ನ್ಯೂಸ್

ಹಂಗಾಮಿ ಅಧ್ಯಕ್ಷರಾಗಿ ಸುಧಾ ಅಧಿಕಾರ ಸ್ವೀಕಾರ

ಎಚ್.ಡಿ.ಕೋಟೆ: ತಾಲೂಕು ಪಂಚಾಯಿತಿಯ ಹಂಗಾಮಿ ಅಧ್ಯಕ್ಷರಾಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಬಸವರಾಜು ಬುಧವಾರ ಅಧಿಕಾರ ಸ್ವೀಕರಿಸಿದರು.

ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಇಒ ರಾಮಲಿಂಗಯ್ಯ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಎಚ್.ಡಿ.ಕೋಟೆಯಿಂದ ಸರಗೂರು ಬೇರ್ಪಟ್ಟು ಹೊಸ ತಾಲೂಕು ರಚನೆಯಾದ ನಂತರ ಸರಗೂರಿಗೆ 8 ತಾಪಂ ಕ್ಷೇತ್ರ ಸೇರ್ಪಡೆಯಾಗಿದ್ದು, ಅಧ್ಯಕ್ಷೆಯಾಗಿದ್ದ ಮಂಜುಳಾ ದೇವಣ್ಣ ಹಾಗೂ ಉಪಾಧ್ಯಕ್ಷರ ಕ್ಷೇತ್ರವೂ ಸರಗೂರಿಗೆ ಸೇರ್ಪಡೆಯಾಗಿವೆ.

ಈಗ ಎಚ್.ಡಿ.ಕೋಟೆ ತಾಲೂಕಿಗೆ 16 ಕ್ಷೇತ್ರ ಉಳಿದಿದ್ದು, ಖಾಲಿಯಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಬಸವರಾಜು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ಇದೇ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಮ್, ತಾಲೂಕು ಪಂಚಾಯಿತಿ ಸದಸ್ಯರಾದ ಟಿ.ವೆಂಕಟೇಶ್, ಶಂಭೇಗೌಡ, ರವಿ, ರಾಜಣ್ಣ, ನಂಜೇಗೌಡ, ಮುಖಂಡರಾದ ಬಸವರಾಜು, ಚಾ.ಶಿವಕುಮಾರ್ ಇದ್ದರು.