ನ್ಯೂಸ್

ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೆ ಶಿಕ್ಷಣ ವೆಚ್ಚ ಭರಿಸಲು ಸಿದ್ಧ

ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೆ ಶಿಕ್ಷಣ ವೆಚ್ಚ ಭರಿಸಲು ಸಿದ್ಧ

ಟೇಕಲ್​: ಪ್ರತಿಯೊಬ್ಬ ವಿದ್ಯಾರ್ಥಿಯೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್​ ಅಂಬೇಡ್ಕರ್​ ಅವರ ತತ್ವಾದರ್ಶಗಳನ್ನು ಅನುಸರಿಸಿ ಅವರಂತೆ ವಿದ್ಯಾರ್ಥಿ ಜೀವನ ರೂಪಿಸಿಕೊಳ್ಳುವ ಮೂಲಕ ಪ್ರತಿಭಾವಂತರಾಗಬೇಕು ಎಂದು ಯುವ ಮುಖಂಡ, ಸಮಾಜ ಸೇವಕ, ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್​.ವೆಂಕಟೇಶಗೌಡ ತಿಳಿಸಿದರು.

ಮಾಲೂರು ತಾಲೂಕು ಟೇಕಲ್​ ವ್ಯಾಪ್ತಿಯ ಕೆಜಿ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 160ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಸಮವಸ ವಿತರಿಸಿ ಮಾತನಾಡಿದ ಅವರು, ಟೇಕಲ್​ ಸರ್ಕಾರಿ ಪ್ರೌಢಶಾಲೆ ಹಾಗೂ ಕೆಜಿ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಅತಿ ಹೆಚ್ಚು ಅಂಕ ಪಡೆದು ಶಾಲೆಗೆ ಕೀರ್ತಿ ತಂದರೆ ಅಂತಹವರ ಮುಂದಿನ ಉನ್ನತ ಶಿಣಕ್ಕೆ ಸ್ವಂತ ಖರ್ಚಿನಲ್ಲಿ ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಿಗೆ ದಾಖಲಿಸಿ ಅವರು ಓದುವವರೆಗೂ ಸಂಪೂರ್ಣ ವೆಚ್ಚ ಭರಿಸುವುದಾಗಿ ೂಷಿಸಿದರು. ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಮತ್ತು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ಹಲವು ಸೇವೆ ನೀಡಲಾಗುತ್ತಿದೆ ಎಂದರು.

ಕೆಜಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯ ಎಂ.ಮುರುಗೇಶ್​ ವಹಿಸಿದ್ದರು. ಟೇಕಲ್​ ಶಾಲಾ ಮಕ್ಕಳು ಜಿಲ್ಲಾ ಮಟ್ಟದಿಂದ ವಾಲಿಬಾಲ್​ ಪಂದ್ಯಾವಳಿಯಲ್ಲಿ ರಾಜ್ಯ ವಿಭಾಗಿಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಅವರೆಲ್ಲರೂ ತುಮಕೂರಿಗೆ ಹೋಗಲಿದ್ದು, ಅದರ ವೆಚ್ಚವನ್ನು ಕೆ.ಎಸ್​.ವೆಂಕಟೇಶ್​ಗೌಡರು ಸಭೆಯಲ್ಲಿ ಶಾಲಾ ಶಿಕರಿಗೆ ನೀಡಿದರು.

ಮಾಸ್ತಿ ಬ್ಲಾಕ್​ ಕಾಂಗ್ರೆಸ್​ ಅಧ್ಯ ಎಸ್​.ಜಿ.ರಾಮಮೂರ್ತಿ, ಕೆಜಿಹಳ್ಳಿ ಗ್ರಾಪಂ ಉಪಾಧೆ ಮಮತಾ ಶಶಿಧರ್​, ಮುಖ್ಯಶಿಕಿ ಅನುಪಮಾ, ಸಹ ಶಿಕರಾದ ಶಶಿಧರ್​, ಚಂದ್ರಪ್ಪ, ವಿಜಯ ರೇಷ್ಮಾ, ಸುರೇಶ್​, ಚಲಪತಿಗೌಡ, ದೈಹಿಕ ಶಿಕ್ಷಣ ಶಿಕರಾದ ವೈ. ವೆಂಕಟೇಶ್​, ಮುರುಗೇಂದ್ರ, ಪ್ರೌಢಶಾಲೆ ಎಸ್​ಡಿಎಂಸಿ ಅಧ್ಯ ಎ.ಕೆ. ವೆಂಕಟೇಶ್​, ಶಿಕ ಸಂಪಂಗಿ, ಮುಖಂಡರಾದ ಪ್ರಕಾಶ್​, ತಿಮ್ಮರಾಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಶಂಕರಾಚಾರಿ, ಯುವ ಮುಖಂಡರಾದ ಶಶಿ, ಶಿವರಾಜ್​, ಮುನಿರಾಜು, ಮುರಳಿ, ವೆಂಕಟೇಶಪ್ಪ ಇದ್ದರು