯ ಖಾದ್ಯವಾಗಿದ್ದು, ಪ್ರಪಂಚದಾದ್ಯಂತ ಸೇವಿಸುತ್ತಾರೆ. ಹಾಗಾದರೆ ರುಚಿಕರವಾದ ತರಕಾರಿ ಫ್ರೈಡ್ ರೈಸ್ ಮಾಡುವುದು ಹೇಗೆಂದು ನೀವೂ ಚಿಂತಿಸುತ್ತಿದ್ದರೆ, ಅದನ್ನು ಮಾಡುವ ಸುಲಭವಾದ ವಿಧಾನ ಇಲ್ಲಿದೆ ನೋಡಿ...
ಬೇಕಾಗುವ ಪದಾರ್ಥಗಳು
2 ಕಪ್ ಅಕ್ಕಿ
1 ಕಪ್ ಹೆಚ್ಚಿಟ್ಟುಕೊಂಡ ಮಿಶ್ರ ತರಕಾರಿಗಳು (ಕ್ಯಾರೆಟ್, ಬಟಾಣಿ, ಬೆಲ್ ಪೆಪರ್, ಕಾರ್ನ್, ಇತ್ಯಾದಿ)
1/2 ಕಪ್ ಹೆಚ್ಚಿಟ್ಟುಕೊಂಡ ಈರುಳ್ಳಿ
2-3 ಎಸಳು ಬೆಳ್ಳುಳ್ಳಿ
2-3 ಚಮಚ ಅಡುಗೆ ಎಣ್ಣೆ
2 ಮೊಟ್ಟೆಗಳು
2 ಟೀಸ್ಪೂನ್ ಸೋಯಾ ಸಾಸ್
ರುಚಿಗೆ ಉಪ್ಪು ಮತ್ತು ಕಾಳುಮೆಣಸು
ಮಾಡುವ ವಿಧಾನ
* ದೊಡ್ಡ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮೊಟ್ಟೆಗಳನ್ನು ಒಡೆದು ಇದಕ್ಕೆ ಸೇರಿಸಿ. ನಂತರ ಬಾಣಲೆಯಿಂದ ತೆಗೆದು, ಪಕ್ಕಕ್ಕೆ ಇರಿಸಿ.
* ಅದೇ ಬಾಣಲೆಗೆ ಇನ್ನೊಂದು ಚಮಚ ಎಣ್ಣೆಯನ್ನು ಹಾಕಿ. ಹೆಚ್ಚಿದ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
*ನಂತರ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಸೇರಿಸಿ, ಅವು ಮೃದುವಾಗಿ ಗರಿಗರಿಯಾಗುವವರೆಗೆ ಬೆರೆಸಿ. ಇವೆಲ್ಲವನ್ನೂ ಒಂದು ಬದಿಗೆ ಎತ್ತಿಟ್ಟುಕೊಳ್ಳಿ.
*ಮತ್ತೆ ಉಳಿದ ಎಣ್ಣೆಯನ್ನು ಹಾಕಿ, ಬೇಯಿಸಿದ ಅನ್ನವನ್ನು ಸೇರಿಸಿ. ಇದಕ್ಕೆ ಪಕ್ಕದಲ್ಲಿ ಎತ್ತಿಟ್ಟುಕೊಂಡ ತರಕಾರಿ ಬೆರೆಸಿ ಚೆನ್ನಾಗಿ ಫ್ರೈ ಮಾಡಿ.
*ಸೋಯಾ ಸಾಸ್ ಅನ್ನು ಅನ್ನದ ಮೇಲೆ ಹಾಕಿ. ಸಾಸ್ ಸಮವಾಗಿ ಮಿಶ್ರಣವಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
*ಅನ್ನಕ್ಕೆ ರುಚಿಗೆ ತಕ್ಕಂತೆ ಉಪ್ಪು ಮತ್ತು ಕಾಳುಮೆಣಸು ಸೇರಿಸಿ.
*ಕೊನೆಯಲ್ಲಿ ಬಾಣಲೆಯಲ್ಲಿ ಬೇಯಿಸಿಟ್ಟುಕೊಂಡ ಹುರಿದ ಮೊಟ್ಟೆ ಸೇರಿಸಿ, ಎಲ್ಲಾ ಪದಾರ್ಥಗಳನ್ನೂ ಮಿಶ್ರಣ ಮಾಡಿ.
* ಆ ನಂತರ ವೆಜಿಟೇಬಲ್ ಫ್ರೈಡ್ ರೈಸ್ ಅನ್ನು ಕತ್ತರಿಸಿದ ಸ್ಪ್ರಿಂಗ್ ಆನಿಯನ್ ನೊಂದಿಗೆ ಅಲಂಕರಿಸಿ ರುಚಿಯನ್ನು ಹೆಚ್ಚಿಸಿ.